For Quick Alerts
  ALLOW NOTIFICATIONS  
  For Daily Alerts

  ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್

  By Suneetha
  |

  ವಿವಾದಾತ್ಮಕ ನಟ ಕಮ್ ನಿರ್ದೇಶಕ ಹುಚ್ಚ ವೆಂಕಟ್ ಅವರು ಎಸ್ ನಾರಾಯಣ್ ನಿರ್ದೇಶನದ 'ಡಿಕ್ಟೇಟರ್' ಚಿತ್ರದಿಂದ ಹೊರ ನಡೆದ ನಂತರ ಚಿತ್ರ ಅರ್ಧಕ್ಕೆ ನಿಂತು ಹೋಗುತ್ತಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು.

  ಮಾತ್ರವಲ್ಲದೆ ಹುಚ್ಚ ವೆಂಕಟ್ ಅವರು ನಾನು ಇನ್ನುಮುಂದೆ 'ಡಿಕ್ಟೇಟರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಿರ್ದೇಶಕರು ನನ್ನ ಕಾಲ್ ಶೀಟ್ ಪಡೆದುಕೊಂಡು ಸುಮ್ಮ-ಸುಮ್ಮನೆ ನನ್ನ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ನಿರ್ದೇಶಕ ಎಸ್ ನಾರಾಯಣ್ ಅವರ ಮೇಲೆ ಭಯಂಕರ ಫೈರ್ ಮಾಡಿದ್ದರು.[ಹುಚ್ಚ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತಾ?]

  ಇದೀಗ ವೆಂಕಟ್ ಅವರಿಗೆ ಪ್ರತಿಯಾಗಿ ಮಾತನಾಡಿರುವ ನಿರ್ದೇಶಕ ಎಸ್.ನಾರಾಯಣ್ ಅವರು 'ಯಾವುದೇ ಕಾರಣಕ್ಕೂ ಸಿನಿಮಾ ನಿಲ್ಲುವುದಿಲ್ಲ ಮತ್ತು ಯಾರದರೂ ಚಿತ್ರತಂಡದಿಂದ ಹೊರನಡೆದರೂ ಈ ಸಿನಿಮಾ ಮಾತ್ರ ನಿಲ್ಲುವುದಿಲ್ಲ' ಎಂದು ಕಲಾ ಸಾಮ್ರಾಟ್ ನುಡಿದಿದ್ದಾರೆ.[ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!]

  'ನಮ್ಮ ಚಿತ್ರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಸ್ವಲ್ಪ ತಡವಾದರೂ ಖಂಡಿತ ಶುರು ಆಗಿಯೇ ಆಗುತ್ತದೆ. 'ಡಿಕ್ಟೇಟರ್' ಒಂದೊಳ್ಳೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೀಗಿರುವಾಗ ನನಗೆ ಅರ್ಜೆಂಟ್ ಮಾಡುವುದಕ್ಕೆ ಇಷ್ಟವಿಲ್ಲ. ನನಗೆ ಮೊದಲು ಸ್ಕ್ರಿಪ್ಟ್ ಮುಗಿಯಬೇಕು. ಆ ಬಳಿಕ ಅದು ತೃಪ್ತಿ ಕೊಡಬೇಕು' ಎಂದು ಎಸ್ ನಾರಾಯಣ್ ನುಡಿದಿದ್ದಾರೆ.

  'ಯಾರೋ ಒತ್ತಡ ಹೇರುತ್ತಾರೆ ಎಂಬ ಕಾರಣಕ್ಕೆ ನನಗೆ ಏನೋ ಮಾಡೋದಕ್ಕೆ ಇಷ್ಟವಿಲ್ಲ. ನಾನು ಅನಾವಶ್ಯಕವಾಗಿ ಸಮಯ ಹಾಳು ಮಾಡುವುದಿಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್ ಮುಗಿಯುವವರೆಗೆ ಎಂದಿಗೂ ಡೇಟ್ ಫಿಕ್ಸ್ ಮಾಡಲ್ಲ, ಅವರ ಅವಸರಕ್ಕೆ ನಾನೇನೂ ಮಾಡಲು ಆಗುವುದಿಲ್ಲ' ಎಂದು ಎಸ್ ನಾರಾಯಣ್ ಖಡಕ್ ಆಗಿ ನುಡಿದಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]

  ಒಟ್ನಲ್ಲಿ ವಾದ-ವಿವಾದಗಳ ನಡುವೆ ಅದ್ಯಾವಾಗ ಸಿನಿಮಾ ಸೆಟ್ಟೇರುತ್ತೋ ಗೊತ್ತಿಲ್ಲ. ನಿರ್ಮಾಪಕ ಬಿ.ವಿಜಯಕುಮಾರ್ ಕೂಡ ಮೊದಲು ಸ್ಕ್ರಿಪ್ಟ್ ಆಗಲಿ ಆ ನಂತರ ಸಿನಿಮಾ ಮಾಡೋಣ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Controversial actor-director Venkat might have walked out of S Narayan’s ‘Dictator’, but that has not deterred the 'director' to shelve the film. Instead, S Narayan wants to continue the film with another hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X