»   » 'ಡಿಕೆ' ಹೆಗಲ ಮೇಲೆ ಕೈಹಾಕಿದರು ಡಿಕೆ ಶಿವಕುಮಾರ್

'ಡಿಕೆ' ಹೆಗಲ ಮೇಲೆ ಕೈಹಾಕಿದರು ಡಿಕೆ ಶಿವಕುಮಾರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಒಂದು ಮಾತಿದೆ, ಅದೇನೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಯಾರನ್ನೇ ಬೈದರೂ, ಪ್ರೀತಿಯಿಂದ ಅವರ ಹೆಗಲ ಮೇಲೆ ಕೈಹಾಕಿದರೂ ಅವರ ಅದೃಷ್ಟ ಖುಲಾಯಿಸಿದಂತೆಯೇ ಎಂದು. ಸ್ವತಃ ಈ ಮಾತನ್ನು ರವಿಚಂದ್ರನ್ ಅವರೇ ಅದೆಷ್ಟೋ ಸಲ ಹೇಳಿದ್ದಾರೆ.

ರವಿಮಾಮನ ಕೈಯಲ್ಲಿ ಬೈಸಿಕೊಂಡವರು, ಹೆಗಲ ಮೇಲೆ ಕೈಹಾಕಿಸಿಕೊಂಡವರು ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿಯ ಒಂದು 'ನಂಬಿಕೆ'ಗೆ ಕನಕಪುರ ಶಾಸಕ, ಹಾಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪಾತ್ರವಾಗಲಿದ್ದಾರಾ? [ಸನ್ನಿ ಲಿಯೋನ್ 'ಸೇಸಮ್ಮ' ಫುಲ್ ಐಟಂ ಸಾಂಗ್ ಕೇಳಿ]

ಈ ಫೋಟೋ ನೋಡಿದರೆ ಆ ಸಂದೇಹ ಬಂದೇ ಬರುತ್ತದೆ. ಇತ್ತೀಚೆಗೆ ಪ್ರೇಮ್ ಅಭಿನಯದ ರಕ್ಷಿತಾ ಪ್ರೇಮ್ ನಿರ್ಮಾಣದ 'ಡಿಕೆ' ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದವರು ಸ್ವತಃ ಡಿಕೆ ಶಿವಕುಮಾರ್ ಸಾಹೇಬರು.

ಈ ಚಿತ್ರ ಡಿಕೆಶಿ ಅವರ ಕುರಿತಾದದ್ದೇ?

ಈ ಚಿತ್ರ ಡಿಕೆಶಿ ಅವರ ಕುರಿತಾದದ್ದೇ? ಡಿಕೆ ಅಂದ್ರೆ ಯಾರು? ಚಿತ್ರದಲ್ಲಿ ರಾಜಕಾರಣಿಗಳ ಐತಿಹ್ಯ ಏನಾದರೂ ಇದೆಯೇ? ಎಂಬ ಸಂದೇಹಗಳು ಸ್ಯಾಂಡಲ್ ವುಡ್ ನಲ್ಲಿ ಚಿತ್ರ ಆರಂಭವಾದಂದಿನಿಂದ ಇವೆ. ಆದರೆ ಡಿಕೆಶಿ ಅವರು ಟ್ರೇಲರ್ ಬಿಡುಗಡೆ ಬರುವ ಮೂಲಕ ಆ ಎಲ್ಲಾ ಸಂದೇಹಗಳಿಗೆ ಉತ್ತರ ಸಿಕ್ಕಂತಾಗಿದೆ.

ಡಿಕೆಶಿ ಅವರ ಯೌವನದ ದಿನಗಳೇ ಸ್ಫೂರ್ತಿ

ಡಿಕೆ ಚಿತ್ರದ ನಿರ್ದೇಶಕ ವಿಜಯ್ ಹಂಪಳಿ ಅವರು ಬಿಟ್ಟುಕೊಟ್ಟ ಒಂದೇ ಒಂದು ಗುಟ್ಟೇನೆಂದರೆ, ಈ ಚಿತ್ರದಲ್ಲಿ ಡಿಕೆ ಶಿವಕುಮಾರ್ ಅವರ ಯೌವನದ ದಿನಗಳೇ ಈ ಚಿತ್ರಕ್ಕೆ ಸ್ಫೂರ್ತಿ ಎಂಬುದು.

ಇದು 'ಡಿಕೆಶಿ' ಕಥೆಯಲ್ಲವಂತೆ

ಪ್ರೇಮ್ ತಮ್ಮ ಚಿತ್ರಕ್ಕೆ 'ಡಿಕೆ' ಎಂದು ಹೆಸರಿಟ್ಟು ಪ್ರಕಟಿಸಿದ ಮೇಲೆ ಡಿಕೆಶಿ ಅವರಿಗೆ ಆಪ್ತರಿಂದ ಸಾಕಷ್ಟು ಫೋನ್ ಕರೆಗಳು ಬಂದಂವಂತೆ. ಬಳಿಕ ಪ್ರೇಮ್ ಅವರು ಆ ಚಿತ್ರದ ಬಗ್ಗೆ ಸ್ಪಷ್ಟೀಕರಣ ನೀಡಿದ ಇದು ತಮ್ಮ ಜೀವನಕ್ಕೆ ಸಂಬಂಧಿಸಿದ್ದ ಎಂದು ತಿಳಿದು ಡಿಕೆಶಿ ಸಾಹೇಬರು ನಿರಾಳರಾಗಿದ್ದಾರೆ.

ಡಿಕೆ ಚಿತ್ರ ಯಶಸ್ವಿಯಾಗಲಿ ಎಂದು ಹರಸಿದರು

ಚಿತ್ರದ ಟ್ರೇಲರ್ ಮತ್ತು ಹಾಡನ್ನು ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್ ಅವರು ಪ್ರೇಮ್ ಅವರ ಈ ಹಿಂದಿನ ಚಿತ್ರಗಳಂತೆ ಇದೂ ಯಶಸ್ವಿಯಾಗಲಿ ಎಂದು ಹರಸಿದರು. ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ 'ಡಿಕೆ' ಚಿತ್ರ ಮುರಿಯಲಿ ಎಂದು ಹಾರೈಸಿದರು.

ಪ್ರಮುಖ ಆಕರ್ಷಣೆಯಾಗಿದ್ದ ಚೈತ್ರಾ ಚಂದ್ರನಾಥ್

ಈ ಚಿತ್ರದ ನಾಯಕಿ ಚೈತ್ರಾ ಚಂದ್ರನಾಥ್ ಅವರು 'ಡಿಕೆ' ಚಿತ್ರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಚಿತ್ರವನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ಅಪರೂಪದ ಕಾರ್ಯಕ್ರಮ ಅವರು ಕಪ್ಪು ದಿರಿಸಿನಲ್ಲಿ ಎಲ್ಲರ ಗಮನಸೆಳೆದರು.

English summary
At finally 'DK' prem rub shoulders with Karnataka minister of Energy DK Shivakumar. Recently Kannada Satirical film DK tailer and song released by DK Shivakumar and cleared all doughts. The film directed by Vijay Kampali, formerly known as Udaya Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada