»   » ದೀಪಾವಳಿ ಬಂಪರ್ ಆಫರ್ ಗಳಿಗೆ ಮಾರುಹೋಗುವ ಮುನ್ನ ಉಪೇಂದ್ರ ಮಾತು ಕೇಳಿ

ದೀಪಾವಳಿ ಬಂಪರ್ ಆಫರ್ ಗಳಿಗೆ ಮಾರುಹೋಗುವ ಮುನ್ನ ಉಪೇಂದ್ರ ಮಾತು ಕೇಳಿ

Posted By:
Subscribe to Filmibeat Kannada

ದೀಪಾವಳಿ ಹಬ್ಬದ ಸಡಗರ, ಸಂಭ್ರಮವನ್ನು ಇಮ್ಮಡಿಗೊಳಿಸಲು 'ಮೆಗಾ ಸೇಲ್', 'ಬಂಪರ್ ಆಫರ್'ಗಳ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಉಪಕರಣ ಕಂಪನಿಗಳು ವಿಶೇಷ ರಿಯಾಯಿತಿಗಳನ್ನು ಘೋಷಿಸಿವೆ.

ಹಳೇ ಉಪಕರಣಗಳನ್ನು ಎಕ್ಸ್ ಚೇಂಜ್ ಮಾಡಿ ಹೊಸ ಉಪಕರಣಗಳನ್ನು ಕೊಂಡುಕೊಂಡರೆ, ಬೆಲೆ ಮೇಲೆ ಶೇಕಡವಾರು ಲೆಕ್ಕದಲ್ಲಿ ಗ್ರಾಹಕರಿಗೆ ರಿಯಾಯಿತಿ ಲಭಿಸಲಿದೆ.

Diwali exchange offers: Upendra's message to customers

ಕಣ್ಣು ಕುಕ್ಕುವ, ಜೇಬು ಖಾಲಿ ಮಾಡುವ ಈ ಆಫರ್ ಗಳಿಗೆ ಮಾರು ಹೋಗುವ ಮುನ್ನ ಒಮ್ಮೆ ರಿಯಲ್ ಸ್ಟಾರ್, 'ಪ್ರಜಾಕಾರಣಿ' ಉಪೇಂದ್ರ ಮಾತುಗಳನ್ನು ಕೇಳಿರಿ...

''ಹಳೆಯ ಉಪಕರಣಗಳನ್ನು ವ್ಯಾಪಾರಿಗಳಿಗೆ ಹಿಂದಿರುಗಿಸಿ, ಅವುಗಳ ಬದಲಾಗಿ 500-1000 ರೂಪಾಯಿಗಳನ್ನು ಪಡೆಯುವ ಬದಲು ಆ ಉಪಕರಣಗಳನ್ನು ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಥವಾ ಮನೆಯ ಸುತ್ತ-ಮುತ್ತ ವಾಸಿಸುವ ಬಡವರಿಗೆ ದಾನವಾಗಿ ನೀಡಿ. ಕೊಡುವುದರಲ್ಲಿ ಇರುವ ಸುಖ ಪಡೆಯುವುದರಲ್ಲಿ ಇಲ್ಲ'' ಎಂದು ಟ್ವಿಟ್ಟರ್ ನಲ್ಲಿ ಉಪೇಂದ್ರ ಸಂದೇಶ ಸಾರಿದ್ದಾರೆ.

ಉಪೇಂದ್ರ ರವರ ಈ ಆಲೋಚನೆ ಬಗ್ಗೆ ನೀವೇನಂತೀರಾ.? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ...

English summary
Oh wait, Check out Upendra's tweet before looking at Diwali exchange offers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada