»   » ಅಚ್ಚ ಹೊಸ ಕಾಪಿಯೊಂದಿಗೆ ಅಣ್ಣಾವ್ರ 'ನಾನೊಬ್ಬ ಕಳ್ಳ'

ಅಚ್ಚ ಹೊಸ ಕಾಪಿಯೊಂದಿಗೆ ಅಣ್ಣಾವ್ರ 'ನಾನೊಬ್ಬ ಕಳ್ಳ'

Posted By:
Subscribe to Filmibeat Kannada

ಹಳೆ ಕನ್ನಡ ಚಿತ್ರಗಳಿಗೆ ಮತ್ತೆ ಡಿಮ್ಯಾಂಡ್ ಶುರುವಾಗಿದೆಯೇ? ಈಗ ಮರು ಬಿಡುಗಡೆಯಾಗುತ್ತಿರುವ ಚಿತ್ರಗಳ ಪಟ್ಟಿ ನೋಡಿದರೆ ಹಳೆ ಚಿತ್ರಗಳಿಗೂ ಬಲು ಬೇಡಿಕೆ ಇರುವುದು ಗೊತ್ತಾಗುತ್ತದೆ. ಇತ್ತೀಚೆಗೆ ಅಣ್ಣಾವ್ರ 'ಆಪರೇಷನ್ ಡೈಮಂಡ್ ರಾಕೆಟ್' ಹಲವಾರು ಬಾರಿ ರೀ ರಿಲೀಸ್ ಆಗಿದೆ.

ಈಗ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿರುವ 'ನಾನೊಬ್ಬ ಕಳ್ಳ' ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಚಿತ್ರ ಅಚ್ಚಹೊಸ ಕಾಪಿಯೊಂದಿಗೆ ಏಪ್ರಿಲ್ ನಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಯುಎಫ್ಓ ಹಾಗೂ ಕ್ಯೂಬ್ ಡಿಜಿಜಲ್ ಸೌಂಡ್ ನಲ್ಲಿ ಚಿತ್ರವನ್ನು ವೀಕ್ಷಿಸಬಹುದು.

Dr Raj in Nanobba Kalla

ಈ ಚಿತ್ರದ ಹಂಚಿಕೆದಾರರು ಎಂ ಮುನಿರಾಜು. ರಾಶಿ ಬ್ರದರ್ಸ್ ನಿರ್ಮಾಣದ ಈ ಚಿತ್ರ 1979ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್ ಜೊತೆ ಲಕ್ಷ್ಮಿ ಅಭಿನಯಿಸಿದ್ದಾರೆ. ದೊರೆ ಭಗವಾನ್ ನಿರ್ದೇಶನ, ರಾಜನ್ ನಾಗೇಂದ್ರ ಸಂಗೀತ ಇರುವ ಚಿತ್ರವನ್ನು ಎಸ್ ರಾಮನಾಥನ್ ಹಾಗೂ ಎಸ್ ಶಿವರಾಂ ನಿರ್ಮಿಸಿದ್ದಾರೆ.

ಈ ಚಿತ್ರದ ಅಷ್ಟೂ ಹಾಡುಗಳನ್ನು ಗಾನಗಂಧರ್ವ ಡಾ.ರಾಜ್ ಹಾಡಿರುವುದು ವಿಶೇಷ. ಎಲ್ಲ ಹಾಡುಗಳಿಗೂ ಸಾಹಿತ್ಯ ಚಿ.ಉದಯಶಂಕರ್. ಚಿತ್ರದ ಉಳಿದ ಪಾತ್ರವರ್ಗದಲ್ಲಿ ಕಾಂಚನಾ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ಟೈಗರ್ ಪ್ರಭಾಕರ್, ರಾಜಾನಂದ, ಧೀರೇಂದ್ರ ಗೋಪಾಲ್, ಶಿವಪ್ರಕಾಶ್, ವಜ್ರಮುನಿ, ಎಂಎಸ್ ಸತ್ಯ, ಚಿ ಉದಯಶಂಕರ್, ಕೆಸಿಎನ್ ಚಂದ್ರಶೇಖರ್ ಮುಂತಾದರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
kannada film 'Nanobba Kalla' (1979) re-releasing in April, 2014. The Movie is Directed By Dorai-Bhagvan, Produced by S Ramanathan, S Shivaram, Music By Rajan-Nagendra, Cinematography By Chittibabu, Starring : Dr Rajkumar, Lakshmi, Kanchana, Thoogudeepa Srinivas, Shakthi Prasad, Tiger Prabhakar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada