For Quick Alerts
  ALLOW NOTIFICATIONS  
  For Daily Alerts

  ನಾ ಕಂಡಂತೆ ವಿಷ್ಣುವರ್ಧನ್: 'ಮಗು ಮನಸ್ಸಿನ ಹೃದಯವಂತ'- ರವಿಶಂಕರ್ ಗೌಡ

  |

  ಸಾಹಸ ಸಿಂಹ, ದಿವಂಗತ ನಟ ಡಾ ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬದ ಹಿನ್ನೆಲೆ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ 'ನಾ ಕಂಡಂತೆ ವಿಷ್ಣುವರ್ಧನ್' ಎಂಬ ಚಾಲೆಂಜ್‌ನ್ನು ಆರಂಭಿಸಿದ್ದರು.

  ಈ ಚಾಲೆಂಜ್‌ನಲ್ಲಿ ಭಾಗವಹಿಸಿರುವವರು ವಿಷ್ಣುವರ್ಧನ್ ಅವರ ಕುರಿತು ಹಾಗೂ ಅವರ ಜೊತೆಗಿನ ನೆನಪುಗಳನ್ನು ಬರೆಯಬೇಕು. ಹೀಗೆ, 'ನಾ ಕಂಡಂತೆ ವಿಷ್ಣುವರ್ಧನ್' ಚಾಲೆಂಜ್‌ ಸ್ವೀಕರಿಸಿರುವ ನಟ ರವಿಶಂಕರ್ ಗೌಡ ವಿಷ್ಣು ದಾದಾ ಬಗ್ಗೆ ಒಂದಿಷ್ಟು ನೆನಪು ಮೆಲುಕು ಹಾಕಿದ್ದಾರೆ. ನಟ ರವಿಶಂಕರ್ ಗೌಡ ಮಾತ್ರವಲ್ಲ, ನಟ-ನಿರ್ದೇಶಕ ರಘುರಾಮ್ ಸಹ ವಿಷ್ಣುದಾದ ಬಗ್ಗೆ ತಮ್ಮ ಸವಿನೆನಪು ಹಂಚಿಕೊಂಡಿದ್ದಾರೆ. ಮುಂದೆ ಓದಿ....

  ನಾ ಕಂಡಂತೆ ವಿಷ್ಣುವರ್ಧನ್: 'ಕದಂಬ' ಚಿತ್ರ ಸೋತಾಗ ಜೀವನದ ದಾರಿದೀಪವಾದರು'

  ಮಗು ಮನಸ್ಸಿನ ಹೃದಯವಂತ

  ಮಗು ಮನಸ್ಸಿನ ಹೃದಯವಂತ

  ''ನಾ ಕಂಡಂತೆ ವಿಷ್ಣುವರ್ಧನ್ ಸಾರ್...

  ಕನ್ನಡ ಚಿತ್ರರಂಗ ಕಂಡ ಅತಿ ಸುರದ್ರೂಪಿ ನಟ.

  ಅತಿ ಭಾವುಕ ಜೀವಿ, ಕೆಲ ಸಮಯ ಮೌನಿ,

  ಕೆಲವು ಸಲ ತಮಾಷೆ ಮಾಡಲು ನಿಂತರೆ ಮನಸ್ಸು ತುಂಬಾ ನಗಿಸುತ್ತಿದ್ದರು.

  ತನ್ನದೆ ಆದ ಅತಿ ಪ್ರೀತಿಪಾತ್ರರನ್ನ ಕೂಡಿಕೊಂಡು

  ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಅದಕ್ಕೆ "ಸ್ನೇಹಲೋಕ" ಎಂದು ಕರೆದು ತಂದೆಯ ಸಮಾನರಾಗಿದ್ದರೂ ಸ್ನೇಹಿತರಂತೆ ನಡೆದುಕೊಳ್ಳುತ್ತಿದ್ದ ಮಗು ಮನಸ್ಸಿನ ಹೃದಯವಂತ'' ಎಂದು ನೆನಪು ಮೆಲುಕು ಹಾಕಿದ್ದಾರೆ.

  ಚಿತ್ರ ಕೃಪೆ: ಡಾ ವಿಷ್ಣುವರ್ಧನ್ ಬಿಗ್ಗೆಸ್ಟ್ ಫ್ಯಾನ್ಸ್ ಕ್ಲಬ್

  ನಮ್ಮ ಜೊತೆ ಕಳೆದ ಆ ಕ್ಷಣ ಅವಿಸ್ಮರಣೀಯ

  ನಮ್ಮ ಜೊತೆ ಕಳೆದ ಆ ಕ್ಷಣ ಅವಿಸ್ಮರಣೀಯ

  ''ಉತ್ತಮ ಕಲಾವಿದರನ್ನ ಕಂಡರೆ ಸದಾ ಪ್ರೋತ್ಸಾಹ.

  ಅದಕ್ಕೆ ನಮ್ಮ ಸಿಲ್ಲಿ ಲಲ್ಲಿ ತಂಡವೆ ಸಾಕ್ಷಿ..

  ನಮ್ಮ ಇಡಿ ತಂಡವನ್ನು ಕರೆದು ಪ್ರತಿಯೊಬ್ಬರ ಬೆನ್ನು ತಟ್ಟಿ, ಊಟವಿಕ್ಕಿ, ಆ ದಿನವನ್ನು ನಮ್ಮ ಜೊತೆ ಕಳೆದಿದ್ದು ಇಂದಿಗೂ ಅವಿಸ್ಮರಣೀಯ..'' ಎಂದು ಸ್ಮರಿಸಿಕೊಂಡಿದ್ದಾರೆ.

  ನಮ್ಮ ಊರಿನವರು ಎನ್ನುವುದು ಹೆಮ್ಮೆ

  ನಮ್ಮ ಊರಿನವರು ಎನ್ನುವುದು ಹೆಮ್ಮೆ

  ''ಎಲ್ಲಾದಿಕ್ಕಿಂತ ಹೆಚ್ಚಾಗಿ ಅವರು ಮೂಲತಃ ಮಂಡ್ಯದವರು (ಹಲ್ಲೆಗೆರೆ) ಎಂಬುದು ನನಗೆ ಹೆಮ್ಮೆಯ ಸಂಗತಿ...ಅವರು ನನ್ನ ಹಾಗೂ ನನ್ನ ಕುಟುಂಬಕ್ಕೆ ತೋರುತ್ತಿದ್ದ ಪ್ರೀತಿ ಪ್ರಾತಃಸ್ಮರಣೀಯಾ

  ನೀವೂ ಕೂಡ ನಿಮ್ಮ ಅನಿಸಿಕೆ ಬರೆಯಿರಿ

  ಹಾಗೆ ಮುಂದುವರಿಸಿ....'' ಎಂದು ರವಿಶಂಕರ್ ಗೌಡ ತಮ್ಮಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada
  ಚಿತ್ರರಂಗದ ಬಂಗಾರದ ಕಳಶ

  ಚಿತ್ರರಂಗದ ಬಂಗಾರದ ಕಳಶ

  ''ನಾ ಕಂಡ ವಿಷ್ಣು ಸರ್ ಲೋಕ ಜ್ಞಾನಿ..ವಿಚಾರಗಳ ಸುಜ್ಞಾನಿ..ವಿಭಿನ್ನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ ವಿಜ್ಞಾನಿ..ಭಾಷೆ, ಭಾವನೆಗಳ ವಿಚಾರದಲ್ಲಿ ನಿಜ ದನಿ..ಹೆತ್ತವರಿಗೆ ಸಂಪತ್ ಕುಮಾರ್, ಅಭಿಮಾನಿಗಳಿಗೆ ಸಾಹಸಸಿಂಹ..ಈ ಯುಗದ ಮಹಾಪುರುಷ ಚಿತ್ರರಂಗದ ಬಂಗಾರದ ಕಳಶ..'' ಎಂದು ನಿರ್ದೇಶಕ ರಘುರಾಮ್ ಸ್ಮರಿಸಿಕೊಂಡಿದ್ದಾರೆ.

  English summary
  Dr Vishnuvardhan Birthday: Actor Ravishankar gowda participate in 'Naa kandanthe vishnuvardhan' challenge and he shared some bueatiful memeories abou Vishnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X