For Quick Alerts
  ALLOW NOTIFICATIONS  
  For Daily Alerts

  ಗಿನ್ನಿಸ್ ದಾಖಲೆಯತ್ತ ಸಾಹಸಸಿಂಹ 'ಖೈದಿ' ಕಟೌಟ್

  By Rajendra
  |

  ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಚಿತ್ರಗಳನ್ನು ಇಂದಿಗೂ ಅವರ ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ತೆರೆಕಂಡ ಅವರ ಹಳೆಯ ಚಿತ್ರ 'ಖೈದಿ' ಸಾಕ್ಷಿ. ಈ ಚಿತ್ರ ಬಾಕ್ಸ್ ಆಫೀಸಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತ್ರಿವೇಣಿ ಚಿತ್ರಮಂದಿರದಲ್ಲಿ ಕಲೆಕ್ಷನ್ ಇನ್ನೂ ನಯಾಪೈಸೆಯಷ್ಟೂ ಕಡಿಮೆಯಾಗಿಲ್ಲ.

  ಇದೀಗ ವಿಷ್ಣು ಅಭಿಮಾನಿಗಳಿಗೆ ಇಷ್ಟವಾದ ಮತ್ತೊಂದು ಸುದ್ದಿ ಬಂದಿದೆ. ಅದೇನೆಂದರೆ ತ್ರಿವೇಣಿ ಚಿತ್ರಮಂದಿರದ ಮುಂದೆ ನಿಲ್ಲಿಸಿರುವ ಭಾರಿ ಕಟೌಟ್ ಈಗ ಗಿನ್ನಿಸ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಶೀಘ್ರದಲ್ಲೇ ಸೇರ್ಪಡೆಯಾಗಲು ಸಿದ್ಧವಾಗಿದೆ. [ಸಾಹಸಸಿಂಹ ವಿಷ್ಣುವರ್ಧನ್ 'ಖೈದಿ' ರೀ ರಿಲೀಸ್]

  ಇಷ್ಟಕ್ಕೂ ದಾಖಲೆಗೆ ಕಾರಣವಾಗಿರುವುದು ಕಟೌಟ್ ಅಲ್ಲ, ಅದಕ್ಕೆ ಬಳಸಿರುವ ಹೂವಿನ ಹಾರಗಳು. ಅತ್ಯಂತ ದುಬಾರಿ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹಾರಗಳನ್ನು ತಯಾರಿಸಲಾಗಿದೆ. ಇದೇ ಈಗ ಗಿನ್ನಿಸ್ ಹಾಗೂ ಲಿಮ್ಕಾ ಬುಕ್ ಆಫೆ ರೆಕಾರ್ಡ್ಸ್ ಗೆ ಕಾರಣವಾಗುತ್ತಿದೆ.

  ಈ ರೀತಿಯ ಪ್ರಶಸ್ತಿಗಗಳಿಗೆ ಏಕಕಾಲಕ್ಕೆ ಪಾತ್ರರಾಗುತ್ತಿರುವ ಮೊದಲ ನಟನಾಗಿ ವಿಷ್ಣುವರ್ಧನ್ ಅವರು ಹೊರಹೊಮ್ಮಿದ್ದಾರೆ. ಈಗಾಗಲೆ ಫೋಟೋ ಜರ್ನಲಿಸ್ಟ್ ಜನಾರ್ಧನ ರಾವ್ ಸಾಳಂಕೆ ಅವರು ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ , ಗುರಗಾಂವ್ ಗೆ ಕಳುಹಿಸಿದ್ದಾರೆ.

  ಬೆಂಗಳೂರಿನ ಅಪರ್ಣಾ ಚಿತ್ರಮಂದಿರದಲ್ಲಿ ನವೆಂಬರ್ 15ರಂದು ಖೈದಿ ಚಿತ್ರ ಬಿಡುಗಡೆಯಾಗುತ್ತಿದೆ. ಕೆಎಸ್ ಆರ್ ದಾಸ್ ನಿರ್ದೇಶನದ ಈ ಚಿತ್ರವನ್ನು ಜಿಆರ್ ಕೆ ರಾಜು ಅವರು ವಿಶ್ವಚಿತ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದರು. ಚಿತ್ರ ಬಿಡುಗಡೆ ಕಂಡಿದ್ದು 1984ರಲ್ಲಿ.

  ತೆಲುಗಿನ 'ಖೈದಿ' ಚಿತ್ರದ ರೀಮೇಕ್ ಇದು. ಮೂಲ ಚಿತ್ರದಲ್ಲಿ ಚಿರಂಜೀವಿ ಹಾಗೂ ಮಾಧವಿ ಮುಖ್ಯ ಪಾತ್ರಧಾರಿಗಳು. ಈ ಚಿತ್ರದ "ತಾಳೆ ಹೂವ ಪೊದೆಯಿಂದ..." (ಚಿ.ಉದಯಶಂಕರ್ ಸಾಹಿತ್ಯ) ಹಾಡು ಆಗಿನ ಕಾಲಕ್ಕೆ ಬುಸ್ ಬುಸ್ ಎಂದು ಸಾಕಷ್ಟು ಸದ್ದು ಮಾಡಿತ್ತು.

  ಚಕ್ರವರ್ತಿ ಸಂಗೀತ, ವಿ ಲಕ್ಷ್ಮಣ್ ಅವರ ಛಾಯಾಗ್ರಹಣ, ಡಿ ವೆಂಕಟರತ್ನಂ ಅವರ ಸಂಕಲನ, ಚಿನ್ನಿ ಪ್ರಕಾಶ್ ಮತ್ತು ತಾರಾ ಅವರ ನೃತ್ಯ ಸಂಯೋಜನೆ, ನಾಗರಾಜ್ ಅವರ ಕಲೆ ಇರುವ ಚಿತ್ರವನ್ನು ಡಿವಿ ಸುಧೀಂದ್ರ ಅವರು ಪ್ರಚಾರ ಮಾಡಿದ್ದರು. ಈಗ ಮತ್ತೊಂದು ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಅವಕಾಶ. (ಒನ್ಇಂಡಿಯಾ ಕನ್ನಡ)

  English summary
  The latest buzz is that the Dr.Vishnuvardhan's 'Khaidi' (1984) movie is going to enter Limca Book of Records and Guinness Book of World Records shortly. The reason behind the development is that record number of garlands, which was made to Dr Vishnuvardhan's cutout in front of Triveni theatre. The different types of garlands made to cutout including ring garlanding is a very popular and costly, which has made Vishnuvardhan, the first Indian actor to receive the honour.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X