Just In
Don't Miss!
- Finance
20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ
- Lifestyle
ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?
- News
ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಶೇ 10ರಷ್ಟು ಏರಿಕೆ
- Automobiles
ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್
- Sports
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ vs ಕೇರಳ, ಕ್ವಾರ್ಟರ್ ಫೈನಲ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್-ಸುದೀಪ್ ಗೆಳೆತನ-ಮುನಿಸಿನ ಬಗ್ಗೆ ದೊಡ್ಡಣ್ಣ ಹೇಳಿದ್ದು ಹೀಗೆ
ಕನ್ನಡ ಸಿನಿಮಾರಂಗದ ದೊಡ್ಡ ಸ್ಟಾರ್ ನಟರು ದರ್ಶನ್ ಹಾಗೂ ಸುದೀಪ್. ಮೊದಲು ಬಹು ಆತ್ಮೀಯ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಕೆಲವು ವರ್ಷಗಳಿಂದ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ ಸ್ಟಾರ್ ವಾರ್‌ಗಳು ಸಹ ವಿಪರೀತ ಮಟ್ಟಕ್ಕೆ ಏರಿದ್ದು. ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ವಾಗ್ಯುದ್ಧಗಳು ನಡೆಯುತ್ತಲೇ ಇರುತ್ತವೆ.
ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇನ್ನೂ ಹಲವಾರು ನಟರೊಂದಿಗೆ ಆತ್ಮೀಯ ಬಾಂಧವ್ಯ ಉಳ್ಳ. ಬಹು ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಾ ಬಂದಿರುವ ಹಿರಿಯ ನಟ ದೊಡ್ಡಣ್ಣ, ಇಂದು ಸುದೀಪ್ ಹಾಗೂ ದರ್ಶನ್ ನಡುವಿನ ಗೆಳೆತನದ ಬಗ್ಗೆ ಮಾತನಾಡಿದ್ದಾರೆ.

ಸ್ಟಾರ್ ವಾರ್ ಬಗ್ಗೆ ದೊಡ್ಡಣ್ಣ ಗೆ ಪ್ರಶ್ನೆ
ಬಾಗಲಕೋಟೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ನಟ ದೊಡ್ಡಣ್ಣ ಅವರಿಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಲು-ಸಾಲು ಪ್ರಶ್ನೆಗಳು ಎದುರಾದವು. ಅದರಲ್ಲಿ ಒಂದು ಕನ್ನಡ ಚಿತ್ರರಂಗದ 'ಸ್ಟಾರ್ ವಾರ್' ಕುರಿತಾದದ್ದಾಗಿತ್ತು.

ದೊಡ್ಡಣ್ಣ ಹೇಳಿದ್ದು ಹೀಗೆ
ಈ ಪ್ರಶ್ನೆಗೆ ಉತ್ತರಿಸಿದ ನಟ ದೊಡ್ಡಣ್ಣ, 'ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಎಂಥಹದ್ದೂ ಇಲ್ಲ. ಸುದೀಪ್-ದರ್ಶನ್ ಎಲ್ಲರೂ ಸ್ನೇಹಿತರೇ. ಸೂರ್ಯನ ಬೆಳಕಿಗೆ ಸಣ್ಣ ಮೋಡ ಅಡ್ಡಬಂದಂತೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಬಂದಿರಬಹುದು ಅಷ್ಟೆ' ಎಂದಿದ್ದಾರೆ.

ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ
ದರ್ಶನ್ ಹಾಗೂ ಸುದೀಪ್ ಬಹುತೇಕ ಒಂದೇ ಸಮಯದಲ್ಲಿ ಚಿತ್ರರಂಗದಲ್ಲಿ ನಾಯಕರಾಗಿ ತೆರೆ ಮೇಲೆ ಬಂದವರು. ಇಬ್ಬರೂ ಬಹು ದೊಡ್ಡ ಸ್ಟಾರ್‌ಗಳಾಗಿ ಚಿತ್ರರಂಗದಲ್ಲಿ ಬೆಳೆದಿದ್ದಾರೆ. ಇಬ್ಬರಿಗೂ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ಇತರ ಭಾಷೆಗಳಿಗೆ ಹೋಲಿಸಿದರೆ ನಮ್ಮಲ್ಲಿ ತುಸು ಕಡಿಮೆಯೇ
ತಮಿಳು, ತೆಲುಗು ಸಿನಿಮಾ ರಂಗಗಳಿಗೆ ಹೋಲಿಸಿದಲ್ಲಿ ಕನ್ನಡದಲ್ಲಿ ಸ್ಟಾರ್ ವಾರ್ಸ್ ತುಸು ಕಡಿಮೆಯೇ. ತಮಿಳಿನಲ್ಲಿ ಅಜಿತ್ ಹಾಗೂ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾತ್ರವೇ ಅಲ್ಲದೆ, ಚಿತ್ರಮಂದಿರಗಳಲ್ಲಿಯೂ ಕಿತ್ತಾಡಿದ ಉದಾಹರಣೆ ಇದೆ. ಜೂ.ಎನ್‌ಟಿಆರ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಗೆ ಚಾಕು ಇರಿದು ಕೊಂದಿದ್ದ ಘಟನೆ ನೆನಪು ಇನ್ನೂ ಮಾಸಿಲ್ಲ.