For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ 3' ನಿರ್ಮಾಪಕರ ವಿರುದ್ಧ ಕೊಲೆ ಬೆದರಿಕೆ ಆರೋಪ

  |

  ವಿತರಕರ ಸಮಸ್ಯೆಯಿಂದ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಒಂದು ದಿನ ತಡವಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿಮಾದ ವಿತರಕರ ಹಿಂದೆ ಯಾರಿದ್ದಾರೆ? ವಿತರಕರು ಏಕೆ ಹೀಗೆ ಮಾಡಿದರು? 'ಕೋಟಿಗೊಬ್ಬ 3'ಗೆ ತೊಂದರೆ ಕೊಡಲು ಯತ್ನಿಸಿದ ಹಿರಿಯ ವಿತರಕ ಯಾರು? ಸುದೀಪ್ ಮುಂದಿನ ನಡೆ ಏನು? ಹಲವು ವಿಷಯಗಳು ಚರ್ಚೆಗೆ ಬರುತ್ತಿವೆ.

  ಇಬ್ಬರು ವಿತರಕರು ಬಾಕಿ ಹಣ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಲಿಲ್ಲವೆಂದು ನಿನ್ನೆಯೇ ಸೂರಪ್ಪ ಬಾಬು ಹೇಳಿದ್ದರು. ಚಿತ್ರದುರ್ಗ ಹಾಗೂ ಮೈಸೂರು ಭಾಗದ ವಿತರಕರು ಬಾಕಿ ಹಣವನ್ನು ಸೂರಪ್ಪ ಬಾಬುಗೆ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಿರಲಿಲ್ಲ.

  ಅಕ್ಟೋಬರ್ 15 ರಂದು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಿರ್ಮಾಪಕ ಸೂರಪ್ಪ ಬಾಬು ತಮಗೆ ಮೋಸ ಮಾಡಿದ ಇಬ್ಬರು ವಿತರಕರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. ಇಬ್ಬರು ವಿತರಕರಿಂದ ನನಗೆ 10 ಕೋಟಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಆರೋಪಿಸಿದ್ದಾರೆ. ಈ ನಡುವೆ ಸೂರಪ್ಪ ಬಾಬು ವಿರುದ್ಧವೂ ಆ ಇಬ್ಬರು ವಿತರಕರು ದೂರು ನೀಡಲು ಮುಂದಾಗಿದ್ದಾರೆ.

  ಚಿತ್ರದುರ್ಗದ ಖಾಜಾಫೀರ್ ಅವರು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಗೆ ವಿತರಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. 1.30 ಲಕ್ಷ ರು ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು. 11 ಲಕ್ಷ ಹಣವನ್ನು ನಿರ್ಮಾಪಕರಿಗೆ ನೀಡಿದ್ದರು ಸಹ ಆದರೆ ಉಳಿದ ಹಣವನ್ನು ನಿರ್ಮಾಪಕರಿಗೆ ನೀಡದ ಕಾರಣ ಅವರಿಗೆ ಲೈಸೆನ್ಸ್ ನೀಡಿರಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಆ ನಂತರ ಆ ಭಾಗದ ವಿತರಣೆಯನ್ನು ಸುದೀಪ್ ಆಪ್ತ ಜಾಕ್ ಮಂಜು ಹಾಗೂ ಎಂ.ಬಿ ಬಾಬು ನೀಡಲಾಗಿದೆ.

  ಈಗ ತಾವು ಕೊಟ್ಟಿರುವ ಹಣವನ್ನು ಖಾಜಾಪೀರ್, ಸೂರಪ್ಪ ಬಾಬು ಬಳಿ ವಾಪಸ್ ಕೇಳಿದ್ದಕ್ಕೆ ಆ ಹಣವನ್ನು ತಾವು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಖಾಜಾಪೀರ್, ''ನಾನು ಕಾಳಿಂಗ ಆಡ್ಸ್ ಮೂಲಕ ರಾಂಬಾಬು ಫಿಲಮ್ಸ್‌ಗೆ 11 ಲಕ್ಷ ಹಣ ವರ್ಗಾವಣೆ ಮಾಡಿದ್ದೀನಿ. ಅದರ ದಾಖಲೆ ನನ್ನ ಬಳಿ ಇದೆ. ಈಗ ನಾನು ಕೊಟ್ಟಿರುವ ಹಣ ವಾಪಸ್ ಕೇಳಿದ್ದಕ್ಕೆ ಕೊಡುವುದಿಲ್ಲವೆಂದು ಸೂರಪ್ಪ ಬಾಬು ಹೇಳಿದ್ದಾರೆ'' ಎಂದಿದ್ದಾರೆ.

  ''ವಕೀಲರ ಬಳಿ ಡ್ರಾಫ್ಟ್ ಮಾಡಿಸಿದ್ದೀನಿ ಬಂದು ಸಹಿ ಮಾಡಿ ಹೋಗಿ. ಇಲ್ಲವಾದರೆ ನಿಮಗೆ ಚಿತ್ರದುರ್ಗ ಬಿಡಿಸ್ತೀನಿ'' ಎಂದು ಧಮ್ಕಿ ಹಾಕಿದ್ದಾರೆ ಎಂದಿರುವ ಖಾಜಾಫೀರ್, ''ನೀವು ಕೊಟ್ಟಿರುವ ಹಣ ಯಾವ ಕಾರಣಕ್ಕೂ ವಾಪಸ್ ಬರುವುದಿಲ್ಲ. ದುಡ್ಡು ಕೇಳಿದರೆ ನಾನೇ ಬಂದು ಹೊಡೀತೀನಿ. ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುತ್ತೀನಿ'' ಎಂದು ಬೆದರಿಕೆ ಹಾಗಿದ್ದಾರೆ ಎಂದು ಖಾಜಾಫೀರ್ ಹೇಳಿದ್ದಾರೆ.

  ಖಾಜಾಫೀರ್‌ಗೆ ಮಾತ್ರವೇ ಅಲ್ಲದೆ ಕುಮಾರ್ ಫಿಲಮ್ಸ್‌ನ ಕುಮಾರ್‌ಗೂ ಸೂರಪ್ಪ ಬಾಬು ಬೆದರಿಕೆ ಹಾಕಿದ್ದಾರೆ. ಸೂರಪ್ಪ ಬಾಬು ತಮ್ಮ ಬಳಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದು, ಚಿತ್ರದುರ್ಗದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸೂರಪ್ಪ ಬಾಬು ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.

  English summary
  Distributors Khaja peer and Kumar alleged that producer Soorappa Babu threatened them and said he will not returned the money which is given by them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X