»   » ಡಾ.ರಾಜ್ ಕುಮಾರ್ ಎಂಬ ಕನ್ನಡದ ಶ್ರೇಷ್ಠ 'ಯೋಗಿ'

ಡಾ.ರಾಜ್ ಕುಮಾರ್ ಎಂಬ ಕನ್ನಡದ ಶ್ರೇಷ್ಠ 'ಯೋಗಿ'

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಅಭಿನಯದ 'ಕಾಮನಬಿಲ್ಲು' ಚಿತ್ರದಲ್ಲಿ ಎಲ್ಲರು ಗಮನಿಸರಬಹುದು. ರಾಜ್ ಕುಮಾರ್ ಅವರು ಒಬ್ಬ ಶ್ರೇಷ್ಠ ನಟ ಮಾತ್ರವಲ್ಲ, ಓರ್ವ ಶ್ರೇಷ್ಠ ಯೋಗಿ ಎಂಬುದನ್ನ.

ಈ ಚಿತ್ರದ ಚಿತ್ರೀಕರಣ ವೇಳೆ ರಾಜ್ ಕುಮಾರ್ ಅವರು ಯೋಗ ಮಾಡುವ ದೃಶ್ಯವನ್ನ ಶೂಟ್ ಮಾಡಬೇಕಿತ್ತಂತೆ. ಮುಂಜಾನೆ ಇಡೀ ಚಿತ್ರತಂಡ ಭಾಗವಹಿಸಿತ್ತಂತೆ. ನಿರ್ದೇಶಕರು ಸೇರಿದಂತೆ ಎಲ್ಲರೂ ಚಳಿಯಿಂದ ನಡುಗುತ್ತಿದ್ದರಂತೆ. ಆದ್ರೆ, ರಾಜ್ ಕುಮಾರ್ ಅವರು ಮಾತ್ರ ಯಾವುದೇ ಚಳಿ, ಗಾಳಿ ಲೆಕ್ಕಿಸದೆ ಸರಾಗವಾಗಿ ಯೋಗಾಭ್ಯಾಸ ಮಾಡಿದ್ದರಂತೆ. ಇದನ್ನ ಕಂಡ ಚಿತ್ರತಂಡ ಆಶ್ಚರ್ಯಗೊಂಡಿದ್ದರಂತೆ.

ಡಾ.ರಾಜ್ ಕುಮಾರ್ ಅವರು 'ಯೋಗ'ವನ್ನ ಹವ್ಯಾಸದ ಜೊತೆಗೆ, ಜೀವನದ ಒಂದು ಭಾಗವಾಗಿಸಿಕೊಂಡಿದ್ದರು ಎನ್ನುವುದು ಇದೇ ಕಾರಣಕ್ಕೆ. ರಾಜ್ ಕುಮಾರ್ ಅವರ ಯೋಗದ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಮತ್ತು ಅಣ್ಣಾವ್ರು ಯೋಗ ಮಾಡುತ್ತಿರುವ ಅಪರೂಪದ ಫೋಟೋಗಳು ಮುಂದೆ ಇದೆ ನೋಡಿ.....

1978ರಲ್ಲಿ ಯೋಗ ಅಭ್ಯಾಸ

ಸತತ ಶೂಟಿಂಗ್, ಪ್ರಯಾಣ ಎಂದು ಬಳಲಿದ್ದ ರಾಜ್ ಕುಮಾರ್ ಅವರಿಗೆ, 1978ರಲ್ಲಿ 'ಅಪರೇಷನ್ ಡೈಮಂಡ್ ರಾಕೇಟ್' ಸಿನಿಮಾದ ನಂತರ ಮಂಡಿ ನೋವು ಕಾಣಿಸಿಕೊಂಡಿತ್ತಂತೆ. ಆಮೇಲೆ ಸಂಬಂಧಿಕರೊಬ್ಬರ ನೀಡಿದ ಸಲಹೆಯ ಮೇರೆಗೆ ರಾಜ್ ಕುಮಾರ್ ಯೋಗದ ಮೊರೆ ಹೋದರು.

ಡಾ.ರಾಜ್ ಗೆ ಯೋಗ ಜೀವನದ ಭಾಗ

ರಾಜ್ ಕುಮಾರ್ ಅವರು ಯೋಗವನ್ನ ಯಾವುದೇ ಶೋಕಿಗೆ, ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಮಾಡುತ್ತಿರಲಿಲ್ಲ. ಅದು ಅವರ ಹವ್ಯಾಸವಾಗಿತ್ತು. ಅವರ ಜೀವನದ ಒಂದು ಪ್ರಮುಖ ಭಾಗವಾಗಿತ್ತು.

50 ವರ್ಷದಲ್ಲಿ ಯೋಗ ಮಾಡುತ್ತಿದ್ದರು

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಸುಮಾರು 40 ವಯಸ್ಸು ದಾಟುತ್ತಿದ್ದಂತೆ ತಮ್ಮ ದೇಹ ಸ್ವಲ್ಪ ದಣಿಯುತ್ತೆ, ಆಯಾಸಗೊಳ್ಳುತ್ತೆ. ಆದ್ರೆ, ರಾಜ್ ಕುಮಾರ್ ಅವರು 50ನೇ ವಯಸ್ಸಿನಲ್ಲೂ ಯೋಗ ಮಾಡುತ್ತಿದ್ದರು ಅಂದ್ರೆ, ಅವರು ಎಷ್ಟರ ಮಟ್ಟಿಗೆ ಯೋಗವನ್ನ ಅವಲಂಬಿಸಿದ್ದರು ಎಂಬುದನ್ನ ಊಹಿಸಬಹುದು.

ರಾಜ್ ಅವರ ದೈಹಿಕ ಶಕ್ತಿಯೇ 'ಯೋಗ'

ರಾಜ್ ಕುಮಾರ್ ಅವರು 50 ವರ್ಷ ದಾಟಿದ ಮೇಲೂ ಫಿಟ್ನೆಸ್ ಆಗಿದ್ದರು. ಗಟ್ಟಿಮುಟ್ಟಾಗಿ ಇದ್ದರು ಅಂದ್ರೆ ಅದಕ್ಕೆ ಯೋಗವೇ ನೇರ ಕಾರಣವಂತೆ. ಅಷ್ಟೇ ಅಲ್ಲದೇ, ರಾಜ್ ಕುಮಾರ್ ಅವರು ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವಲ್ಲಿ ಕೂಡ ಯೋಗ ಪ್ರಮುಖ ಕಾರಣವಂತೆ.

'ಯೋಗ'ದ ಮುಂದೆ ಯಾವುದು ಇಲ್ಲ

ಯೋಗ ಎನ್ನುವುದು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸಹಾಯವಾಗಲಿದೆ. ರಾಜ್ ಕುಮಾರ್ ಅವರು ಯೋಗ ಕಲಿತ ಮೇಲೆ, ಬೇರೆ ಕಸರತ್ತುಗಳನ್ನ ನಿಲ್ಲಿಸಿಬಿಟ್ಟರಂತೆ. ಅಂದ್ರೆ, ತಾವೇ ಮನೆಯಲ್ಲಿ ಯೋಗವನ್ನ ಮಾಡುತ್ತಿದ್ದರಿಂದ ತಮ್ಮ ದೇಹವನ್ನ ಸಧೃಡತೆಯಿಂದ ಇರಿಸಿಕೊಳ್ಳಲು ಸಾಧ್ಯವಾಯಿತ್ತಂತೆ.

ಕಾಡಿನಲ್ಲು ಯೋಗ ಮಾಡುತ್ತಿದ್ದರು

ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ರಾಜ್ ಕುಮಾರ್ ಕಾಡಿನಲ್ಲೇ ಯೋಗ ಮಾಡುತ್ತಿದ್ದರು. ಹೀಗಾಗಿ, 90 ದಿನಗಳ ಕಾಲ ಅರಣ್ಯದಲ್ಲಿ ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಾಧ್ಯವಾಯಿತು.

ಪಾರ್ವತಮ್ಮ ಜೊತೆ ಯೋಗ

ತಮ್ಮ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೂ ಯೋಗಾಸನ ಕಲಿಸಿಕೊಟ್ಟಿದ್ದರಂತೆ. ಇದರಿಂದ ಪ್ರೇರೆಪಿತರಾದ ಪಾರ್ವತಮ್ಮ, ಬೆಂಗಳೂರಿನಲ್ಲಿ ನಿವಾಸದಲ್ಲಿ ರಾಜ್ ಕುಮಾರ್ ಅವರೊಂದಿಗೆ ಕೆಲದಿನಗಳ ಕಾಲ ಯೋಗಾಸನ ಮಾಡಿ ಸಂತಸಪಟ್ಟರಂತೆ. ಕೇವಲ ಪಾರ್ವತಮ್ಮ ಅವರಿಗೆ ಮಾತ್ರವಲ್ಲ, ತಮ್ಮ ಸುತ್ತಮುತ್ತಲಿನವರಿಗೂ ಡಾ ರಾಜ್ ಯೋಗ ಹೇಳಿ ಕೊಡುತ್ತಿದ್ದರಂತೆ.

English summary
Dr Rajkumar Was a Great Yogi. For Dr Rajkumar, Yoga was a passion – a way of life. However, not many know that the Kannada star was drawn to yoga only in his 50s​

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada