For Quick Alerts
  ALLOW NOTIFICATIONS  
  For Daily Alerts

  ಮಂಗಳವಾರ ನಟ ಸಾರ್ವಭೌಮ ಡಾ.ರಾಜ್ ಅವರ 10ನೇ ಪುಣ್ಯತಿಥಿ

  By Suneetha
  |

  ಕನ್ನಡದ ನಟ ಸಾರ್ವಭೌಮ, ವರನಟ, ಕನ್ನಡದ ಮೇರು ನಟ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ-ಕದ್ದಿರುವ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ನಾಳೆಗೆ (ಏಪ್ರಿಲ್ 12) ಭರ್ತಿ 10 ವರ್ಷಗಳಾಗುತ್ತಿವೆ.

  ನಾಳೆ (ಏಪ್ರಿಲ್ 12) ಡಾ.ರಾಜ್ ಕುಮಾರ್ ಅವರ ಪವಿತ್ರ ಸಮಾಧಿ ಇರುವ ಸ್ಥಳವಾದ ಕಂಠೀರವ ಸ್ಟುಡಿಯೋದಲ್ಲಿ, ಅವರ ಸ್ಮಾರಕಕ್ಕೆ ಡಾ.ರಾಜ್ ಕುಟುಂಬದವರು ಹಾಗೂ ಲಕ್ಷಾಂತರ ಅಭಿಮಾನಿಗಳು ನಮನ ಸಲ್ಲಿಸಲಿದ್ದಾರೆ.[ಡಾ.ರಾಜ್ ಕುಮಾರ್ 9 ನೇ ಪುಣ್ಯತಿಥಿಗೆ ಜನಸಾಗರ]

  ಪ್ರತೀ ವರ್ಷದಂತೆ ಈ ವರ್ಷ ಕೂಡ ಸ್ಮಾರಕಕ್ಕೆ ನಮನ ಸಲ್ಲಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಅವರ ಹೆಸರಿನಲ್ಲಿ ಅನ್ನ ಸಂತರ್ಪಣೆ ನೆರವೇರಲಿದ್ದು, ತದನಂತರ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.[ಧ್ರುವತಾರೆ ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ]

  ಚಲನಚಿತ್ರ ಸಂಘದ ಹಲವಾರು ಗಣ್ಯರು ಹಾಗೂ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ನಾಳೆ ಪುಣ್ಯತಿಥಿ ಸಮಾರಂಭದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಭಾಗವಹಿಸಲಿದ್ದು, ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲಿದ್ದಾರೆ.

  English summary
  Karnataka's Matinee Idol Dr.Rajkumar 10th Death Anniversary Tomorrow (April 12th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X