For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಮ್ಯಾಚ್ ನೋಡುವ ಮುನ್ನಾ ದರ್ಶನ್ ಹೇಳಿರುವ ಈ ಮಾತು ಕೇಳಿ

  |

  ಕ್ರಿಕೆಟ್ ಅನ್ನು ಧರ್ಮವನ್ನಾಗಿ ನೋಡುವ ಭಾರತದಲ್ಲಿ ಐಪಿಎಲ್ ಪ್ರವೇಶದ ನಂತರ, ಕ್ರಿಕೆಟ್ ದೊಡ್ಡ ಉದ್ಯಮವಾಗಿ ಬದಲಾಗಿದೆ. ಪ್ರೇಕ್ಷಕರೂ ಸಹ ಕ್ರಿಕೆಟ್ ಅನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡಿದ್ದಾರೆ. ಕ್ರಿಕೆಟ್, ಅದರಲ್ಲೂ ಐಪಿಎಲ್ ಜೂಜುಕೋರರಿಗೆ ಹಬ್ಬವಾಗಿ ಪರಿಣಮಿಸಿದೆ.

  ಪ್ರತಿ ವರ್ಷ ಐಪಿಎಲ್ ನಡೆದಾಗಲೂ ದೇಶದಾದ್ಯಂತ ಲಕ್ಷಾಂತರ ಮಂದಿ ಬೆಟ್ಟಿಂಗ್ ಆಡುತ್ತಾರೆ ಮನೆ-ಮಠ ಕಳೆದುಕೊಳ್ಳುತ್ತಾರೆ. ಪ್ರತಿವರ್ಷವೂ ಬೆಟ್ಟಿಂಗ್ ಆಡುವವರ ಸಂಖ್ಯೆ ಏರುತ್ತಲೇ ಇರುತ್ತದೆ. ಈ ಬಾರಿಯಂತೂ ಬೆಟ್ಟಿಂಗ್ ಆಪ್‌ ನವರೇ ಐಪಿಎಲ್‌ನ ಮುಖ್ಯ ಪ್ರಾಯೋಜಕರು!

  ದರ್ಶನ್ ಗೆ ಸುದೀಪ್‌ ಸಂಬಂಧದಲ್ಲಿ ಏನಾಗಬೇಕು? ಒಳ್ಳೆ ಹುಡುಗನ ಲೆಕ್ಕಾಚಾರ!ದರ್ಶನ್ ಗೆ ಸುದೀಪ್‌ ಸಂಬಂಧದಲ್ಲಿ ಏನಾಗಬೇಕು? ಒಳ್ಳೆ ಹುಡುಗನ ಲೆಕ್ಕಾಚಾರ!

  ಇಂದಿನಿಂದ (ಶನಿವಾರ) ಐಪಿಎಲ್ 2020 ಸೀಸನ್ ಪ್ರಾರಂಭವಾಗುತ್ತಿದೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಮೊದಲ ಪಂದ್ಯ ನೋಡುವ ಮೊದಲು ನಟ ದರ್ಶನ್ ಹಿಂದೊಮ್ಮೆ ಹೇಳಿದ್ದ ಈ ಮಾತುಗಳನ್ನು ಪುನಃ ಕೇಳಿಸಿಕೊಳ್ಳಿ.

  ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ದರ್ಶನ್ ವಿಡಿಯೋ ವೈರಲ್

  ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ದರ್ಶನ್ ವಿಡಿಯೋ ವೈರಲ್

  ಐಪಿಎಲ್ ಪ್ರಾರಂಭವಾಗುತ್ತಿರುವ ಇಂದು ನಟ ದರ್ಶನ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ದರ್ಶನ್ ಅವರು, ಕ್ರಿಕೆಟ್, ಐಪಿಎಲ್ ಮತ್ತು ಬೆಟ್ಟಿಂಗ್ ಮಹಾಮಾರಿ ಬಗ್ಗೆ ಮಾತನಾಡಿದ್ದಾರೆ.

  'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ

  'ಸಾಲ-ಸೋಲ ಮಾಡಿ ಬೆಟ್ಟಿಂಗ್ ಆಡುತ್ತಾರೆ ಅದು ಸರಿಯಲ್ಲ'

  'ಸಾಲ-ಸೋಲ ಮಾಡಿ ಬೆಟ್ಟಿಂಗ್ ಆಡುತ್ತಾರೆ ಅದು ಸರಿಯಲ್ಲ'

  'ಐಪಿಎಲ್ ಪ್ರಾಂಭವಾಗುತ್ತಿದ್ದಂತೆ ಬಹುತೇಕರು ಬೆಟ್ಟಿಂಗ್ ಆಡಲು ಕಾತರರಾಗಿರುತ್ತಾರೆ. ಮ್ಯಾಚ್‌ ನೋಡುವುದಕ್ಕಿಂತಲೂ ಹೆಚ್ಚಾಗಿ ಬೆಟ್ಟಿಂಗ್ ಬಗ್ಗೆ ಅವರಿಗೆ ಗಮನ ಇರುತ್ತದೆ. ಸಾಲ-ಸೋಲ ಮಾಡಿ ಬೆಟ್ಟಿಂಗ್ ಆಡುತ್ತಾರೆ. ಆದರೆ ಈ ರೀತಿ ಮಾಡುವುದು ಬೇಡ' ಎಂದು ಮನವಿ ಮಾಡಿದ್ದಾರೆ ದರ್ಶನ್.

  ಯಾರೂ ಜೀವನ ಹಾಳುಮಾಡಿಕೊಳ್ಳಬೇಡಿ: ದರ್ಶನ್

  ಯಾರೂ ಜೀವನ ಹಾಳುಮಾಡಿಕೊಳ್ಳಬೇಡಿ: ದರ್ಶನ್

  'ದಯವಿಟ್ಟು ಐಪಿಎಲ್ ಅನ್ನು ಒಂದು ಆಟದ ರೀತಿಯಲ್ಲಿ ನೋಡಿ, ಆಟವನ್ನು ಎಂಜಾಯ್ ಮಾಡಿ, ಆಟಗಾರರು ಕಷ್ಟಪಟ್ಟು ಆಡುತ್ತಿರುತ್ತಾರೆ. ಅವರ ಪ್ರತಿಭೆಗೆ ಬೆಂಬಲ ಕೊಡಿ, ಯಾರೂ ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ' ಎಂದಿದ್ದಾರೆ ನಟ ದರ್ಶನ್.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ವಿಡಿಯೋ ಹಳೆಯದ್ದು ಸಂದೇಶ ಹಳೆಯದ್ದಲ್ಲ!

  ವಿಡಿಯೋ ಹಳೆಯದ್ದು ಸಂದೇಶ ಹಳೆಯದ್ದಲ್ಲ!

  ದರ್ಶನ್ ಅವರ ಹಳೆಯ ವಿಡಿಯೋ ಇದು ಆದರೆ ಇಂದು ಐಪಿಎಲ್ ಪ್ರಾರಂಭವಾಗುತ್ತಿರುವ ಕಾರಣ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಬೆಟ್ಟಿಂಗ್ ಆಡುವವರು ಇರುವ ವರೆಗೂ 'ಬೆಟ್ಟಿಂಗ್ ಆಡಬೇಡಿ' ಎಂದು ದರ್ಶನ್ ನೀಡಿರುವ ಸಂದೇಶ ಹಳೆಯದಾಗಲು ಸಾಧ್ಯವಿಲ್ಲ.

  'ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ': ಹಿಂದಿ ಹೇರಿಕೆ ಖಂಡಿಸಿದ ಡಿ-ಬಾಸ್'ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ': ಹಿಂದಿ ಹೇರಿಕೆ ಖಂಡಿಸಿದ ಡಿ-ಬಾಸ್

  English summary
  Actor Darshan gives important advice on this IPL season. He says to young people that do not play cricket betting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X