»   » ದುನಿಯಾ ವಿಜಯ್ ಪ್ರತ್ಯಂಗಿರಾ ಹೋಮಕ್ಕೆ ಮೊರೆ

ದುನಿಯಾ ವಿಜಯ್ ಪ್ರತ್ಯಂಗಿರಾ ಹೋಮಕ್ಕೆ ಮೊರೆ

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ಅವರು 'ಪ್ರತ್ಯಂಗಿರಾ ದೇವಿ ಹೋಮ' ಮಾಡಿಸಲು ಸಜ್ಜಾಗಿದ್ದಾರೆ. ಮಂಗಳವಾರ ಭೀಮನ ಅಮಾವಾಸ್ಯೆ (ಆ.6) ದಿನ ಸಂಜೆ 6ಕ್ಕೆ ಬೆಂಗಳೂರಿನ ಅಂಗಾಳ ಪರಮೇಶ್ವರಿ ಆಲಯದಲ್ಲಿ ಪ್ರತ್ಯಂಗಿರಾ ಹೋಮವನ್ನು ಸಪ್ತಗಿರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಿದ್ದಾರೆ.

ಇಷ್ಟಕ್ಕೂ ನಟ ದುನಿಯಾ ವಿಜಯ್ ಅವರು ಈ ಹೋಮವನ್ನು ಯಾಕೆ ಮಾಡಿಸುತ್ತಿದ್ದಾರೆ? ಏನಿದರ ವಿಶೇಷ ಎಂಬ ಬಗ್ಗೆ ಗಮನಹರಿಸಿದರೆ... ದುನಿಯಾ ವಿಜಯ್ ನಿರ್ಮಿಸಿ, ನಟಿಸಿರುವ 'ಜಯಮ್ಮನ ಮಗ' ಚಿತ್ರೀಕರಣ ಮಂಗಳವಾರಕ್ಕೆ ಪ್ಯಾಕಪ್ ಆಗುತ್ತಿದೆ.

ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್, "ಜಯಮ್ಮನ ಮಗ ಚಿತ್ರದಲ್ಲಿ ತಾನು ಹೆಣ್ಣು ದೇವಿ ಪಾತ್ರವನ್ನು ಮಾಡಿದ್ದೀನಿ. ಕಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹೊತ್ತು ಭೀಮನ ಅಮಾವಾಸ್ಯೆ. ಒಳ್ಳೆಯ ದಿನವಾದ ಕಾರಣ ತಮ್ಮ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುತ್ತಿದ್ದೇವೆ..."

"ಈ ಚಿತ್ರದಲ್ಲಿ ಒಂಬತ್ತು ಹೆಣ್ಣು ದೇವತೆಗಳು ಬರುತ್ತವೆ. ಚಿತ್ರ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಹೆಣ್ಣು ಮಕ್ಕಳು ನೋಡುವಂತಹ ಚಿತ್ರ ಜೊತೆಗೆ ತಾಯಿಗಾಗಿ ಮಾಡಿರುವ ಚಿತ್ರ ಇದು. ಈ ಚಿತ್ರದಲ್ಲಿ ತಾನು ಮಾಡಿರುವ ಪಾತ್ರಕ್ಕೆ ಶಾಂತಿ ಆಗಬೇಕು. ಹಾಗಾಗಿ ಪ್ರತ್ಯಂಗಿರಾ ಹೋಮವನ್ನು ಮಾಡುತ್ತಿದ್ದೇನೆ" ಎಂದಿದ್ದಾರೆ ವಿಜಯ್.

ಸಂಕ್ರಾಂತಿ ಅಮಾವಾಸ್ಯೆ ದಿನವೇ ಸೆಟ್ಟೇರಿದ ಚಿತ್ರ

ಜಯಮ್ಮನ ಮಗ ಚಿತ್ರ ಸಂಕ್ರಾಂತಿ ಅಮಾವಾಸ್ಯೆ ದಿನ ಇದೇ ಆಲಯದಲ್ಲಿ ಸೆಟ್ಟೇರಿತ್ತು. ಈಗ ಇದೇ ಅಂಗಾಳಮ್ಮ ದೇವಾಲಯದಲ್ಲಿ ಚಿತ್ರ ಕುಂಬಳಕಾಯಿ ಒಡೆಸಿಕೊಳ್ಳುತ್ತಿದೆ. ಚಿತ್ರದಲ್ಲಿ ಅಣ್ಣಮ್ಮ, ನಾಗಮ್ಮ, ಯಲ್ಲಮ್ಮ, ಮಾರಮ್ಮ, ಕಾಳಿ, ಅಂಗಾಳ ಪರಮೇಶ್ವರಿ ದೇವಾನುದೇವತೆಗಳು ಬರುತ್ತಾರೆ ಎಂದಿದ್ದಾರೆ ವಿಜಯ್.

ಕಾಳಿ ಪಾತ್ರ ಪೋಷಿಸಿರುವ ದುನಿಯಾ ವಿಜಯ್

ಕಾಳಿ ಪಾತ್ರ ಮಾಡುವುದು ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಿಲ್ಲ. ಈ ಪಾತ್ರವನ್ನು ಪೋಷಿಸಬೇಕಾದರೆ ತಮಗೆ ಏನೆಲ್ಲಾ ಅನುಭವಗಳಾದವು. ಸೆಟ್ ನಲ್ಲಿ ಏನೆಲ್ಲಾ ವಿಶೇಷಗಳು ನಡೆದವು. ನಮ್ಮ ಜೊತೆಯಲ್ಲಿದ್ದ ಒಬ್ಬ ಹುಡುಗ ಎರಡೆರಡು ತರಹ ಕಾಣಿಸುತ್ತಿದ್ದ. ಆ ಫೋಟೋ ಹಂಗೇ ಇದೆ. ಚಿತ್ರದ ವಿಶೇಷಗಳಲ್ಲಿ ಇದೂ ಒಂದು. ಇವೆಲ್ಲವನ್ನೂ ಮುಂದೆ ಹೇಳುತ್ತೇನೆ.

ನಾನು ಕಾಳಿ ಮಾತೆಯನ್ನು ತುಂಬಾ ನಂಬುತ್ತೇನೆ

ಹೆಣ್ಮಕ್ಕಳು ನೋಡಲಿ ಎಂದು ಮಾಡಿರುವ ಚಿತ್ರವಿದು. ನಮ್ಮ ತಾಯಿಗಾಗಿ ಮಾಡಿರುವ ಸಿನಿಮಾ. ಇಂದು ಸಂಜೆ ಕುಂಬಳಕಾಯಿ ಹೊಡೆದು ನಮ್ಮ 'ಜಯಮ್ಮನ ಮಗ' ಚಿತ್ರ ಸೆನ್ಸಾರ್ ಗೆ ಹೋಗುತ್ತಿದೆ. ನಾನು ಕಾಳಿ ಮಾತೆಯನ್ನು ತುಂಬಾ ನಂಬುತ್ತೇನೆ.

ಶಾಂತಿಗಾಗಿ ಈ ಹೋಮವನ್ನು ಮಾಡಿಸುತ್ತಿದ್ದೇನೆ

ಈ ಚಿತ್ರದಲ್ಲಿ ಅಣ್ಣಮ್ಮ, ನಾಗಮ್ಮ, ಯಲ್ಲಮ್ಮ, ಮಾರಮ್ಮ, ಅಂಗಾಳ ಪರಮೇಶ್ವರಿ ದೇವತೆಗಳು ಪ್ರತ್ಯಕ್ಷವಾಗುತ್ತವೆ. ಅದಕ್ಕಾಗಿ ಶಾಂತಿ ಮಾಡಿಸುತ್ತಿದ್ದೇನೆ ಎಂದಿದ್ದಾರೆ ದುನಿಯಾ ವಿಜಯ್. ಯಾರಾದರೂ ಮಾಡಿಸಿರುವ ಮಾಟ ಮಂತ್ರಗಳ ಪರಿಣಾಮ ತಮ್ಮ ಮೇಲೆ ಆಗಬಾರದು ಎಂಬ ಉದ್ದೇಶದಿಂದ ಈ ಪ್ರತ್ಯಂಗಿರಾ ಹೋಮವನ್ನು ಮಾಡಲಾಗುತ್ತದೆ ಎಂಬ ಪ್ರತೀತಿ ಇದೆ.

ಎಂಟು ಬಗೆಯ ವೇಷಭೂಷಣಗಳಲ್ಲಿ ವಿಜಯ್

ಇನ್ನು ಜಯಮ್ಮನ ಮಗ ಚಿತ್ರದ ವಿಚಾರಕ್ಕೆ ಬಂದರೆ, ಚಿತ್ರದ ಶೀರ್ಷಿಕೆ ಗೀತೆಗೆ ಸ್ವತಃ ವಿಜಯ್ ಅವರೇ ಹೇಳಿ ಮನೆ ಮನೆ ಮಗನಾಗಿ ‘ಜಯಮ್ಮನ ಮಗ' ಚಿತ್ರದಲ್ಲಿ ಕಂಗೊಳಿಸಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಅವರು ಎಂಟು ಬಗೆಯ ವೇಷ ಭೂಷಣಗಳನ್ನು ತೊಡಿಸಿ ವಿಜಯ್ ಅವರನ್ನು ಕುಣಿಸಿದ್ದಾರೆ. ಈ ಚಿತ್ರವನ್ನು ಸಮಸ್ತ ತಾಯಂದರಿಗಾಗಿ ವಿಜಯ್ ಅರ್ಪಿಸುತ್ತಿದ್ದಾರೆ.

ಇವ್ನ ಹಿಡ್ಕೊಳ್ಳಿ ನೆಮ್ಮದಿ ತಂದ್ಕೊಳ್ಳಿ ಎಂಬುದು ಚಿತ್ರದ ಅಡಿಬರಹ

ಅವರ ಹೆತ್ತವರ ಹೆಸರಿನಲ್ಲಿ ಈ ಚಿತ್ರದ ನಿರ್ಮಾಣ ಸಹ ಮಾಡುತ್ತಿದ್ದಾರೆ. 'ಜಯಮ್ಮನ ಮಗ' ಚಿತ್ರದ ಅಡಿ ಬರಹ ‘ಇವ್ನ ಹಿಡ್ಕೊಳ್ಳಿ ನೆಮ್ಮದಿ ತಂದ್ಕೊಳ್ಳಿ' ಎಂದು ಹೇಳಲಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಹಾಡಿನ ಸಾಲಿನಿಂದ ಆಯ್ಕೆ ಮಾಡಲಾಗಿದೆ.

ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ಆಕ್ಷನ್ ಕಟ್

ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ವಿಕಾಸ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಕಳೆದ 9 ವರ್ಷಗಳಿಂದ ನಾಯಕ ನಿರ್ಮಾಪಕರಿಗೆ ಪರಿಚಯ. ಇದು ತಮಗೆ ಸಿಕ್ಕ ಅನಿರೀಕ್ಷಿತ ಅವರಕಾಶ. ನಿರ್ದೇಶನ ಮಾಡಲು ಚಿತ್ರದ ಕಥಾವಸ್ತು ನೀಡಿದವರು ವಿಜಯ್ ಅವರೇ ಎನ್ನುತ್ತಾರೆ ವಿಕಾಸ್.

ಜಯಮ್ಮಳಾಗಿ ಕಲ್ಯಾಣಿ ಅಭಿನಯ

ರಾಜ್ಯ ಪ್ರಶಸ್ತಿ ನಟಿ ಕಲ್ಯಾಣಿ ಅವರು 'ಜಯಮ್ಮಳಾಗಿ' ಅಭಿನಯಿಸಿದ್ದಾರೆ. ರಂಗಾಯಣ ರಘು 'ಜಯಮ್ಮನ ಮಗ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಡನಂಬಿಕೆಯ ಸುತ್ತ ರಚಿಸಿರುವ ಕಥೆಯ ನಾಯಕಿ ಡಾಕ್ಟರ್ ಭಾರತಿ.

ಖಳನಟನಾಗಿ ಉದಯ್ ಅಭಿನಯ

ಉದಯ್ ಈ ಚಿತ್ರದಲ್ಲಿ ಖಳ ನಟರಾಗಿ ಅಭಿನಯಿಸಿದ್ದಾರೆ. ಅನಿಲ್, ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಸಹ ಪಾತ್ರವರ್ಗದಲ್ಲಿ ಇರುವರು. ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರದಲ್ಲಿ ನಾಲ್ಕು ಭರ್ಜರಿ ಸಾಹಸ ಸನ್ನಿವೇಶಗಳಿವೆ. ಮಾಸ್ ಮಾಧ ಈ ಚಿತ್ರದ ಸಾಹಸ ನಿರ್ದೇಶಕರು. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು.

English summary
Kannada actor Duniya Vijay performing Pratyangira Devi Homam or Pratyangira Homam at Angala Parameshwari temple in Bangalore on 6th August at 6 pm Bheemana Amavasya day. The homa fire ritual performed for protection against evil eye.
Please Wait while comments are loading...