Don't Miss!
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- News
ತೀಸ್ತಾ ಸೆಟಲ್ವಾಡ್ ಯಾರು? ಈಕೆಯ ಹೋರಾಟ, ವಿವಾದಗಳ ಸುತ್ತಮುತ್ತ...
- Finance
ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- Sports
ರಣಜಿ ಫೈನಲ್: ರಜತ್ ಪಾಟೀದಾರ್ ಶತಕ, ಮುಂಬೈ ವಿರುದ್ಧ ಮಧ್ಯಪ್ರದೇಶ ಮೇಲುಗೈ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Technology
ಜುಲೈ ತಿಂಗಳಿನಲ್ಲಿ ಲಾಂಚ್ ಆಗಲಿರುವ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ಗಳು!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ದರ್ಶನ್, ಸುದೀಪ್, ಉಪೇಂದ್ರ 'ರೈ' ಸಿನಿಮಾ ಮಾಡಲು ಒಪ್ಪಲಿಲ್ಲ-ರವಿ ಶ್ರೀವತ್ಸ
ಮುತ್ತಪ್ಪ ರೈ ಬಯೋಪಿಕ್ ಸಿನಿಮಾ ಮಾತುಗಳು ಈ ಹಿಂದಿನಿಂದಲೇ ಕೇಳಿ ಬರುತ್ತಿದೆ. ಹಲವು ಭಾರಿ ಈ ಸಿನಿಮಾ ಮಾಡಲು ಮುಂದಾಗುತ್ತಿದ್ದ ನಿರ್ದೇಶಕರು ಕೈ ಬಿಡುತ್ತಿದ್ದರು. ಮೊದಲು ಮುತ್ತಪ್ಪ ರೈ ಸಿನಿಮಾ ಮಾಡಬೇಕು ಎಂದುಕೊಂಡವರು ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಮತ್ತು ರವಿ ಬೆಳಗೆರೆ. 'ರೈ' ಎಂಬ ಹೆಸರಲ್ಲಿ ಸಿನಿಮಾ ಸೆಟ್ಟೇರಿತ್ತಾದರೂ ಆದು ಕಾರ್ಯರೂಪಕ್ಕೆ ಬರಲಿಲ್ಲ. ಅದು ಯಾಕೆ ಎಂಬ ಬಗ್ಗೆ ಸ್ವತಃ ರವಿ ಶ್ರೀವತ್ಸ ಫಿಲ್ಮಿ ಬೀಟ್ ಕನ್ನಡ ಜೊತೆ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹೌದು, ರೈ ಸಿನಿಮಾದ ಕೆಲಸ 2002ರಲ್ಲಿ ಆರಂಭ ಆಗುತ್ತೆ. ಮೊದಲು ನಾವು ಉಪೇಂದ್ರ ಅವರನ್ನು ಸೆಲೆಕ್ಟ್ ಮಾಡಿದ್ವಿ. ಆದರೆ ಕಥೆಯಲ್ಲಿ ಬದಲಾವಣೆ ಬಯಸಿದ್ರು ಉಪೇಂದ್ರ. ಆದರೆ ಅದು ರವಿಬೆಳಗೆರೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಉಪೇಂದ್ರ ಅವರನ್ನು ಕೈ ಬಿಟ್ಟೆವು. ಬಳಿಕ ಸುದೀಪ್ ಅವರನ್ನು ಈ ಸಿನಿಮಾಗೆ ಕೇಳಲಾಗಿತ್ತು. ಹಾಗೇ ದರ್ಶನ್ ಬಳಿಯೂ ಈ ಸಿನಿಮಾ ಮಾಡುವ ಆಯ್ಕೆ ಇತ್ತು. ಕಾರಣಾಂತರಗಳಿಂದ ಈ ಮೂವರು ಸಿನಿಮಾ ಮಾಡಲು ಆಗಿಲ್ಲ. ಎಷ್ಟು ಬಾರಿ ಈ ಸಿನಿಮಾ ಮಾಡಲು ಸ್ಟಾರ್ಟ್ ಮಾಡಿದಾಗಲೂ ನಿಂತು ಹೋಗುತ್ತಿತ್ತು ಎಂದಿದ್ದಾರೆ.
ಅಲ್ಲದೆ 'ರೈ' ಸಿನಿಮಾದಲ್ಲಿ ಸಾಕಷ್ಟು ಕಹಿ ಘಟನೆಗಳು, ನಿಜ ಸತ್ಯಾಂಶಗಳನ್ನು ರವಿ ಬೆಳಗೆರೆ ಬಿಚ್ಚಿಡುವ ಪ್ರಯತ್ನ ಮಾಡಿದ್ರು. ಆದರೆ ಈ ಕಥೆ ಸಿನಿಮಾ ಆಗಲಿಲ್ಲಾ ಎನ್ನುವ ಬಗ್ಗೆ ರವಿ ಶ್ರೀವತ್ಸ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಇನ್ನಷ್ಟು ಮಾತುಗಳನ್ನು ಈ ವೀಡಿಯೋದಲ್ಲಿ ನೀವು ನೋಡಬಹುದಾಗಿದೆ.