»   » 'ರಾಜಕುಮಾರ'ನ ನಿಜವಾದ ಕಲೆಕ್ಷನ್ ಗುಟ್ಟು ರಟ್ಟು ಮಾಡಿದ ನಿರ್ದೇಶಕ

'ರಾಜಕುಮಾರ'ನ ನಿಜವಾದ ಕಲೆಕ್ಷನ್ ಗುಟ್ಟು ರಟ್ಟು ಮಾಡಿದ ನಿರ್ದೇಶಕ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಪುಡಿ ಮಾಡಿ ಮುನ್ನುಗ್ಗುತ್ತಿದೆ.

ದಾಖಲೆಗಳ ಪ್ರಕಾರ 'ರಾಜಕುಮಾರ' ಚಿತ್ರ ಕನ್ನಡದ ಅತಿ ಹೆಚ್ಚ ಗಳಿಸಿರುವ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ. ಇಷ್ಟು ದಿನ ಈ ಸುದ್ದಿಯನ್ನ ಅವರು ಇವರುಗಳು ಹೇಳಿ ಕೇಳುತ್ತಿದ್ದ ಗಾಂಧಿನಗರಕ್ಕೆ ಈಗ ಚಿತ್ರದ ನಿರ್ದೇಶಕರೇ ಉತ್ತರ ಕೊಟ್ಟಿದ್ದಾರೆ.[ಡಾ.ರಾಜ್ ಹುಟ್ಟುಹಬ್ಬದ ವಿಶೇಷ: 'ರಾಜಕುಮಾರ' ಚಿತ್ರತಂಡದಿಂದ ಬಂಪರ್ ಕೊಡುಗೆ]


ಹೌದು, 'ರಾಜಕುಮಾರ' ಚಿತ್ರದ ಕಲೆಕ್ಷನ್ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮೊದಲ ಬಾರಿಗೆ ಮಾತನಾಡಿದ್ದು, ಚಿತ್ರದ ನಿಜವಾದ ಕಲೆಕ್ಷನ್ ಎಷ್ಟು ಅಂತ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....


ಬಾಕ್ಸ್ ಆಫೀಸ್ ನಲ್ಲಿ 'ರಾಜಕುಮಾರ' ಫಸ್ಟ್!

ಮೊದಲ ದಿನದಿಂದಲೂ ಗಾಂಧಿನಗರ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿರುವ 'ರಾಜಕುಮಾರ' ಕನ್ನಡದಲ್ಲಿ ಅತಿ ಹೆಚ್ಚು ಗಳಿಸಿರುವ ಸಿನಿಮಾ ಎನಿಸಿಕೊಂಡಿದೆ. ಸದ್ಯ, 25 ದಿನಗಳನ್ನ ಪೂರೈಸಿರುವ ರಾಜಕುಮಾರ ಇನ್ನು ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ.[ಮೊದಲ ದಿನ 'ರಾಜಕುಮಾರ'ನ ಕಲೆಕ್ಷನ್ ಎಷ್ಟು?]


50 ಕೋಟಿ ದಾಟಿದೆಯಂತೆ 'ರಾಜಕುಮಾರ'!

ದಾಖಲೆಗಳ ಪ್ರಕಾರ 'ರಾಜಕುಮಾರ' ಸಿನಿಮಾ 50 ಕೋಟಿ ಗಡಿದಾಟಿದೆ ಎಂದು ಹೇಳಲಾಗ್ತಿದೆ. ಈ ಮೂಲಕ 'ಮುಂಗಾರು ಮಳೆ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರಂಗಿತರಂಗ', 'ಕಿರಿಕ್ ಪಾರ್ಟಿ' ಚಿತ್ರಗಳನ್ನ ದಾಟಿ ಟಾಪ್ ಸ್ಥಾನವನ್ನ ಗಳಿಸಿಕೊಂಡಿದೆಯಂತೆ.[ಕಲೆಕ್ಷನ್ ವಿಚಾರದಲ್ಲಿ ಗೊಂದಲ: 'ಮುಂಗಾರು ಮಳೆ' ವರ್ಸಸ್ 'ರಾಜಕುಮಾರ'!]


ನಿರ್ದೇಶಕರ ಪ್ರಕಾರ 'ರಾಜಕುಮಾರ' ಟಾಪ್!

'ರಾಜಕುಮಾರ' ಚಿತ್ರದ ಕಲೆಕ್ಷನ್ ಬಗ್ಗೆ ಇದುವರೆಗೂ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಇದೇ ಮೊದಲ ಬಾರಿಗೆ ಕಲೆಕ್ಷನ್ ಬಗ್ಗೆ ಮಾತನಾಡಿದೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಹೇಳುವ ಪ್ರಕಾರ 'ರಾಜಕುಮಾರ' ಕನ್ನಡದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ.


ಸಂತೋಷ್ ಏನು ಹೇಳಿದರು?

''ನಂಬರ್ ಮುಖ್ಯವಲ್ಲ, ಆ ಸಿನಿಮಾ ಎಷ್ಟು ಜನಕ್ಕೆ ರೀಚ್ ಆಯ್ತು, ಆ ಸಿನಿಮಾ ಏನು ಗಳಿಸಿತ್ತು ಅನ್ನುವುದು ಮುಖ್ಯ. ನಿರ್ಮಾಪಕರು ಹಾಗೂ ಅಪ್ಪು ಸರ್, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ. ಇಲ್ಲಿಯವರೆಗೂ ಅತಿ ಹೆಚ್ಚು ಗಳಿಸಿರುವ ಸಿನಿಮಾ ಎನ್ನುವುದು ಮಾತ್ರ ಸತ್ಯ. ಅಷ್ಟು ಮಾತ್ರ ಹೇಳಬಹುದು. ಈಗಲೂ ಹೌಸ್ ಪುಲ್ ಪ್ರದರ್ಶನಗಳು ಕಾಣ್ತಿದೆ'' - ಸಂತೋಷ್ ಆನಂದ್ ರಾಮ್, ನಿರ್ದೇಶಕ


50ನೇ ದಿನದತ್ತ ರಾಜಕುಮಾರ ಹೆಜ್ಜೆ!

ಪುನೀತ್ ರಾಜ್ ಕುಮಾರ್ ಹಾಗೂ ಪ್ರಿಯಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಶರತ್ ಕುಮಾರ್, ಪ್ರಕಾಶ್ ರೈ, ರಂಗಾಯಣ ರಘು, ಸಾಧುಕೋಕಿಲಾ, ದತ್ತಣ್ಣ, ಚಿಕ್ಕಣ್ಣ, ಅವಿನಾಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮಾರ್ಚ್ 24 ರಂದು ಬಿಡುಗಡೆಯಾಗಿದ್ದ ರಾಜಕುಮಾರ, 50ನೇ ದಿನದತ್ತ ಯಶಸ್ವಿ ಪ್ರದರ್ಶನವಾಗ್ತಿದೆ.


English summary
Kannada Actor Puneeth Rajkumar Starrer Raajakumara is Top Grossing Movie in Kannada Says Director Santhosh Anandram

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada