»   » ಅಣ್ಣಾವ್ರ 'ಎರಡು ಕನಸಿ'ನ ಕಹಾನಿ ಮತ್ತೆ ತೆರೆ ಮೇಲೆ

ಅಣ್ಣಾವ್ರ 'ಎರಡು ಕನಸಿ'ನ ಕಹಾನಿ ಮತ್ತೆ ತೆರೆ ಮೇಲೆ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ವರ್ಷಗಳೇ ಗತಿಸಿವೆ. ನಟಸಾರ್ವಭೌಮ ಅಭಿನಯದ ಚಿತ್ರಗಳನ್ನ ನೋಡ್ತಿದ್ದವರಿಗೆ ಅಣ್ಣಾವ್ರನ್ನ ಮಿಸ್ ಮಾಡದೆ ಇರೋಕೆ ಸಾಧ್ಯನೇ ಇಲ್ಲ. ಅಂತಹ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ಅಪ್ಪಾಜಿ ಪ್ರತ್ಯಕ್ಷವಾಗ್ತಿದ್ದಾರೆ.

ಹೌದು, ಇತ್ತೀಚೆಗಷ್ಟೇ ಕಲರ್ ಫುಲ್ 'ಕಸ್ತೂರಿ ನಿವಾಸ'ದ ಮೂಲಕ ದೊಡ್ಡ ಪರದೆ ಮೇಲೆ ಮಿನುಗಿದ್ದ ರಾಜಣ್ಣ, ಇದೀಗ ಮತ್ತೊಂದು ಬಣ್ಣದ ಕಹಾನಿಯಿಂದ ತೆರೆ ಮೇಲೆ ಮಿಂಚಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಗಾಂಧಿನಗರದ ಚಿತ್ರಮಂದಿರಗಳಲ್ಲಿ ಅಣ್ಣಾವ್ರ ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ, ಅವರ ಡೈಲಾಗ್ ಕೇಳಿ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುವ ಚಾನ್ಸ್ ಮತ್ತೊಮ್ಮೆ ಎಲ್ಲರಿಗೂ ಸಿಗಲಿದೆ.

Dr.Rajkumar starrer Eradu Kanasu

ಅಂದ್ಹಾಗೆ, ರೀ ರಿಲೀಸ್ ಗೆ ಸಿದ್ದವಾಗಿರುವ ಅಪ್ಪಾಜಿಯ ಸಿನಿಮಾ 'ಎರಡು ಕನಸು'. ವಾಣಿಯವರ ಕಾದಂಬರಿ ಆಧಾರಿತ 'ಎರಡು ಕನಸು' ಚಿತ್ರ 1974 ರಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು. ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್, ಮಿನುಗುತಾರೆ ಕಲ್ಪನಾ, ಮಂಜುಳಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಅಶ್ವಥ್, ಬಾಲಕೃಷ್ಣ, ರಾಜಾನಂದ್, ಆದಿವಾನಿ ಲಕ್ಷ್ಮೀ ದೇವಿ, ಸಂಪತ್, ಜಯಶ್ರೀ, ಪಂಡರಿಬಾಯಿ ಅಂತಹ ದೊಡ್ಡ ತಾರಾಬಳಗವಿದ್ದ 'ಎರಡು ಕನಸು' ಚಿತ್ರಕ್ಕೆ ರಾಜಣ್ಣನ ನೆಚ್ಚಿನ ನಿರ್ದೇಶಕ ದೊರೈ-ಭಗವಾನ್ ಆಕ್ಷನ್ ಕಟ್ ಹೇಳಿದ್ದರು. [ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ]

Dr.Rajkumar starrer Eradu Kanasu

ಮನಮಿಡಿಯುವ ಪ್ರೇಮ ಕಥೆ ಹೊಂದಿದ್ದ 'ಎರಡು ಕನಸು' ಚಿತ್ರಕ್ಕೆ ಅಷ್ಟೇ ಮನಮುಟ್ಟುವ ಹಾಡುಗಳನ್ನ ನೀಡಿದವರು ಸಂಗೀತ ನಿರ್ದೇಶಕ ರಾಜನ್-ನಾಗೇಂದ್ರ. ''ತಂನಂ ತಂನಂ..'', ''ಎಂದು ನಿನ್ನ ನೋಡುವೆ..'', ''ಬಾಡಿ ಹೋದ ಬಳ್ಳಿಯಿಂದ...'', ''ಇಂದು ಎನಗೆ ಗೋವಿಂದ....'', ''ಎಂದೆಂದು ನಿನ್ನನು ಮರೆತು...'', ''ಪೂಜಿಸಲೆಂದೆ ಹೂಗಳ ತಂದೆ....'', ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚ ಹಸಿರಾಗಿ ಉಳಿದಿವೆ.

ರಾಜನ್-ನಾಗೇಂದ್ರ ನೀಡಿದ ಇಂತಹ ಸುಮಧುರ ಹಾಡುಗಳಿಗೆ ರಾಜ್ಯ ಪ್ರಶಸ್ತಿ ಕೂಡ ಲಭ್ಯಸಿತ್ತು. ಇಂದಿನ ಪೀಳಿಗೆಯ ಟ್ರೈಯಾಂಗಲ್ ಲವ್ ಸ್ಟೋರಿ, ಟ್ರ್ಯಾಜೆಡಿ ಪ್ರೇಮ್ ಕಹಾನಿ, 1974 ರಲ್ಲಿ 'ಎರಡು ಕನಸು' ಚಿತ್ರದಲ್ಲೇ ಅನಾವರಣವಾಗಿತ್ತು.

Dr.Rajkumar starrer Eradu Kanasu

ಇದೀಗ ಇದೇ 'ಎರಡು ಕನಸು' ಚಿತ್ರ ಕರ್ನಾಟಕದಾದ್ಯಂತ ಫೆಬ್ರವರಿ 6 ರಿಂದ ರಾರಾಜಿಸಲಿದೆ. ಕೆ.ಜಿ.ರೋಡ್ ನ ಭೂಮಿಕಾ ಚಿತ್ರಮಂದಿರ ಸೇರಿದಂತೆ ರಾಜ್ಯದ ಒಟ್ಟು 50 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಎರಡು ಕನಸು' ನೋಡುವ ಭಾಗ್ಯ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ. [ತ್ರಿಡಿಯಲ್ಲಿ ಮೂಡಿಬರಲಿದೆ ಅಣ್ಣಾವ್ರ 'ಬಬ್ರುವಾಹನ']

ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ 5.1 ಡಿಜಿಟಲ್ ಸೌಂಡ್ ನಲ್ಲಿ 41 ವರ್ಷಗಳ ನಂತ್ರ 'ಎರಡು ಕನಸು' ನನಸಾಗಲಿದೆ. ಅಲ್ಲಿಗೆ, ಅಣ್ಣಾವ್ರ ಅಭಿಮಾನಿಗಳಿಗೆ ಮತ್ತೊಂದು ಸುವರ್ಣಾವಕಾಶ ಸಿಕ್ಕಿದೆ. ಅದನ್ನ ಸದುಪಯೋಗ ಪಡಿಸಿಕೊಳ್ಳುವುದು ಅವರ ಅಭಿಮಾನಿಗಳ ಕೈಯಲ್ಲೇ ಇದೆ. (ಫಿಲ್ಮಿಬೀಟ್ ಕನ್ನಡ)

English summary
Dr.Rajkumar starrer Evergreen movie Eradu Kanasu is re-releasing on Feb 6th. Hit Duo Dorai-Bhagvan has directed this movie based on the novel written by Vani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada