twitter
    For Quick Alerts
    ALLOW NOTIFICATIONS  
    For Daily Alerts

    'ಪೆಟ್ರೋಮ್ಯಾಕ್ಸ್' ಸೋಲಿಗೆ ನಾನೊಬ್ಬನೇ ಕಾರಣ; ಕ್ಷಮಿಸಿ ಎಂದ ವಿಜಯ ಪ್ರಸಾದ್

    |

    ಸಿನಿಮಾ ಗೆದ್ದಾಗ ಎಲ್ಲರೂ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಅದರೆ ಸೋತಾಗ ಅದನ್ನು ನಿರ್ದೇಶಕರ ತಲೆಗೆ ಕಟ್ಟಿಬಿಡುತ್ತಾರೆ. ಆದರೆ 'ಪೆಟ್ರೋಮ್ಯಾಕ್ಸ್' ಸೋಲಿನ ಹೊಣೆಯನ್ನು ಸ್ವತಃ ನಿರ್ದೇಶಕ ವಿಜಯ ಪ್ರಸಾದ್ ಹೊತ್ತುಕೊಂಡಿದ್ದಾರೆ. ಕ್ಷಮೆಯನ್ನು ಕೇಳಿದ್ದಾರೆ.

    ಜುಲೈ 15ರಂದು ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೋಮ್ಯಾಕ್ಸ್' ರಾಜ್ಯಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಡಬಲ್ ಮೀನಿಂಗ್ ಡೈಲಾಗ್‌ಗಳೇ ಹೆಚ್ಚಾಗಿದ್ದ ಕಾರಣಕ್ಕೋ ಏನೋ ನಂತರ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ. ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯಾ ರಾಮ್, ನಾಗಭೂಷಣ್, ವಿಜಯಲಕ್ಷ್ಮಿ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸಿಂಪಲ್ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಕೊಂಚ ಪೋಲಿತನ, ಚೇಷ್ಟೆ, ಕುಚೇಷ್ಟೆಗಳನ್ನು ಸೇರಿಸಿ ಹೇಳಿದ್ದರು. ಪಡ್ಡೆ ಹೈಕಳಿಗೆ ಸಿನಿಮಾ ಇಷ್ಟವಾದರೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ.

    'ಸಿದ್ಲಿಂಗು' ಹಾಗೂ 'ನೀರ್‌ದೋಸೆ' ಸಿನಿಮಾಗಳಲ್ಲಿ ಇದೇ ಪ್ರಯತ್ನ ಮಾಡಿ ನಿರ್ದೇಶಕರು ಗೆದ್ದಿದ್ದರು. ಆದರೆ ಈ ಭಾರೀ ಕೊಂಚ ಪ್ರಯತ್ನ ಕೈಕೊಟ್ಟಿದೆ. 'ಪೆಟ್ರೋಮ್ಯಾಕ್ಸ್'ಸಿನಿಮಾ ಬಿಡುಗಡೆಯಾದ ಎರಡೇ ವಾರಕ್ಕೆ ಥಿಯೇಟರ್‌ನಿಂದ ಎತ್ತಂಗಡಿಯಾಗಿದೆ. ಡಬಲ್ ಮೀನಿಂಗ್ ಡೈಲಾಗ್‌ಗಳು ಮಾತ್ರವಲ್ಲ, ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಕಾಣಿಸಿಕೊಂಡಿದ್ದ ಬೆಡ್‌ ರೂಮ್ ಸೀನ್‌, ಡೈಲಾಗ್‌ಗಳು ಕೂಡ ಮುಜಗರ ತಂದಿತ್ತು. ಸಿನಿಮಾ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರೋ ನಿರ್ದೇಶಕ ವಿಜಯ ಪ್ರಸಾದ್ ಕ್ಷಮೆ ಕೇಳಿದ್ದಾರೆ.

    ಎಲ್ಲರ ಕ್ಷಮೆ ಕೇಳಿದ ವಿಜಯ ಪ್ರಸಾದ್

    'ಪೆಟ್ರೋಮ್ಯಾಕ್ಸ್' ಸಿನಿಮಾ ಸೋಲಿಗೆ ಪ್ರೇಕ್ಷಕರನ್ನಾಗಲಿ, ಚಿತ್ರತಂಡವನ್ನಾಗಲಿ ವಿಜಯ ಪ್ರಸಾದ್ ದೂಷಿಸಿಲ್ಲ. ಬದಲಿಗೆ ನಾನೊಬ್ಬನೇ ಕಾರಣ.. ಕ್ಷಮೆ ಇರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    'ಪೆಟ್ರೋಮ್ಯಾಕ್ಸ್' ಟ್ರೈಲರ್ ವೈರಲ್

    'ಪೆಟ್ರೋಮ್ಯಾಕ್ಸ್' ಟ್ರೈಲರ್ ವೈರಲ್

    ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18 ಹಾಗೂ ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಎಂದಿನಂತೆ ವಿಜಯ ಪ್ರಸಾದ್ ತಮಾಷೆಯಾಗಿ ಒಂದು ಸೀರಿಯಸ್ ವಿಚಾರವನ್ನು ಹೇಳುವ ಪ್ರಯತ್ನ ಮಾಡಿದ್ದರು. ಆದರೆ ತಮಾಷೆ ಅತಿಯಾಗಿ ಕೆಲವರಿಗೆ ವಾಕರಿಕೆ ತರಿಸುವಂತಾಗಿದ್ದು ಸುಳ್ಳಲ್ಲ. ಸಿನಿಮಾ ರಿಲೀಸ್‌ಗೂ ಮೊದ್ಲು ಡಬಲ್‌ ಮೀನಿಂಗ್ ಡೈಲಾಗ್ ಟ್ರೈಲರ್‌ಗಳು ಸಖತ್ ಸದ್ದು ಮಾಡಿತ್ತು.

     'ಪೆಟ್ರೋಮ್ಯಾಕ್ಸ್' ಸಿನಿಮಾ ಕಥೆ

    'ಪೆಟ್ರೋಮ್ಯಾಕ್ಸ್' ಸಿನಿಮಾ ಕಥೆ

    ಮೂವರು ಹುಡುಗರು. ಒಂದು ಹುಡುಗಿ. ಅಪ್ಪ- ಅಮ್ಮ ಯಾರು ಅಂತ ಗೊತ್ತಿಲ್ಲದೇ ಅನಾಥಶ್ರಮದಲ್ಲಿ ಬೆಳೆದವರು. ಮುಂದೆ ಅನಾಥಾಶ್ರಮ ಬಿಟ್ಟು ನಾಲ್ಕು ಜನ ಹೊಸ ಗೂಡು ಕಟ್ಟಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಮೂವರು ಹುಡುಗರು, ಒಂದು ಹುಡುಗಿ ಅಂದರೆ ಯಾರು ಮನೆ ಬಾಡಿಗೆಗೆ ಕೊಡುವುದಿಲ್ಲ. ಈ ಹಾದಿಯಲ್ಲಿ ಅವರಿಗೆ ರಿಯಲ್ ಎಸ್ಟೇಟ್ ಬ್ರೋಕರ್ ಮೀನಾಕ್ಷಿ ಹಾಗೂ ಮಗ, ಸೊಸೆಗೆ ಬೇಡವಾದ ಹಿರಿಯ ಜೀವ ಸುಧಾಮೂರ್ತಿ ಸಿಗುತ್ತಾರೆ. ಮುಂದೆ ಅನಾಥರಾದ ನಾಲ್ವರಿಗೆ ತಾಯಿ ಸಿಗುತ್ತಾಳೆ. ಹೆತ್ತ ಮಗನಿಗೆ ಬೇಡವಾದ ತಾಯಿಗೆ ನಾಲ್ವರು ಮಕ್ಕಳು ಸಿಗುತ್ತಾರೆ.

     ಬಿಡುಗಡೆಗೆ ಸಿದ್ಧ ವಿಜಯ ಪ್ರಸಾದ್ 'ತೋತಾಪುರಿ'

    ಬಿಡುಗಡೆಗೆ ಸಿದ್ಧ ವಿಜಯ ಪ್ರಸಾದ್ 'ತೋತಾಪುರಿ'

    ವಿಜಯ ಪ್ರಸಾದ್ ನಿರ್ದೇಶನದ ಮುಂದಿನ ಸಿನಿಮಾ ತೋತಾಪುರಿ ರಿಲೀಸ್‌ಗೆ ರೆಡಿಯಾಗಿದ್ದಾರೆ. ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವಾ, ಡಾಲಿ ಧನಂಜಯ, ಸುಮನ್ ರಂಗನಾಥ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಾಗಿ ರಿಲೀಸ್ ಆಗಲಿದ್ದು, ಈಗಾಗಲೇ ಈ ಚಿತ್ರದ ಟ್ರೈಲರ್, ಸಾಂಗ್ ಹಿಟ್ ಆಗಿದೆ.

    English summary
    Petromax Director Vijaya Prasad Owns Movie Failure Pens Down Apology Note. Know More.
    Monday, August 1, 2022, 8:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X