For Quick Alerts
  ALLOW NOTIFICATIONS  
  For Daily Alerts

  'ಮಾಸ್ತಿಗುಡಿ' ಚಿತ್ರಕ್ಕಾಗಿ ದುನಿಯಾ ವಿಜಯ್ 'ಸೂಪರ್ ಸ್ಟಂಟ್ಸ್'

  By Bharath Kumar
  |

  ದುನಿಯಾ ವಿಜಯ್ ಮತ್ತು ನಾಗಶೇಖರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಚಿತ್ರದ ಆರಂಭದಿಂದಲೂ ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

  ನಾಗರಹೊಳೆ, ದಾಂಡೇಲಿ ಸೇರಿದಂತೆ ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಮುಗಿಸಿರುವ ಮಾಸ್ತಿಗುಡಿ, ಈಗ ಕೃತಕ ಕಾಡಿನ ಸೆಟ್ ನಿರ್ಮಾಣ ಮಾಡಿ, ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುತ್ತಿದೆ. ಇದಕ್ಕಾಗಿ ತಿಂಗಳುಗಳ ಕಾಲ ಸಮಯ ತೆಗೆದುಕೊಂಡು ಪ್ಲಾನ್ ಮಾಡಿ ಶೂಟಿಂಗ್ ಮಾಡಲಾಗುತ್ತಿದೆ.[ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್ ]

  ವಿಭಿನ್ನ ಕಥಾಹಂದರವನ್ನೊಳಗೊಂಡ ಈ ಚಿತ್ರದಲ್ಲಿ ದುನಿಯಾ ವಿಜಯ್, ನಟಿ ಅಮೂಲ್ಯ, ಅನಿಲ್, ಉದಯ್, ದೇವರಾಜ್, ರವಿಶಂಕರ್ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನೈಜಕಥೆಯಾಧರಿತ 'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಿ ಹಲವು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಮುಂದೆ ಓದಿ....

  ಕ್ಲೈಮ್ಯಾಕ್ಸ್ ಹಂತದಲ್ಲಿ 'ಮಾಸ್ತಿ ಗುಡಿ'

  ಕ್ಲೈಮ್ಯಾಕ್ಸ್ ಹಂತದಲ್ಲಿ 'ಮಾಸ್ತಿ ಗುಡಿ'

  ಯಾವುದೇ ವಿವಾದವಿಲ್ಲದೆ, ಯಾವುದೇ ಅಡೆ ತಡೆಗಳಿಲ್ಲದೆ ಚಿತ್ರೀಕರಣ ಮಾಡುತ್ತಿದ್ದ 'ಮಾಸ್ತಿಗುಡಿ', ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಒಟ್ಟು 11 ದಿನಗಳ ಕ್ಲೈಮ್ಯಾಕ್ಸ್ ನಡೆಯಲಿದ್ದು, ಸದ್ಯ, ಇಂಡೋರ್ ನಲ್ಲಿ 3 ದಿನಗಳ ಶೂಟಿಂಗ್ ನಡೆಯುತ್ತಿದೆ.['ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?]

  ಕ್ಲೈಮ್ಯಾಕ್ಸ್ ಗಾಗಿ ಅದ್ದೂರಿ ಸೆಟ್

  ಕ್ಲೈಮ್ಯಾಕ್ಸ್ ಗಾಗಿ ಅದ್ದೂರಿ ಸೆಟ್

  'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಬಹಳ ಮುಖ್ಯವಾಗಿದೆಯಂತೆ. ಹಾಗಾಗಿ ಅದನ್ನ ಕಾಡಿನಲ್ಲಿ ಚಿತ್ರೀಕರಿಸಲು ಕಷ್ಟವಾಗಬಹುದು ಅಂತ, ಕೃತಕವಾಗಿ ಕಾಡಿನ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಿಸುತ್ತಿದ್ದಾರಂತೆ. ಉಳಿದಂತೆ ಹೆಲಿಕಾಫ್ಟರ್, ಹಡುಗುಗಳಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವುದು ಬಾಕಿಯಿದೆಯಂತೆ.

  40 ಲಕ್ಷ ಖರ್ಚು!

  40 ಲಕ್ಷ ಖರ್ಚು!

  ಕಂಠೀರವ ಸ್ಟುಡಿಯೋದಲ್ಲಿ ಸುಮಾರು 40 ಲಕ್ಷ ಖರ್ಚು ಮಾಡಿ ಸೆಟ್ ನಿರ್ಮಾಣ ಮಾಡಲಾಗಿದೆ. ಕಲಾ ನಿರ್ದೇಶಕ ಯು ಕೆ ಕೃಪಾ ತಮ್ಮ ತಂಡದ ಜೊತೆ 7 ದಿನಗಳ ಕಾಲ ರಾತ್ರಿ-ಹಗಲು ಕೆಲಸ ಮಾಡಿದ್ದಾರಂತೆ. ಸುಮಾರು 20 ರಿಂದ 25 ಜನ ಆರ್ಟಿಸ್ಟ್ ಗಳನ್ನ ಹೊರಗಡೆಯಿಂದ ಕರೆಸಿ ಕೃತಕ ಕಾಡನ್ನ ನಿರ್ಮಾಣ ಮಾಡಿದ್ದಾರಂತೆ.

  ದುನಿಯಾ ವಿಜಯ್ ಸೂಪರ್ 'ಸ್ಟಂಟ್'

  ದುನಿಯಾ ವಿಜಯ್ ಸೂಪರ್ 'ಸ್ಟಂಟ್'

  ಚಿತ್ರದಲ್ಲಿ ಒಟ್ಟು 6 ಫೈಟ್ ಗಳಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಕೇವಲ ಸ್ಟಂಟ್ಸ್ ಗಳಿಗಾಗಿಯೇ 1.25 ಲಕ್ಷ ಖರ್ಚು ಮಾಡಲಾಗುತ್ತಿದೆಯಂತೆ. ಸದ್ಯ, ದುನಿಯಾ ವಿಜಯ್ ಮತ್ತು ಚಿತ್ರದ ಖಳನಾಯಕರಾಗಿರುವ ಉದಯ್ ಹಾಗೂ ಅನಿಲ್ ನಡುವಿನ ಕ್ಲೈಮ್ಯಾಕ್ಸ್ ಫೈಟ್ ಶೂಟ್ ಮಾಡುತ್ತಿದ್ದು, ಈ ಸಾಹಸ ದೃಶ್ಯವನ್ನ ರವಿವರ್ಮ ನಿರ್ದೇಶನ ಮಾಡುತ್ತಿದ್ದಾರೆ.

  ವಿಭಿನ್ನ ಪಾತ್ರಗಳಲ್ಲಿ ಬ್ಲ್ಯಾಕ್ ಕೋಬ್ರಾ

  ವಿಭಿನ್ನ ಪಾತ್ರಗಳಲ್ಲಿ ಬ್ಲ್ಯಾಕ್ ಕೋಬ್ರಾ

  'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಮಿಂಚಿದ್ದಾರೆ. 25ರ ಯುವಕ, 35ರ ಮಧ್ಯ ವಯಸ್ಸಿನ ಯುವಕ ಹಾಗೂ 75ರ ಮುದುಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರದ ಪೊಸ್ಟರ್ ಗಳು ಬಿಡುಗಡೆಯಾಗಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಾಗಿಸಿವೆ.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]

  ಇಬ್ಬರು ನಾಯಕಿಯರು

  ಇಬ್ಬರು ನಾಯಕಿಯರು

  'ಮಾಸ್ತಿ ಗುಡಿ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ ಚಿತ್ರದ ಮೊದಲ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಎರಡನೇ ನಾಯಕಿಯಾಗಿ ಕೃತಿ ಖರಬಂದ ಅಭಿನಯಿಸಿದ್ದಾರೆ.

  ನಾಗಶೇಖರ್ ಆಕ್ಷನ್ ಕಟ್

  ನಾಗಶೇಖರ್ ಆಕ್ಷನ್ ಕಟ್

  'ಸಂಜು ವೆಡ್ಸ್ ಗೀತಾ', 'ಮೈನಾ' ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ನಾಗಶೇಖರ್, 'ಮಾಸ್ತಿಗುಡಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕವಿರಾಜ್ ಸಾಹಿತ್ಯ ಈ ಚಿತ್ರಕ್ಕಿದ್ದು, ಸಾಧು ಕೋಕಿಲ ಸಂಗೀತ ನೀಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಗೂ ಮೊದಲೇ ಹಾಡುಗಳು ದಾಖಲೆ ಮೊತ್ತಕ್ಕೆ ಸೇಲಾಗಿದೆ.[ರಿಲೀಸ್ ಗೂ ಮುನ್ನ 'ಮಾಸ್ತಿ ಗುಡಿ'ಗೆ ಈ ಪಾಟಿ ಬೇಡಿಕೆನಾ? ]

  ಡಿಸೆಂಬರ್ ನಲ್ಲಿ ತೆರೆಗೆ

  ಡಿಸೆಂಬರ್ ನಲ್ಲಿ ತೆರೆಗೆ

  ಕ್ಲೈಮ್ಯಾಕ್ಸ್ ಚಿತ್ರೀಕರಣದೊಂದಿಗೆ ಡಬ್ಬಿಂಗ್ ಕೆಲಸನೂ ಶುರುವಾಗಲಿದ್ದು, ಡಿಸೆಂಬರ್ ನಲ್ಲಿ ಥಿಯೇಟರ್ ಗೆ ಬರುವ ಯೋಚನೆಯಲ್ಲಿದೆ ಚಿತ್ರತಂಡ. ಕೆಪಿಎಸ್ ಕಂಬೈನ್ಸ್ ಅಡಿಯಲ್ಲಿ ಸುಂದರ್ ಗೌಡ್ರು ಹಾಗೂ ಅನಿಲ್ ಕುಮಾರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಗ್ರಹಣವಿದೆ.

  English summary
  Duniya Vijay Starrer 'Maasthigudi' have reached to the climax. the movie Directed by Nagashekhar. Duniya Vijay, Amulya, kriti kharbanda are in lead role. They are planning to release the film in December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X