»   » ಉಪ್ಪಿ 'ಪ್ರಜಾಕೀಯ'ಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಬೆಂಬಲ

ಉಪ್ಪಿ 'ಪ್ರಜಾಕೀಯ'ಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಬೆಂಬಲ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕಾರಣಕ್ಕೆ ಜನ ಸಮಾನ್ಯರು ಮತ್ತು ಅಭಿಮಾನಿಗಳು ಮಾತ್ರವಲ್ಲ, ಅನೇಕ ರಾಜಕೀಯ ನಾಯಕರು, ಸಮಾಜ ಸೇವಕರು, ದಕ್ಷ ಅಧಿಕಾರಿಗಳು ಹೀಗೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಈಗ ಉಪೇಂದ್ರ ಅವರ ಪ್ರಜಾಕೀಯಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಉಪೇಂದ್ರ ಅವರ ಮನೆಗೆ ಭೇಟಿ ನೀಡಿದ್ದ ಅನುಪಮಾ ಶಣೈ, ಉಪ್ಪಿಯ ಆಲೋಚನೆಗಳ ಬಗ್ಗೆ ಅವರ ಜೊತೆ ಚರ್ಚೆ ನಡೆಸಿದ್ದಾರೆ.

Dysp anupama shenoy met Upendra

ಈ ವೇಳೆ 'ಪ್ರಜಾಕಾರಣ'ದ ಬಗ್ಗೆ ಉಪೇಂದ್ರ ಮತ್ತು ಅನುಪಮಾ ಶಣೈ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ಉಪೇಂದ್ರ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋಗಳನ್ನ ಕೂಡ ಹಂಚಿಕೊಂಡಿದ್ದಾರೆ.

ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ

Dysp anupama shenoy met Upendra

ಕಳೆದ ಎರಡು ದಿನಗಳ ಹಿಂದೆಯಷ್ಟೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಉಪ್ಪಿಯ ನಿವಾಸಕ್ಕೆ ಭೇಟಿ ಕೊಟ್ಟು, 'ಪ್ರಜಾಕಾರಣ'ದ ಕುರಿತು ಚರ್ಚೆ ನಡೆಸಿದ್ದರು.

Upendra Upcoming Movie | Filmibeat Kannada

ನಟ ಉಪೇಂದ್ರರನ್ನು ಭೇಟಿ ಮಾಡಿದ ಪ್ರಮೋದ್ ಮುತಾಲಿಕ್

English summary
Karnataka Dysp Anupama Shenoy Met Real Star Upendra, in his residence at kathriguppe.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada