»   » ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

Posted By:
Subscribe to Filmibeat Kannada

ಸಾಹಸ ಸಿಂಹ.. ಹೃದಯವಂತ.. ಅಭಿಮಾನಿಗಳ ಪ್ರೀತಿಯ 'ಯಜಮಾನ' ಡಾ.ವಿಷ್ಣುವರ್ಧನ್ ನಮ್ಮನ್ನೆಲ್ಲ ಅಗಲಿ ಏಳುವರೆ ವರ್ಷಗಳು ಕಳೆದಿವೆ. ಆದರೂ, ಡಾ.ವಿಷ್ಣುವರ್ಧನ್ ರವರ ಹೆಸರಿನಲ್ಲಿ 'ಸ್ಮಾರಕ' ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಅಭಿಮಾನ್ ಸ್ಟುಡಿಯೋದಲ್ಲಿ ಇರುವ 'ಆಸ್ತಿ ವಿವಾದ' ಇನ್ನೂ ಬಗೆ ಹರಿದಿಲ್ಲ. 'ಇನ್ನೆಂದೂ ಅಭಿಮಾನ್ ಸ್ಟುಡಿಯೋ ಒಳಗೆ ಕಾಲಿಡಲ್ಲ' ಎಂದು ಭಾರತಿ ವಿಷ್ಣುವರ್ಧನ್ ಬೇಸರದಿಂದ ನುಡಿದಿದ್ದಾರೆ. ಅಲ್ಲದೇ, ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನ ಮೈಸೂರಿನಲ್ಲಿ ನಿರ್ಮಾಣ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಡಾ.ವಿಷ್ಣು ಅಭಿಮಾನಿಗಳು ತಪ್ಪದೇ ಓದಬೇಕಾದ ಪತ್ರ ಇದು

ಇಷ್ಟೆಲ್ಲ ಆದರೂ, ಡಾ.ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿಗಳಿಗೆ ಮಾತ್ರ 'ಅಭಿಮಾನ್ ಸ್ಟುಡಿಯೋದಲ್ಲಿ ಇರುವ ಡಾ.ವಿಷ್ಣು ಸಮಾಧಿ'ಯೇ ದೇವಾಲಯ. ಡಾ.ವಿಷ್ಣುವರ್ಧನ್ ಜನ್ಮದಿನ ಹಾಗೂ ಪುಣ್ಯ ಸ್ಮರಣೆ... ಎರಡನ್ನೂ ಅಭಿಮಾನ್ ಸ್ಟುಡಿಯೋದಲ್ಲಿಯೇ ಆಚರಿಸುತ್ತಾ ಬಂದಿರುವ ಅಭಿಮಾನಿಗಳು ಇದೀಗ 'ಡಾ.ವಿಷ್ಣುವರ್ಧನ್' ಹೆಸರಿನಲ್ಲಿ 'ರಾಷ್ಟ್ರೀಯ ಉತ್ಸವ' ನಡೆಸಲು ಸಜ್ಜಾಗಿದ್ದಾರೆ.

'Dr Vishnuvardhan Raashtriya Utsava' to be held in Delhi

ಡಾ.ವಿಷ್ಣುವರ್ಧನ್ ರವರ ನೆನಪಿನಲ್ಲಿ ಆಗಸ್ಟ್ 27 ರಂದು 'ರಾಷ್ಟ್ರೀಯ ರಾಜಧಾನಿ' ದೆಹಲಿಯಲ್ಲಿ ರಾಷ್ಟ್ರೀಯ ಉತ್ಸವ ನಡೆಸಲು ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇವರೊಂದಿಗೆ 'ಕವಿರತ್ನ' ಡಾ.ವಿ.ನಾಗೇಂದ್ರ ಪ್ರಸಾದ್, 'ಕನ್ನಡವೇ ಸತ್ಯ' ರಂಗಣ್ಣ, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ನಾಗರಾಜ್, ಭೂಸಿರಿ ಚಿಟ್ಸ್ ಸಂಸ್ಥೆಯ ಮಾಲೀಕರಾದ ಬಿ.ವೈ.ತಿಮ್ಮೇಗೌಡರು, ಹಿರಿಯ ವಿಷ್ಣು ಅಭಿಮಾನಿ ಎಸ್.ರಘು, ಮಂಜು ಮಾಣಿಕ್ಯ ಮುಂತಾದವರು ಕೈಜೋಡಿಸಿದ್ದಾರೆ.

ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಡಾ.ವಿಷ್ಣುವರ್ಧನ್ ರವರ ಸಾಧನೆ.. ಅವರು ಬಿತ್ತಿ ಹೋದ ಆದರ್ಶಗಳು.. ಹೀಗೆ ಡಾ.ವಿಷ್ಣುವರ್ಧನ್ ರವರ ಬದುಕಿನ ಹಲವು ಮಜಲುಗಳನ್ನು 'ರಾಷ್ಟ್ರೀಯ ಉತ್ಸವ' ಮೂಲಕ ರಾಷ್ಟ್ರವ್ಯಾಪಿ ಜನಜನಿತಗೊಳಿಸುವ ಆಶಯ ವೀರಕಪುತ್ರ ಶ್ರೀನಿವಾಸ ರವರದ್ದು.

ಆಗಸ್ಟ್ 27 ರಂದು ಹಮ್ಮಿಕೊಳ್ಳಲಾಗಿರುವ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'ದ ಪ್ರಮುಖ ಕಾರ್ಯಕ್ರಮಗಳು ಇಂತಿವೆ -

* ದೆಹಲಿಯ ಬೀದಿಗಳಲ್ಲಿ ಡಾ.ವಿಷ್ಣುವರ್ಧನ್ ಭಾವಚಿತ್ರ ಮೆರವಣಿಗೆ

* ಡಾ.ವಿಷ್ಣುವರ್ಧನ್ ರವರ ಪ್ರತಿಮೆ ಅನಾವರಣ

* ಡಾ.ವಿಷ್ಣುವರ್ಧನ್ ರವರ ವಿಶೇಷ ಚಿತ್ರಗಳ ಛಾಯಾಚಿತ್ರ ಪ್ರದರ್ಶನ

* ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಡಾ.ವಿಷ್ಣು ಅವರ ಕೊಡುಗೆಗಳು ಎಂಬ ವಿಷಯವಾಗಿ ವಿಚಾರಗೋಷ್ಠಿ

* ಪದ್ಮಶ್ರೀ ಪುರಸ್ಕೃತರಾದ ಡಾ.ಭಾರತಿ ವಿಷ್ಣುವರ್ಧನ್ ಅವರಿಗೆ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನ

* ಪಂಚಭಾಷಾ ಕಲಾವಿದರನ್ನೊಳಗೊಂಡ ವೇದಿಕೆ ಕಾರ್ಯಕ್ರಮ

* ಡಾ.ವಿಷ್ಣು ಅವರ ಅಪರೂಪದ ಚಲನಚಿತ್ರಗಳ ಕುರಿತಾದ ಪುಸ್ತಕ ಬಿಡುಗಡೆ

* ಡಾ.ವಿಷ್ಣುವರ್ಧನ್ ರವರ ಗೀತೆಗಳ ಮ್ಯೂಸಿಕಲ್ ನೈಟ್

ಈ ಎಲ್ಲ ಕಾರ್ಯಕ್ರಮಗಳು ಆಗಸ್ಟ್ 27 ರಂದು ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೆರಡು ತನಕ ದೆಹಲಿ ಕರ್ನಾಟಕ ಸಂಘದಲ್ಲಿ ನಡೆಯಲಿದೆ.

English summary
'Dr Vishnuvardhan Raashtriya Utsava' to be held on August 27th in Delhi, organised by Veerakaputra Srinivas, State President, Vishnu Sena Samithi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada