»   » ಸಲ್ಮಾನ್, ಕರೀನಾ, ಕತ್ರೀನಾ ಇರ್ಲಿ.! ನಮ್ಮ ರಾಜಣ್ಣ ಏನ್ ಪಾಪ ಮಾಡಿದ್ರು?

ಸಲ್ಮಾನ್, ಕರೀನಾ, ಕತ್ರೀನಾ ಇರ್ಲಿ.! ನಮ್ಮ ರಾಜಣ್ಣ ಏನ್ ಪಾಪ ಮಾಡಿದ್ರು?

By: 'ಫಿಲ್ಮಿಬೀಟ್ ಕನ್ನಡ' ಓದುಗರು
Subscribe to Filmibeat Kannada

ಇದುವರೆಗೂ ನಾನು ಲಂಡನ್ ಗೆ ಹೋಗಿಲ್ಲ. ಒಂದಲ್ಲ ಒಂದು ದಿನ ಹೋದರೆ, ಅಲ್ಲಿ ನಮ್ಮವರು...ನಮ್ಮ ಭಾಷೆ ಮಾತನಾಡುವವರು ಯಾರಾದರೂ ಸಿಕ್ಕರೆ, ನಿಮಗೆ ಹೇಗೆ ಅನಿಸುತ್ತೋ ಗೊತ್ತಿಲ್ಲ. ಆದ್ರೆ, ನನಗಂತೂ ಸಿಕ್ಕಾಪಟ್ಟೆ ಖುಷಿ ಆಗುತ್ತೆ. ಮರಭೂಮಿಯಲ್ಲಿ ನೀರು ಸಿಕ್ಕದ ಹಾಗೆ.!

ಹೀಗಿರುವಾಗ, ಅಲ್ಲಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇದ್ರೆ? ಕನ್ನಡಿಗರ ಮಣ್ಣಲ್ಲಿ ಹುಟ್ಟಿದ ನಮಗೆ ಆನಂದ ಆಗಲ್ವಾ? ಹೆಮ್ಮೆ ಅನ್ಸಲ್ವಾ? ನೀವೇ ಹೇಳಿ....

ಹಾಲಿವುಡ್ ಸುದ್ದಿ ನಮಗೆ ಬೇಡ, ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಇದುವರೆಗೂ ಬಾಲಿವುಡ್ ಮಂದಿಯದ್ದೇ ಕಾರುಬಾರು. ಶಾರುಖ್ ಖಾನ್, ಕರೀನಾ ಕಪೂರ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್, ಹೃತಿಕ್ ರೋಷನ್, ಕತ್ರೀನಾ ಕೈಫ್ ರವರ ಮೇಣದ ಪ್ರತಿಮೆ ಇದೆ.

ತನ್ನ ಪ್ರತಿಬಿಂಬದಂತೆ ಇರುವ ಮೇಣದ ಪ್ರತಿಮೆ ಜೊತೆ ನಟಿ ಕರೀನಾ ಕಪೂರ್

ತನ್ನ ಪ್ರತಿಬಿಂಬದಂತೆ ಇರುವ ಮೇಣದ ಪ್ರತಿಮೆ ಜೊತೆ ನಟಿ ಕರೀನಾ ಕಪೂರ್

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಶಾರುಖ್ ಖಾನ್, ಐಶ್ವರ್ಯ ರೈ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಶಾರುಖ್ ಖಾನ್, ಐಶ್ವರ್ಯ ರೈ ಪ್ರತಿಮೆ

ವ್ಯಾಕ್ಸ್ ಸ್ಟ್ಯಾಚ್ಯು ಜೊತೆ ಕಿಂಗ್ ಖಾನ್ ಶಾರುಖ್

ವ್ಯಾಕ್ಸ್ ಸ್ಟ್ಯಾಚ್ಯು ಜೊತೆ ಕಿಂಗ್ ಖಾನ್ ಶಾರುಖ್

ನಟಿ ಕತ್ರೀನಾ ಕೈಫ್ ಮೇಣದ ಪ್ರತಿಮೆ

ನಟಿ ಕತ್ರೀನಾ ಕೈಫ್ ಮೇಣದ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ

ಬ್ರಿಟನ್ ರಾಜಕುಮಾರ್ ವಿಲಿಯಂ-ಕೇಟ್ ದಂಪತಿ ಪ್ರತಿಮೆ

ಬ್ರಿಟನ್ ರಾಜಕುಮಾರ್ ವಿಲಿಯಂ-ಕೇಟ್ ದಂಪತಿ ಪ್ರತಿಮೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ವ್ಯಾಕ್ಸ್ ಸ್ಟ್ಯಾಚ್ಯು

ಮಾಸ್ಟರ್ ಬ್ಲಾಸ್ಟರ್ ಸಚಿನ್ ವ್ಯಾಕ್ಸ್ ಸ್ಟ್ಯಾಚ್ಯು

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಅಮಿತಾಬ್ ಬಚ್ಚನ್ ವ್ಯಾಕ್ಸ್ ಸ್ಟ್ಯಾಚ್ಯು

ಅಮಿತಾಬ್ ಬಚ್ಚನ್ ವ್ಯಾಕ್ಸ್ ಸ್ಟ್ಯಾಚ್ಯು

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಹೃತಿಕ್ ರೋಷನ್ ಮೇಣದ ಪ್ರತಿಮೆ

ಹೃತಿಕ್ ರೋಷನ್ ಮೇಣದ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆ

ಉಳಿದಂತೆ ಸಚಿನ್, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ಈಗ ಲೇಟೆಸ್ಟ್ ಆಗಿ ಪ್ರಧಾನಿ ನರೇಂದ್ರ ಮೋದಿ ರವರ ವಾಕ್ಸ್ ಸ್ಟ್ಯಾಚ್ಯು ಇಟ್ಟಿದ್ದಾರೆ.

ಜಗತ್ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳಿಗೆ ಇಲ್ಲಿ ಸ್ಥಾನ ಇದೆ ಅಂತಾದರೆ, ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಜನಪ್ರಿಯ ವ್ಯಕ್ತಿ ಅಲ್ಲವೇ?

ಕರೀನಾ ಕಪೂರ್, ಐಶ್ವರ್ಯ ರೈ ಬಚ್ಚನ್, ಮಾಧುರಿ ದೀಕ್ಷಿತ್, ಹೃತಿಕ್ ರೋಷನ್, ಕತ್ರೀನಾ ಕೈಫ್, ಸಲ್ಮಾನ್ ಖಾನ್ ಗೆ ಹೋಲಿಸಿದ್ರೆ, ಡಾ.ರಾಜ್ ಕುಮಾರ್ ಯಾವುದರಲ್ಲಿ ಕಮ್ಮಿ ಇದ್ದಾರೆ ಸ್ವಾಮಿ.?

ಕನ್ನಡ ಚಿತ್ರರಂಗ ಅಂದ ಕೂಡಲೆ ಎಲ್ಲರ ಬಾಯಲ್ಲೂ ಥಟ್ ಅಂತ ನೆನಪಿಗೆ ಬರುವ ಹೆಸರು ಡಾ.ರಾಜ್ ಕುಮಾರ್. ಬಣ್ಣದ ಬದುಕಿನಲ್ಲಿ ಡಾ.ರಾಜ್ ಗೆ ಇರುವ ಅನುಭವದಷ್ಟು ಕರೀನಾ-ಕತ್ರೀನಾಗೆ ವಯಸ್ಸಾಗಿಲ್ಲ..! ಒಪ್ತೀರಾ ನನ್ನ ಮಾತನ್ನ.?

ಬರೀ ಕರ್ನಾಟಕ ಮಾತ್ರ ಅಲ್ಲ, ಇಡೀ ಭಾರತದಾದ್ಯಂತ ಹಾಗೂ ಅನೇಕ ದೇಶಗಳಲ್ಲಿ ಡಾ.ರಾಜ್ ಕುಮಾರ್ ಗೆ ಅಭಿಮಾನಿಗಳಿದ್ದಾರೆ.

Dr Raj's wax statue in Madame Tussauds; Opinion by Filmibeat Kannada reader

ರಾಜ್ ಕುಟುಂಬದವರ ಸಿನಿಮಾ ಬಿಡುಗಡೆ ಆಗ್ತಿದೆ ಅಂದ್ರೆ, ಬೆಂಗಳೂರಿಗೆ ಬಂದು ಸಿನಿಮಾ ನೋಡುವ ವಿದೇಶಿಯರಿದ್ದಾರೆ. ಹೀಗಿರುವಾಗ, ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಹೇಳಿರುವುದರಲ್ಲಿ ಹಂಡ್ರೆಡ್ ಪರ್ಸೆಂಟ್ ಅರ್ಥ ಇದೆ ಎಂಬುದು ನನ್ನ ಅನಿಸಿಕೆ. ಹೀಗಾಗಿ, ನನ್ನ ಕಡೆಯಿಂದ ಇಷ್ಟುದ್ದ ಪೀಠಿಕೆ. [ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇರುವ ಮಹಾದಾಸೆ ಏನು?]

ಆದಷ್ಟು ಬೇಗ, ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಡಾ.ರಾಜ್ ಕುಮಾರ್ ಮೇಣದ ಪ್ರತಿಮೆ ಅನಾವರಣ ಆಗಲಿ. ಹಾಗೇ, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ರಂತಹ ಸಾಧಕರಿಗೂ ಇದೇ ಗೌರವ ಸಿಗುವಂತಾಗಲಿ ಎಂಬುದು ನನ್ನ ಆಶಯ.

ನಿಮ್ಮ ಆಶಯ ಕೂಡ ಇದೇ ಆಗಿದ್ರೆ, ನನ್ನ ಜೊತೆ ನೀವೂ ನಿಮ್ಮ ದನಿ ಸೇರಿಸಿ. ನಿಮ್ಮ ಅಭಿಪ್ರಾಯವನ್ನು ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ...

English summary
A loyal Filmibeat Kannada reader has expressed his/her opinion and support for Kannada Actor Dr.Shiva Rajkumar to add his father Dr.Rajkumar's wax statue in Madame Tussauds, London.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada