»   » 'ಬಂಗಾರದ ಮನುಷ್ಯ' ಸಿದ್ದಲಿಂಗಯ್ಯ ಕುರಿತು ಸಾಕ್ಷ್ಯಚಿತ್ರ: ವಾರ್ತಾ ಇಲಾಖೆ ಚಿಂತನೆ!

'ಬಂಗಾರದ ಮನುಷ್ಯ' ಸಿದ್ದಲಿಂಗಯ್ಯ ಕುರಿತು ಸಾಕ್ಷ್ಯಚಿತ್ರ: ವಾರ್ತಾ ಇಲಾಖೆ ಚಿಂತನೆ!

Posted By:
Subscribe to Filmibeat Kannada

ಕನ್ನಡ ಚಲನಚಿತ್ರರಂಗದ 'ಬಂಗಾರದ ಮನುಷ್ಯ' ನಿರ್ದೇಶಕ ಸಿದ್ದಲಿಂಗಯ್ಯ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಮಾಡಲು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿಂತಿಸುತ್ತಿದೆ.

ಈಗಾಗಲೆ ಸಿದ್ದಲಿಂಗಯ್ಯನವರ ಕುರಿತು ಚಿಕ್ಕ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ. ಆದ್ರೀಗ ಸಿದ್ದಲಿಂಗಯ್ಯನವರ ಸಂಪೂರ್ಣ ಜೀವನ ಹಾಗೂ ಸಿನಿಮಾ ಪಯಣ ಕುರಿತು ದೊಡ್ಡ ಸಾಕ್ಷ್ಯಚಿತ್ರವನ್ನ ತಯಾರಿಸಲು ವಾರ್ತಾ ಇಲಾಖೆ ನಿರ್ಧರಿಸಿದೆ ಎಂದು ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರು ತಿಳಿಸಿದ್ದಾರೆ.


ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ "ಸಿದ್ದಲಿಂಗಯ್ಯ ನೆನಪು'' ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶುಕುಮಾರ್ ಸಿದ್ದಲಿಂಗಯ್ಯನವರ ಸಾಕ್ಷ್ಯಚಿತ್ರದ ಬಗ್ಗೆ ಸ್ವಷ್ಟಪಡಿಸಿದರು.


Documentary on Kannada Legendary Director Siddalingaiah

''ಸಿದ್ದಲಿಂಗಯ್ಯ ಅವರು ಇಲಾಖೆ ನೀಡುವ ಚಲನಚಿತ್ರ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ ದುಡಿದವರು, ಕನ್ನಡ ಚಲನಚಿತ್ರರಂಗಕ್ಕೆ ಗ್ರಾಮೀಣ ಬದುಕಿನ ಅನಾವರಣ ಮಾಡುವ ಮೂಲಕ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದರು. ಪ್ರತಿ ಚಿತ್ರದಲ್ಲೂ ನೆನಪಿಟ್ಟುಕೊಳ್ಳುವ ಪಾತ್ರಗಳನ್ನು ಕಟ್ಟಿಕೊಟ್ಟವರು ಎಂದು ಸ್ಮರಿಸಿದರು.


Documentary on Kannada Legendary Director Siddalingaiah

ಸಿದ್ದಲಿಂಗಯ್ಯ ಅವರು 1969ರಲ್ಲಿ ಬಿಡುಗಡೆಯಾದ 'ಮೇಯರ್ ಮುತ್ತಣ್ಣ' ಚಿತ್ರದ ಮೂಲಕ ನಿರ್ದೇಶಕರಾದರು. 'ಬಂಗಾರದ ಮನುಷ್ಯ', 'ಭೂತಯ್ಯನ ಮಗ ಅಯ್ಯು', 'ತಾಯಿಯೇ ದೇವರು', 'ನಮ್ಮ ಸಂಸಾರ', 'ದೂರದ ಬೆಟ್ಟ' ಚಿತ್ರಗಳು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

English summary
Information and Broadcasting Ministry of Karnataka Decided to Produce the Documentary on Kannada Legendary Director Siddalingaiah. Dr Vishukumar Who has in Director of information and broadcasting ministry, he say the news.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada