»   » ಅಣ್ಣಾವ್ರ ಅಭಿಮಾನಿ 'ಕನಕ'ನಿಗೆ ಹೆಚ್ಚಾಯ್ತು ಡಿಮ್ಯಾಂಡ್

ಅಣ್ಣಾವ್ರ ಅಭಿಮಾನಿ 'ಕನಕ'ನಿಗೆ ಹೆಚ್ಚಾಯ್ತು ಡಿಮ್ಯಾಂಡ್

Posted By:
Subscribe to Filmibeat Kannada

ಕನಕ.. ಅಣ್ಣಾವ್ರ ಅಭಿಮಾನಿ ಅನ್ನೋ ಟಾಗ್ ಲೈನ್ ಇಟ್ಟು ಸೆಟ್ಟೇರಿದ್ದ ಸಿನಿಮಾ ಗಾಂಧಿನಗರದಲ್ಲಿ ಬಾರಿ ಸದ್ದು ಮಾಡುತ್ತಿದೆ. ಟೀಸರ್ ಹಾಗೂ ಟ್ರೇಲರ್ ನಲ್ಲಿ ಡೈಲಾಗ್ ಮೂಲಕ ಘರ್ಜಿಸಿದ ಕನಕನ ಬರುವಿಕೆಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಆರ್ ಚಂದ್ರು ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ಕನಕ ಚಿತ್ರದಲ್ಲಿ ಮಾನ್ವಿತಾ ಹರೀಶ್ ಹಾಗೂ ಹರಿಪ್ರಿಯಾ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.

ನವೀನ್ ಸಜ್ಜು ಸಂಗೀತ ನಿರ್ದೇಶನದ ಕನಕ ಚಿತ್ರದ ಹಾಡುಗಳು ಬಿಡುಗಡೆಯಾಗಿ ಜನರ ಪ್ರೀತಿಯನ್ನ ಗಳಿಸಿವೆ. ವರ್ಷದ ಅಂತ್ಯಕ್ಕೆ ಬರಬೇಕಿದ್ದ ಕನಕ ಸಿನಿಮಾವನ್ನ ಹೊಸವರ್ಷಕ್ಕೆ ಅಂದರೆ ಜನವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಸೆನ್ಸಾರ್ ಬಾಗಿಲಲ್ಲಿರುವ ಕನಕ ಚಿತ್ರದ ಸ್ಪೆಷಾಲಿಟೀಸ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಓದಿರಿ '

ಕನಕ ಪಕ್ಕಾ ಅಣ್ಣಾವ್ರ ಅಭಿಮಾನಿ

ಕನಕ ಸಿನಿಮಾ ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರ. 'ತಾಜ್ ಮಹಲ್', 'ಮೈಲಾರಿ', 'ಚಾರ್ ಮಿನಾರ್' ಗಳಂತಹ ಹಿಟ್ ಚಿತ್ರಗಳನ್ನ ಕನ್ನಡ ಸಿನಿಮಾರಂಗಕ್ಕೆ ನೀಡಿದ ನಿರ್ದೇಶಕ ಆರ್ ಚಂದ್ರು ಡೈರೆಕ್ಟ್ ಮಾಡಿ ನಿರ್ಮಾಣ ಮಾಡಿರುವ ಸಿನಿಮಾ. ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಅಣ್ಣಾವ್ರ ಅಭಿಮಾನಿಗಳಿಗೆ ಕುತೂಹಲ

ಸಿನಿಮಾದಲ್ಲಿ ಅಣ್ಣಾವ್ರ ಅಭಿಮಾನಿಯಾಗಿ ದುನಿಯಾ ವಿಜಿ ಕಾಣಿಸಿಕೊಂಡಿದ್ದಾರೆ. ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಇಟ್ಟುಕೊಂಡು ಸಿನಿಮಾ ಕತೆಯನ್ನ ಎಣೆಯಲಾಗಿದೆ. ಆದ್ದರಿಂದ ಕನಕ ಚಿತ್ರ ರಾಜ್ ಅಭಿಮಾನಿಗಳಿಗೂ ಕುತೂಹಲ ಮೂಡಿಸಿದೆ.

ದುನಿಯಾ ವಿಜಿಯ ನೆಚ್ಚಿನ ಚಿತ್ರ

ಕಂಪ್ಲೀಟ್ ಆಕ್ಷನ್ ಸಿನಿಮಾಗಳಲ್ಲಿ ಅಭಿನಯಿಸಿರೋ ದುನಿಯಾ ವಿಜಿ ಕೆರಿಯರ್ ನಲ್ಲಿ ಕನಕ ತುಂಬಾ ವಿಶೇಷವಾದ ಚಿತ್ರ. ಇಲ್ಲಿಯ ತನಕ ಮಾಡಿರುವ ಚಿತ್ರಗಳಿಗಿಂತ ಕನಕ ತುಂಬಾ ಸ್ಪೆಷಲ್ ಆಗಿರುತ್ತದೆ.

ಹೊಸ ವರ್ಷಕ್ಕೆ ದುನಿಯಾ ವಿಜಿ ಸಿನಿಮಾ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳ ಅಂತ್ಯಕ್ಕೆ ಕನಕನ ದರ್ಶನ ಭಾಗ್ಯ ಅಭಿಮಾನಿಗಳಿಗೆ ಸಿಗಬೇಕಿತ್ತು. ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಸಿನಿಮಾತಂಡ ಚಿತ್ರದ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಲಿದೆ.

ಅದ್ದೂರಿ ಸಿನಿಮಾ ಅದ್ದೂರಿ ತಾರಾಗಣ

ಆರ್ ಚಂದ್ರು ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊಂದಿರುವ ಕನಕ ಚಿತ್ರದಲ್ಲಿ ಅದ್ದೂರಿ ತಾರಾಗಣವಿದೆ. ಸಿನಿಮಾದ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಗಳನ್ನ ಹಾಕಿ ಶೂಟಿಂಗ್ ಮಾಡಲಾಗಿದೆ.

English summary
Duniya Vijay starrer Kannada movie 'Kanaka' is expected to be released in the new year (january), Duniya Viji, Haripriya and Manvitha Harish have acted in the movie. R Chandru directed the kanaka movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X