For Quick Alerts
  ALLOW NOTIFICATIONS  
  For Daily Alerts

  ಒಂದೇ ಫ್ರೇಮ್‌ನಲ್ಲಿ ಡಾ.ಬ್ರೋ,ಗ್ಲೋಬಲ್ ಕನ್ನಡಿಗ,ಫ್ಲೈಯಿಂಗ್ ಪಾಸ್ ಪೋರ್ಟ್:ಹೊನ್ನಾವರ ಹಿನ್ನೀರಿನಲ್ಲಿ ಯೂಟ್ಯೂಬರ್ಸ್!

  |

  ಇಂಟರ್‌ನೆಟ್ ಜಮಾನ ಬದಲಾಗಿದ್ದೇ ಆಗಿದ್ದು, ಯೂಟ್ಯೂಬರ್‌ಗಳು ಸ್ಟಾರ್ ಪಟ್ಟಕ್ಕೇರಿದ್ದಾರೆ. ತಮಗೆ ತಿಳಿದಂತೆ ತಮ್ಮದೇ ಶೈಲಿಯಲ್ಲಿ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಚಿತ್ರ ವಿಚಿತ್ರವಾದ ವಿಡಿಯೋಗಳನ್ನು ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಹಾಕುತ್ತಿದ್ದಾರೆ.

  ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡೋದು ಕೂಡ ಈಗ ಒಂದು ವೃತ್ತಿಯಂತಾಗಿದೆ. ಅವರವರ ನಡುವೆಯೇ ಕಾಂಪಿಟೇಷನ್ ಏರ್ಪಟ್ಟಿದೆ. ಹೀಗಾಗಿ ಯೂಟ್ಯೂಬರ್‌ಗಳು ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ವಿರಳ.

  ಆದ್ರೀಗ, ಮಿಲಿಯನ್ ಗಟ್ಟಲೇ ವೀವ್ಸ್ ಜೊತೆ ಜನರ ಮನಸ್ಸು ಗೆದ್ದಿರೋ ಯೂಟ್ಯೂಬರ್‌ಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ಬ್ರೋ, ಫ್ಲೈಯಿಂಗ್ ಪಾಸ್ ಪೋರ್ಟ್, ಗ್ಲೋಬಲ್ ಕನ್ನಡಿಗ ಅಂತಹ ಯೂಟ್ಯೂಬ್ ಸ್ಟಾರ್‌ಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಡಾಕ್ಟರ್ ಬ್ರೋ ಎಂದೇ ಜನಪ್ರಿಯಾಗಿರುವ ಗಗನ್, ಫ್ಲೈಯಿಂಗ್ ಪಾಸ್ ಪೋರ್ಟ್ ಖ್ಯಾತಿಯ ಆಶಾ ಮತ್ತು ಕಿರಣ್ ಸ್ಯಾಂಡಲ್‌ವುಡ್ ನಟ ಹಾಗೂ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನ ಮಹಾಬಲ ರಾಮ್ ಇವರೆಲ್ಲರೂ ಒಟ್ಟಿಗೆ ಸೇರಿ ಒಂದು ಟ್ರಾವೆಲ್ ವಿಡಿಯೋ ಮಾಡಿದ್ದಾರೆ. ಅದರ ಬಗ್ಗೆನೇ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

  ಡಾಕ್ಟರ್ ಬ್ರೋ, ಫ್ಲೈಯಿಂಗ್ ಪಾಸ್ ಪೋರ್ಟ್, ಗ್ಲೋಬಲ್ ಕನ್ನಡಿಗ ಅಂತಹ ಯೂಟ್ಯೂಬ್ ಸ್ಟಾರ್‌ಗಳು ಒಟ್ಟಿಗೆ ಸೇರಿ, ಹೊನ್ನಾವರದ ಹಿನ್ನೀರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾವೆಲ್ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  Dr Bro,Flaying Passport,Global Kannadiga Fame Youtubers Honnavara Trip

  ಇದೇ ಮೊದಲ ಬಾರಿಗೆ ಕನ್ನಡದ ಟಾಪ್ ಯೂಟ್ಯೂಬರ್‌ಗಳು ಒಟ್ಟಿಗೆ ಸೇರಿ ಟ್ರಾವೆಲ್ ವಿಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನಲ್ಲಿ ಮಹಾಬಲ ರಾಮ್ ಶೇರ್ ಮಾಡಿದ್ದಾರೆ. ಮೂವರು ಯೂಟ್ಯೂಬರ್‌ಗಳು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ಕಂಡು ಪ್ರೇಕ್ಷಕರು ದಿಲ್ ಖುಷ್ ಆಗಿದ್ದಾರೆ.

  English summary
  Dr Bro,Flying Passport,Global Kannadiga Famous Youtubers Honnavar Trip, Know More.
  Tuesday, January 17, 2023, 23:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X