»   » ದೆಹಲಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು 'ಡಾ.ವಿಷ್ಣುವರ್ಧನ್ ಉತ್ಸವ'

ದೆಹಲಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು 'ಡಾ.ವಿಷ್ಣುವರ್ಧನ್ ಉತ್ಸವ'

Posted By:
Subscribe to Filmibeat Kannada
Dr Vishnuvardhan Rashtriya Utsava At Delhi | Filmibeat Kannada

ಕನ್ನಡದ ಶ್ರೇಷ್ಟ ನಟ ವಿಷ್ಣುವರ್ಧನ್ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಕಾರ್ಯಕ್ರಮ ನಿನ್ನೆ (ಆಗಸ್ಟ್ 27) ನಡೆಯಿತು. ದೆಹಲಿಯಲ್ಲಿರುವ ಕರ್ನಾಟಕ ಸಂಘದ ಆವರಣದಲ್ಲಿ ಅದ್ಧೂರಿಯಾಗಿ ವಿಷ್ಣು ಅವರ ಈ ಕಾರ್ಯಕ್ರಮದ ನೆರವೇರಿತು.

ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ದರ್ಶನ್ ಆಡಿದ ಅದ್ಬುತ ಮಾತುಗಳಿವು

ಭಾನುವಾರ ಬೆಳ್ಳಗೆ 6 ಗಂಟೆಗೆ ಇಂಡಿಯ ಗೇಟ್ ನಿಂದ ಕರ್ನಾಟಕ ಸಂಘಕ್ಕೆ ಮೆರವಣಿಗೆ ಮಾಡುವುದರ ಮೂಲಕ ಕಾರ್ಯಕ್ರಮ ಶುರುವಾಯಿತು. ನಂತರ ವಿಷ್ಣು ಅವರ 6 ಅಡಿ ಎತ್ತರದ ಪುತ್ಥಳಿ ಅನಾವರಣ, ವಿಷ್ಣು ಅವರ ಅಪರೂಪದ ಫೋಟೋಗಳ ಪ್ರದರ್ಶನ, 'ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಡಾ.ವಿಷ್ಣುವರ್ಧನ್ ಕೊಡುಗೆಗಳು', 'ನಿರ್ದೇಶಕರು ಕಂಡಂತೆ ಡಾ.ವಿಷ್ಣುವರ್ಧನ್', ಡಾ.ವಿಷ್ಣುವರ್ಧನ್ ಅವರ ಚಿತ್ರಗೀತೆಗಳ ಮ್ಯೂಸಿಕಲ್ ನೈಟ್ ಹೀಗೆ ಇಡೀ ದಿನ ಹಲವಾರು ಕಾರ್ಯಕ್ರಮಗಳ ನೆರವೇರಿತು.

'Dr Vishnuvardhan Rashtriya Utsava' completes successfully

ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕರಾದ ಭಾರ್ಗವ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಟ ಶ್ರೀನಗರ ಕಿಟ್ಟಿ, ಆದಿತ್ಯ, ಬಿ.ಸಿ.ಪಾಟೀಲ್ ಸೇರಿದಂತೆ ಅನೇಕ ಮುಖ್ಯ ಅತಿಥಿಗಳು ಹಾಜರಾಗಿದ್ದರು. ಹಿರಿಯ ನಟ ಶಿವರಾಂ ಅವರಿಗೆ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

'Dr Vishnuvardhan Rashtriya Utsava' completes successfully

ಅಂದ್ಹಾಗೆ, 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಕಾರ್ಯಕ್ರಮ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ವಿಷ್ಣು ಅಭಿಮಾನಿಗಳು ಭಾಗವಹಿಸಿದ್ದರು.

English summary
'Dr Vishnuvardhan Rashtriya Utsava' held at New Delhi's Karnataka Sanga on 27th August was a successful mission.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada