»   » ಉಳಿದವರು ಕಂಡಂತೆ ಚಿತ್ರ ಒಮ್ಮೆ ಓದಿ

ಉಳಿದವರು ಕಂಡಂತೆ ಚಿತ್ರ ಒಮ್ಮೆ ಓದಿ

Posted By:
Subscribe to Filmibeat Kannada

ಉಳಿದವರು ಕಂಡಂತೆ ಚಿತ್ರದ ಬಗ್ಗೆ ಹಾಗಂತೆ.. ಹೀಗಂತೆ.. ಎಂದು ಮೂಗೆಳೆಯುವ ಜನ, ಚಿತ್ರ ನೋಡಿ ಭಾಷೆ ಅರ್ಥವಾಗಲಿಲ್ಲ, ದೃಶ್ಯ ತಿಳಿಯಲಿಲ್ಲ ಎನ್ನುವ ಜನಕ್ಕೆ ಈಗ ಉಳಿದವರು ಕಂಡಂತೆ ಚಿತ್ರವನ್ನು ಓದಬಹುದಾಗಿದೆ. ಸಿಂಪಲ್ ಸುನಿ ನಿರ್ಮಾಣದಿಂದ ಬಂದ ಉತ್ತಮ ಚಿತ್ರ, ಪ್ರಥಮ ಪ್ರಯತ್ನದಲ್ಲೇ ರಕ್ಷಿತ್ ನಿರ್ದೇಶಕರಾಗಿ ಗೆದ್ದಿದ್ದಾರೆ ಎಂದೆಲ್ಲ ಹೊಗಳಿಸಿಕೊಂಡ ರಕ್ಷಿತ್ ಶೆಟ್ಟಿ ಅವರ ದೃಶ್ಯ ವೈಭವವನ್ನು ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ.

ಸಾಮಾನ್ಯವಾಗಿ ನಿರ್ದೇಶಕರು ಬರೆದುಕೊಳ್ಳುವ ಚಿತ್ರಕಥೆಯ ಮಾದರಿಯಲ್ಲೇ ಉಳಿದವರು ಕಂಡಂತೆ ಚಿತ್ರಕಥೆಯೂ ಸಾಗುತ್ತದೆ. ಪ್ರತಿ ದೃಶ್ಯ ಎಲ್ಲಿ ಚಿತ್ರೀಕರಣವಾಗಬೇಕು? ಕೆಮೆರಾ ಯಾರ ಮೇಲೆ ಯಾವಾಗ ಫೋಕಸ್ ಆಗಬೇಕು? ಹಿನ್ನೆಲೆ ಧ್ವನಿ ಬಳಕೆ, ಇತ್ಯಾದಿ ವಿವರಗಳು ಇದರಲ್ಲಿರುತ್ತವೆ.

ರಕ್ಷಿತ್ ಶೆಟ್ಟಿ ಅವರು ಈ ಚಿತ್ರಕ್ಕೆ ನೇರ ಧ್ವನಿ ಸಂಕಲನ ಸಿಂಕ್ ಸೌಂಡ್ ವ್ಯವಸ್ಥೆ ಬಳಕೆ ಮಾಡಿರುವುದರಿಂದ ಈ ಸ್ಕ್ರಿಪ್ಟ್ ನಲ್ಲಿ ಕೆಮೆರಾ ಕೋನ, ಹೊರಾಂಗಣ/ಒಳಾಂಗಣ ಸೀನ್, ಬೆಳಗ್ಗೆ/ಸಂಜೆ/ ರಾತ್ರಿ ಚಿತ್ರೀಕರಣದ ಸ್ಥಳದ ಮಾಹಿತಿ ಪಡೆದುಕೊಳ್ಳಬಹುದು..

Ulidavaru Kandante Kannada movie script goes online

EXT. DAY : MALPE HARBOR / DOCKING AREA
ಕೆಲವು ಕಾರ್ಮಿಕರು ಹಡಗನ್ನು ದಡಕ್ಕೆ ಎಳೆಯುತ್ತಿರುತ್ತಾರೆ. ಹಡಗನ್ನು ಎಳೆಯಲು, ಹಗ್ಗ ಮತ್ತು ಮರದ ದಿಮ್ಮಿಗಳನ್ನು ಉಪಯೋಗಿಸಿ ಕೆಲವೊಂದು ವ್ಯವಸ್ಥೆ ಮಾಡಲಾಗಿದೆ. ಎಳೆಯರು ಸುಲಭವಾಗುವಂತೆ, ಹಡಗಿನ ಕೆಳಗೆ ಮರದ ದಿಮ್ಮಿಗಳನ್ನು, ಸರಿಸಮಾನವಾಗಿ, ಅಡ್ಡ ಹಾಗೂ ನೇರವಾಗಿ ಜೋಡಿಸಲಾಗಿದೆ. ಹಡಗಿನ ಬೇರೆ ಬೇರೆ ಭಾಗಗಳಿಗೆ ಕಟ್ಟಲಾಗಿರುವ ಹಗ್ಗವನ್ನು ವ್ಯವಸ್ಥಿತ ರೂಪದಲ್ಲಿ ಗಾಣಕ್ಕೆ ಕಟ್ಟಲಾಗಿದೆ. ಕಾರ್ಮಿಕರ ಒಂದು ತಂಡ ದಿಮ್ಸಾಲ್ ಹಾಡುತ್ತಾ ಗಾಣವನ್ನು ತಿರುಗಿಸುತ್ತಿದ್ದರೆ, ಮತ್ತೊಂದು ತಂಡ 'ಆರ್ಯ ಆರ್ಯ' ಎಂದು ಕರೆಯನ್ನು ಕೂಗುತ್ತ, ಹಗ್ಗವನ್ನು ಎಳೆದು, ತಡೆ ಬಂದಾಗ ದಿಮ್ಮಿಗಳ ಜಾರುವಿಕೆ ಸುಲಭವಾಗುವಂತೆ ಮಾಡಿಕೊಡುತ್ತಾರೆ. ಹಡಗನ್ನು ದಡಕ್ಕೆ ಎಳೆಯುತ್ತಿದ್ದಂತೆಯೇ, camera ಎರಡೂ ತಂಡದ ಕಾರ್ಮಿಕರನ್ನು ದಾಟಿ, ನಿಧಾನವಾಗಿ ಹಡಗಿನ ವಿರುದ್ಧ ದಿಕ್ಕಿನಲ್ಲಿ ಸಮುದ್ರದ ಕಡೆಗೆ ಸಾಗುತ್ತದೆ. Camera ಸಮುದ್ರದ ಕಡೆಗೆ ಸಾಗುತ್ತಿದ್ದಂತೆ , ಓರ್ವ 12 ವರ್ಷದ ಬಾಲಕ(ರಿಚ್ಚಿ) ಸಮುದ್ರ ತೀರದಲ್ಲಿ, ಸಮುದ್ರವನ್ನು ನೋಡುತ್ತಾ, ದಿಮ್ಸಾಲ್ ಗುನುಗುತ್ತಾ ನಿಂತಿರುತ್ತಾನೆ. Camera ಅವನ ಹತ್ತಿರ ಹೋಗಿ ನಿಲ್ಲುತ್ತದೆ. ಅವನ Close up ಗೆ ಬಂದರೆ, ಅವನು ಮೌನವಾಗುತ್ತಾನೆ. ಅವನ ಕಣ್ಣುಗಳು ಯಾರದ್ದೋ ನಿರೀಕ್ಷೆಯಲ್ಲಿರುವಂತಿದೆ. ಒಂದಷ್ಟು ಕ್ಷಣ ಮೌನವಾಗಿ ಸಮುದ್ರವನ್ನು ನೋಡುತ್ತಾ ಮತ್ತೆ ದಿಮ್ಸಾಲ್ ಗುನುಗಲು ಪ್ರಾರಂಭಿಸುತ್ತಾನೆ.

Cut to: ಕಾರ್ಮಿಕರು ಗಾಣ ದೂಗುವ ಹಾಗೂ ಹಡಗನ್ನು ಎಳೆಯುವ ಕೆಲವೊಂದು cut in shotsಗಳಿಂದ opening credits ಪ್ರಾರಂಭವಾಗುತ್ತದೆ

INT. NIGHT: LADIES HOSTEL
ರೆಜಿನಾಳ ಕೈಗಳು ಖಾಲಿ ಹಾಳೆಯ ಮೇಲೆ ಬರೆಯುತ್ತಿರುವ close ups,. ರೆಜಿನ ಒಬ್ಬಳು ಪತ್ರಕರ್ತೆ. ಅವಳು ಒಂದು article ಬರೆಯುತ್ತಿದ್ದಾಳೆ. Table ಮೇಲೆ ಪುಸ್ತಕಗಳು ಕೆಲವೊಂದು photos, table lamp, voice recorder ಹಾಗೂ ಅರ್ಧ ಕುಡಿದಿರುವ coffee cup ಇರುತ್ತದೆ... ಮುಂದೆ...
ಚಿತ್ರದ ಆರಂಭದ ದೃಶ್ಯದ ಸ್ಕ್ರಿಪ್ಟ್ ಇಲ್ಲಿ ನೀಡಲಾಗಿದೆ ಉಳಿದಿದ್ದನ್ನು ಉಳಿದವರು ಕಂಡಂತೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ

English summary
Ulidavaru Kandante Kannada movie script goes online. The script can be downloaded for free in English and Kannada from the movie website. The movie written and directed by Rakshit Shetty and Produced by Suvin Cinemas, makers of Simpallagondh Love Story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada