For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ

  |
  ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶಗೊಂಡ ಡಾ ವಿಷ್ಣುವರ್ಧನ್ ಅಭಿಮಾನಿಗಳು

  ಡಾ ವಿಷ್ಣುವರ್ಧನ್ ಅವರ ಸ್ಮಾರಕ ವಿವಾದ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಒಂದು ದಶಕ ಕಳೆದರೂ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಆಗಲೇ ಇಲ್ಲ. ಅಭಿಮಾನ್ ಸ್ಟುಡಿಯೋ, ಮೈಸೂರು ಎಂದುಕೊಂಡೆ ವರ್ಷಗಳು ಉರುಳುತ್ತಿದೆ.

  ಕುಟುಂಬದವರು, ಅಭಿಮಾನಿಗಳು ಎಷ್ಟೇ ಪ್ರಯತ್ನ ಪಟ್ಟರೂ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಗುತ್ತಲೇ ಇಲ್ಲ. ಉದ್ದೇಶಪೂರ್ವಕವಾಗಿ ವಿಷ್ಣು ಸ್ಮಾರಕದ ಬಗ್ಗೆ ಹೋರಾಟ, ಪ್ರತಿಭಟನೆ ಮಾಡಿದಾಗ ಸರ್ಕಾರದಿಂದ ಯಾವುದೇ ಆಶ್ವಾಸನೆ ಸಿಗಲ್ಲ. ಆದ್ರೆ, ಯಾವುದ್ಯಾವುದೋ ಸಂದರ್ಭದಲ್ಲಿ ಸ್ಮಾರಕ ವಿಷ್ಯ ಪ್ರಸ್ತಾಪ ಮಾಡಿ ಸ್ಮಾರಕ ನಿರ್ಮಿಸುತ್ತೇವೆ ಎನ್ನುತ್ತಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

  ಮಂಡ್ಯ ಪ್ರಚಾರದಲ್ಲಿ ವಿಷ್ಣು ಸ್ಮಾರಕ ಕೂಗು: ಅಭಿಮಾನಕ್ಕೆ ತಲೆಬಾಗಿದ ಸಿಎಂ

  ಅಂಬರೀಶ್ ಸತ್ತಾಗಲೂ ಅಂಬಿ ಸ್ಮಾರಕದ ಜೊತೆ ವಿಷ್ಣು ಸ್ಮಾರಕನೂ ನಿರ್ಮಿಸುವ ಯೋಚನೆ ಇದೆ ಎಂದು ಸಿಎಂ ಹೇಳಿದ್ದನ್ನ ಯಾರೂ ಮರೆತಿಲ್ಲ. ಅದಾದ ಬಳಿಕ ಮತ್ತೆ ಸ್ಮಾರಕ ವಿಷ್ಯ ಎಲ್ಲೂ ಮಾತನಾಡಿಲ್ಲ. ಇದೀಗ, ಮಂಡ್ಯ ರಾಜಕಾರಣದಲ್ಲು ದಾದಾ ಸ್ಮಾರಕದ ಕೂಗು ಕೇಳಿಬಂದಿದೆ. ಅದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಡ್ಯ ರಾಜಕಾರಣದಲ್ಲಿ ವಿಷ್ಣು ಸ್ಮಾರಕದ ಬಗ್ಗೆ ಯಾಕೆ ಮಾತನಾಡುತ್ತೀರಾ ಎಂದು ಕೆಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

  ಸಿಎಂ ಎದುರು ದಾದಾ ಅಭಿಮಾನಿಗಳ ಬೇಡಿಕೆ

  ಸಿಎಂ ಎದುರು ದಾದಾ ಅಭಿಮಾನಿಗಳ ಬೇಡಿಕೆ

  ಬುಧವಾರ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ, ತಮ್ಮ ಪುತ್ರಿ ನಿಖಿಲ್ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ವಿಷ್ಣು ಕಟೌಟ್, ಪೋಸ್ಟರ್ ಗಳನ್ನ ಹಿಡಿದು ಬಂದ ಡಾ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸ್ಮಾರಕ ನಿರ್ಮಾಣ ಮಾಡಿ ಎಂದು ಬೇಡಿಕೆಯಿಟ್ಟರು. ಅದಕ್ಕೆ ಸಿಎಂ ಕೂಡ 'ಚುನಾವಣೆ ಮುಗಿದ ಬಳಿಕ ನೀವು ಆದೇಶ ಮಾಡಿ, ನಾನು ಮಾಡಿಕೊಡುತ್ತೇನೆ' ಎಂದು ಆಶ್ವಾಸನೆ ನೀಡಿ ಮುಂದೆ ನಡೆದರು.

  ಇಷ್ಟು ದಿನ ಇಲ್ಲದ್ದು ಈಗ ಯಾಕೆ?

  ಇಷ್ಟು ದಿನ ಇಲ್ಲದ್ದು ಈಗ ಯಾಕೆ?

  'ವಿಷ್ಣುವರ್ಧನ್ ಅಭಿಮಾನಿಗಳು ನಿರಂತರ ಹೋರಾಟ ಮಾಡಿದ್ದಾರೆ. ವಿಷ್ಣು ಪತ್ನಿ ಭಾರತಿ, ಅಳಿ ಅನಿರುದ್ಧ್ ಪದೇ ಪದೇ ಮನವಿ ಮಾಡಿದ್ದಾರೆ. ಆಗೆಲ್ಲಾ ಏನೂ ಮಾತನಾಡದ ಸಿಎಂ, ಈಗ ಎಲೆಕ್ಷನ್ ಸಮಯದಲ್ಲಿ ಮಾಡ್ತೀನಿ ಅಂತ ಯಾಕೆ ಹೇಳಬೇಕು'' ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

  ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

  ಚುನಾವಣೆ ಸಮಯದಲ್ಲಿ ಮಾತ್ರ ಹೇಳ್ತೀರಾ

  ಚುನಾವಣೆ ಸಮಯದಲ್ಲಿ ಮಾತ್ರ ಹೇಳ್ತೀರಾ

  ''ಸ್ಮಾರಕ ನಿರ್ಮಾಣ ಮಾಡೋಕೆ ಇಷ್ಟು ದಿನ ಬೇಕಾ. ಚುನಾವಣೆ ಸಮಯದಲ್ಲಿ ಮಾತ್ರ ಭರವಸೆ, ಆಶ್ವಾಸನೆ ಕೊಡ್ತೀರಾ, ಕಳೆದ ಎಲೆಕ್ಷನ್ ನಲ್ಲೂ ಇದನ್ನ ಹೇಳಿದ್ರಿ. ಇನ್ನೂ ಆಗಲೇ ಇಲ್ಲ'' ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ದಯವಿಟ್ಟು ಆ ಕೆಲಸ ಮಾಡಿ ಪುಣ್ಯ ಕಟ್ಕೊಳ್ಳಿ

  ದಯವಿಟ್ಟು ಆ ಕೆಲಸ ಮಾಡಿ ಪುಣ್ಯ ಕಟ್ಕೊಳ್ಳಿ

  ಇನ್ನು ಆಗಾಗ ಭರವಸೆ ಕೊಡುವ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಅಭಿಮಾನಿಗಳು ಇದ್ದರೂ, ದಯವಿಟ್ಟು ಆ ಕೆಲಸ ಮಾಡಿ ಪುಣ್ಯ ಕಟ್ಕೊಳ್ಳಿ ಎಂದು ವಿನಯದಿಂದ ಕೇಳಿಕೊಳ್ಳುವ ಅಭಿಮಾನಿ ವರ್ಗವೂ ಇದೆ. ಇಂತಹ ಅಭಿಮಾನಿಗಳಿಗೆ ಸ್ಮಾರಕ ನಿರ್ಮಿಸಬೇಕು ಎಂಬುದಷ್ಟೇ ಬೇಡಿಕೆ.

  'ವಿಷ್ಣು ಸ್ಮಾರಕದ ಬಗ್ಗೆ ತಪ್ಪು ಸಂದೇಶ ರವಾನೆ ಆಗುತ್ತೆ' ಎಂದ ಜಗ್ಗೇಶ್

  ರಾಜಕೀಯದಲ್ಲಿ ವಿಷ್ಣು ಹೆಸರು ಬೇಡ

  ರಾಜಕೀಯದಲ್ಲಿ ವಿಷ್ಣು ಹೆಸರು ಬೇಡ

  ಅಂದ್ಹಾಗೆ, ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಸ್ಪರ್ಧಿಸಿದ್ದಾರೆ. ಸುಮಲತಾ ಪರ ದರ್ಶನ್, ಯಶ್ ಪ್ರಚಾರ ಮಾಡುತ್ತಿದ್ದಾರೆ. ಬಹುಶಃ ಸಿನಿಮಾ ಸ್ಟಾರ್ ಗಳೇ ತುಂಬಿರುವ ಈ ಕ್ಷೇತ್ರದಲ್ಲಿ ವಿಷ್ಣು ಸ್ಮಾರಕ ವಿಚಾರ ಪ್ರಸ್ತಾಪಿಸಿ ವಿಷ್ಣು ಅಭಿಮಾನಿಗಳ ವೋಟ್ ಪಡೆಯಲು ಪ್ಲಾನ್ ಮಾಡಿದ್ದಾರೆ ಎಂದು ಕೂಡ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

  English summary
  Chief minister hd Kumaraswamy promised to resolve dr vishnuvardhan Memorial Issue. but, some of the Vishnu fans are expressed outrage against Cm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X