'ಬಾಹುಬಲಿ' ಬೆಂಬಲಿಸಿ ಕನ್ನಡ ಚಿತ್ರಗಳಿಗೆ ತೊಂದರೆ ಕೊಟ್ಟರೆ ಹುಷಾರ್.!
'ಬಾಹುಬಲಿ-2' ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. 'ಬಾಹುಬಲಿ-2' ಅಬ್ಬರ ಕನ್ನಡ ನೆಲದಲ್ಲಿ ತುಂಬಾನೇ ಜೋರಾಗಿದೆ. ಇದರಿಂದಲೇ, ಕನ್ನಡ ಸಿನಿಮಾಗಳಿಗೆ 'ಬಾಹುಬಲಿ-2' ಕಂಟಕವಾಗಿದೆ. ['ಬಾಹುಬಲಿ'ಗೆ ಬಲಿಯಾಯ್ತು ಕನ್ನಡ ಚಿತ್ರ: ಇದು ನಿರ್ದೇಶಕರ ನೋವಿನ 'ರಾಗ']
ಕರ್ನಾಟಕದಲ್ಲಿ 'ಬಾಹುಬಲಿ-2' 300ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುತ್ತಿದೆ. ಇದರಿಂದ ಕನ್ನಡ ಚಿತ್ರಗಳಿಗೆ ಥಿಯೇಟರ್ ಪ್ರಾಬ್ಲಂ ಎದುರಾಗಿದೆ. ಕನ್ನಡದ 'ರಾಗ', 'ರಾಜಕುಮಾರ', 'ಚಕ್ರವರ್ತಿ' ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆಯಾಗಿದೆ.
'ಬಾಹುಬಲಿ-2' ಸಿನಿಮಾಗಾಗಿ ಕನ್ನಡದ ಚಿತ್ರಗಳ ಎತ್ತಂಗಡಿ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿ ಓಡುತ್ತಿದ್ರೂ, ಅದನ್ನ ತೆಗೆದು 'ಬಾಹುಬಲಿ-2' ಚಿತ್ರವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...
[ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 'ಬಾಹುಬಲಿ'ಯ ಪಟ್ಟಾಭಿಷೇಕ ದೃಶ್ಯ!
]

ಕನ್ನಡ ಸಿನಿಮಾಗಳಿಗೆ ತೊಂದರೆ ಕೊಡಬೇಡಿ
ನಿನ್ನೆ (ಏಪ್ರಿಲ್ 26) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಾ.ರಾ.ಗೋವಿಂದು ಸುದ್ದಿಗೋಷ್ಠಿ ನಡೆಸಿದ್ರು. ''ಬಾಹುಬಲಿ-2' ಸಿನಿಮಾ ಬಂದಿದೆ ಎನ್ನುವ ದೃಷ್ಠಿಯಿಂದ ಕನ್ನಡದ ಒಳ್ಳೆಯ ಸಿನಿಮಾಗಳಿಗೆ ತೊಂದರೆ ಕೊಡಬೇಡಿ'' ಅಂತ ಸಾ.ರಾ.ಗೋವಿಂದು ಪ್ರದರ್ಶಕರಿಗೆ ಹೇಳಿದ್ದಾರೆ.[ಚೆನ್ನೈನಲ್ಲಿ ಕೇಳೋರೇ ಇಲ್ಲ.. ಬೆಂಗಳೂರಲ್ಲಿ 'ಬಾಹುಬಲಿ'ಯೇ ಎಲ್ಲಾ.!]

ನಮ್ಮ ಗಮನಕ್ಕೆ ತನ್ನಿ
''ಬಾಹುಬಲಿ-2' ಸಿನಿಮಾಗಾಗಿ ಕನ್ನಡದ ಸಿನಿಮಾಗಳನ್ನ ಕಾರಣವಿಲ್ಲದೆ ಚಿತ್ರಮಂದಿರಗಳಿಂದ ಕಿತ್ತು ಹಾಕಿದ್ರೆ ಅಂತಹ ಸಿನಿಮಾ ತಂಡಗಳು ತಕ್ಷಣವೇ ನಮ್ಮ ಗಮನಕ್ಕೆ ತನ್ನಿ'' - ಸಾ.ರಾ.ಗೋವಿಂದು

ಹುಷಾರ್...
''ಕನ್ನಡ ಸಿನಿಮಾಗಳಿಗೆ ತೊಂದರೆ ಕೊಟ್ಟು, ಕನ್ನಡ ಚಿತ್ರಗಳನ್ನ ಪ್ರದರ್ಶನ ಮಾಡುವುದಕ್ಕೆ ಸಹಕಾರ ಕೊಡದಿದ್ದರೆ ಪ್ರತಿಭಟನೆ ನಡೆಸಲಾಗುವುದು'' - ಸಾ.ರಾ.ಗೋವಿಂದು[ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!]

ಕನ್ನಡದ ಕಾಳಜಿ ಇರಲಿ
''ಊರ್ವಶಿ ಚಿತ್ರಮಂದಿರ ಕರ್ನಾಟಕದಲ್ಲಿ ಇದ್ದು, ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡಿಲ್ಲ. ಕನ್ನಡ ಚಿತ್ರಗಳು ಅಂದ್ರೆ ತಾತ್ಸಾರ ಭಾವನೆಯಿಂದ ನೋಡುತ್ತಾರೆ'' - ಸಾ.ರಾ.ಗೋವಿಂದು

ಆತಂಕಕಾರಿ ಬೆಳವಣಿಗೆ
ಕನ್ನಡ ನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ಬೆಲೆ ಇಲ್ಲ ಅಂದ್ರೆ ಹೇಗೆ.? ಕನ್ನಡದ ಒಳ್ಳೆಯ ಸಿನಿಮಾಗಳು ಹೀಗೆ ಬಲಿಯಾದ್ರೆ ಮುಂದೆ ಒಳ್ಳೆ ಸಿನಿಮಾಗಳನ್ನ ಮಾಡಬೇಕು ಎಂದುಕೊಂಡವರು ಸಹ ಹಿಂದೇಟು ಹಾಕುತ್ತಾರೆ.


Click it and Unblock the Notifications











