»   » ಡಾ.ರಾಜ್ ಹುಟ್ಟುಹಬ್ಬ ; ಎಲ್ಲೆಲ್ಲಿ ಏನೇನು ವಿಶೇಷ..?

ಡಾ.ರಾಜ್ ಹುಟ್ಟುಹಬ್ಬ ; ಎಲ್ಲೆಲ್ಲಿ ಏನೇನು ವಿಶೇಷ..?

Posted By:
Subscribe to Filmibeat Kannada

ಏಪ್ರಿಲ್ 24 ಬರೀ ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ಅಲ್ಲ. ಅಂದು ಇಡೀ ನಾಡಿಗೆ ಹಬ್ಬ. ಕನ್ನಡ ಸಿನಿ ಪ್ರಿಯರು ಸಂಭ್ರಮ ಪಡುವ ಹಬ್ಬ. ರಾಜ್ಯದ ಮೂಲೆ ಮೂಲೆಯಲ್ಲೂ ನಟಸಾರ್ವಭೌಮನ ಅಭಿಮಾನಿಗಳು ಅಪ್ಪಾಜಿ ಜನ್ಮದಿನವನ್ನ ಸಡಗರದಿಂದ ಆಚರಿಸುತ್ತಾರೆ.

ಈ ಸಡಗರ ಈ ವರ್ಷ ಮತ್ತಷ್ಟು ಇಮ್ಮಡಿಗೊಳಿಸುವುದಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಅದರೊಂದಿಗೆ ಅಣ್ಣಾವ್ರ ಮುದ್ದಿನ ಮಕ್ಕಳ ಹೊಸ ಚಿತ್ರಗಳು ಕೂಡ ಅಂದೇ ಸೆಟ್ಟೇರುತ್ತಿರುವುದು 'ರಾಜವಂಶ' ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]


ಎಲ್ಲೆಲ್ಲಿ ಏನೇನು ವಿಶೇಷತೆಗಳಿವೆ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ.....


'ರಾಜಕುಮಾರ' ಟೈಟಲ್ ಲಾಂಚ್

ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದೇ ಪುತ್ರ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಟೈಟಲ್ ಲಾಂಚ್ ಆಗಲಿದೆ. ಅಪ್ಪು ಬರ್ತಡೆಯಂದು ಅನೌನ್ಸ್ ಆದ ಈ ಚಿತ್ರಕ್ಕೆ 'ರಾಜಕುಮಾರ' ಅಂತ ಶೀರ್ಷಿಕೆ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಅಪ್ಪಾಜಿ ಹುಟ್ಟುಹಬ್ಬದಂದೇ ಗ್ರ್ಯಾಂಡ್ ಆಗಿ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್. [ಪವರ್ ಸ್ಟಾರ್ ಅಭಿನಯದ ಹೊಸ ಚಿತ್ರಕ್ಕೆ 'ಅಣ್ಣಾವ್ರ' ಹೆಸರು]


'ಬಾದ್ ಷ' ಮುಹೂರ್ತ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ 'ಬಾದ್ ಷ' ಮುಹೂರ್ತ ಕೂಡ ಅಪ್ಪಾಜಿ ಹುಟ್ಟುಹಬ್ಬದಂದೇ ನೆರವೇರಿಸುವುದಕ್ಕೆ ನಿರ್ದೇಶಕ ಆರ್.ಚಂದ್ರು ಸಿದ್ದತೆ ನಡೆಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಗಿದ್ದು, ಟಾಲಿವುಡ್ ನ 'ಬಾಹುಬಲಿ' ಚಿತ್ರಕಥೆ ರಚಿಸಿದವರು 'ಬಾದ್ ಷ' ಸ್ಕ್ರಿಪ್ಟ್ ತಯಾರಿಯಲ್ಲಿ ತೊಡಗಿದ್ದಾರೆ. 'ಮೈಲಾರಿ' ಯಶಸ್ಸಿನ ನಂತರ ಆರ್.ಚಂದ್ರು ಮತ್ತು ಶಿವಣ್ಣ ಒಂದಾಗುತ್ತಿರುವ ಸಿನಿಮಾ 'ಬಾದ್ ಷ'. [ಶಿವಣ್ಣ ಮಹತ್ವಾಕಾಂಕ್ಷಿ 'ಬಾದ್ ಷಾ'ಗೆ ಬಾಹುಬಲಿ ತಂಡ]


ವಿನಯ್ ರಾಜ್ ಕುಮಾರ್ ಹೊಸ ಚಿತ್ರದ ಟೈಟಲ್ ಲಾಂಚ್

'ಸಿದ್ದಾರ್ಥ' ಚಿತ್ರ ಯಶಸ್ವಿ ಆದ ಬಳಿಕ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಕೂಡ ಅಪ್ಪಾಜಿ ಹುಟ್ಟುಹಬ್ಬದಂದೇ ನಡೆಯಲಿದೆ. ಅಪ್ಪಾಜಿಯ ಆಶೀರ್ವಾದ ಪಡೆದು ಈ ಚಿತ್ರಕ್ಕೆ ಚಾಲನೆ ನೀಡಿರುವ ನಿರ್ದೇಶಕ 'ಜೋಗಿ' ಪ್ರೇಮ್, ಏಪ್ರಿಲ್ 24 ರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಟೈಟಲ್ ಲಾಂಚ್ ಮಾಡಲಿದ್ದಾರಂತೆ. ಈಗಾಗಲೇ ಸಿನಿಮಾದ ತಯಾರಿಗಾಗಿ ವಿನಯ್ ರಾಜ್ ಕುಮಾರ್ ಮುಂಬೈಗೆ ತೆರಳಿದ್ದಾರೆ. ['ಜೋಗಿ' ಪ್ರೇಮ್ ಆಕ್ಷನ್ ಕಟ್ ನಲ್ಲಿ ವಿನಯ್ ರಾಜ್]


ರಿಲೀಸ್ ಆಗುತ್ತಿದೆ 'ದಕ್ಷ'

ವರನಟ ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿ ಕಲಾಸಾಮ್ರಾಟ್ ಎಸ್.ನಾರಾಯಣ್. ಅಣ್ಣಾವ್ರ ಜೊತೆ 'ಶಬ್ದವೇಧಿ' ಸಿನಿಮಾ ಮಾಡಿದ್ದ ಎಸ್.ನಾರಾಯಣ್, ಈಗ ತಮ್ಮ ನಿರ್ದೇಶನದಲ್ಲಿ ಮೂಡಿಬಂದಿರುವ 'ದಕ್ಷ' ಚಿತ್ರವನ್ನ ಏಪ್ರಿಲ್ 24 ರಂದು ತೆರೆಗೆ ತರುತ್ತಿದ್ದಾರೆ. ಒಂದೇ ಟೇಕ್ ನಲ್ಲಿ ರೆಡಿಯಾಗಿರುವ ಈ ಸಿನಿಮಾ ಕಳೆದ ವರ್ಷ ಚಿತ್ರೀಕರಣಗೊಂಡಿತ್ತು. ಸೈನಿಕನ ಪಾತ್ರದಲ್ಲಿ ದುನಿಯಾ ವಿಜಿ ಕಾಣಿಸಿಕೊಂಡಿದ್ದಾರೆ. [ಡಾ.ರಾಜ್ ಹುಟ್ಟುಹಬ್ಬದಂದು 'ದಕ್ಷ' ಬೆಳ್ಳಿತೆರೆಗೆ]


ಕಂಠೀರವ ಸ್ಟುಡಿಯೋದಲ್ಲಿ ವಿವಿಧ ಕಾರ್ಯಕ್ರಮ

ಇದಿಷ್ಟೇ ಅಲ್ಲದೇ, ಅಣ್ಣಾವ್ರ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ವಿವಿಧ ಕಾರ್ಯಕ್ರಮಗಳನ್ನ ಡಾ.ರಾಜ್ ಅಭಿಮಾನಿಗಳ ಸಂಘ ಆಯೋಜಿಸಿದೆ. ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳಿಂದ ಅಣ್ಣಾವ್ರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ ಅವರ ಅಭಿಮಾನಿಗಳು.


English summary
Karnataka's Matinee Idol Dr.Rajkumar's 86th Birthday on April 24th. On this occasion, Shivarajkumar's 'Baadshah' movie muhoortha is scheduled. Meanwhile, Puneeth Rajkumar's new movie 'Rajakumara' and Vinay Rajkumar's upcoming film's title launch program is fixed. S.Narayan directorial 'Daksha' is also releasing on the same day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada