»   » ಯೂಟ್ಯೂಬಲ್ಲಿ ಕನ್ನಡ ಕಿರುಚಿತ್ರಕ್ಕೆ ಸಿಕ್ಕಾಪಟ್ಟೆ ಹಿಟ್ಸ್

ಯೂಟ್ಯೂಬಲ್ಲಿ ಕನ್ನಡ ಕಿರುಚಿತ್ರಕ್ಕೆ ಸಿಕ್ಕಾಪಟ್ಟೆ ಹಿಟ್ಸ್

Posted By:
Subscribe to Filmibeat Kannada

ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ಹಲವಾರು ಚಿತ್ರಗಳ ಪ್ರಚಾರಕ್ಕೆ ಹೊಸ ವೇದಿಕೆಯಾಗುತ್ತಿದೆ. ಈಗ ಮತ್ತೊಂದು ಚಿತ್ರವೊಂದು ಸದ್ದಿಲ್ಲದಂತೆ ಯೂಟ್ಯೂಬಲ್ಲಿ ಹಿಟ್ ಆಗಿದೆ. ಈ ಕಿರುಚಿತ್ರದ ವಿಶೇಷಗಳು ಒಂದೆರಡಲ್ಲ.

ಈ ಕಿರುಚಿತ್ರದ ಹೆಸರು EVOL. ಇದೇನು ಸ್ವಾಮಿ ಹೆಸರು ವಿಚಿತ್ರವಾಗಿದೆಯಲ್ಲಾ ಅಂತ ಅನ್ನಿಸಬಹುದು. ಈ ರೀತಿ ವಿಭಿನ್ನವಾಗಿ ಆಲೋಚಿಸಿದರೇ ತಾನೆ ಹೊಸ ಹೊಸ ಚಿತ್ರಗಳು ಬರುವುದು. ಜನಮನ ಗೆಲ್ಲುವುದು. ಅಂಥಹದ್ದೇ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದಾರೆ ಅನಿವಾಸಿ ಕನ್ನಡಿಗ ವಿಜೇಂದ್ರ ಕಲಾಲಬಂಡಿ.

A screen shot from EVOL

ಇನ್ನು ಚಿತ್ರದ ಶೀರ್ಷಿಕೆ ಕಡೆಗೆ ಕೊಂಚ ಗಮನ ಹರಿಸೋಣ. LOVE ಎಂಬ ಪದದ ಅಕ್ಷರಗಳನ್ನು ಹಿಂದುಮುಂದಾಗಿ ಓದಿ ನೋಡಿ. ಆಗ EVOL ಎಂಬ ಹೊಸ ಪದ ಸಿಗುತ್ತದೆ. ಅಂದರೆ 'ಲವ್'ಗೆ ಹೊಸ ಭಾಷ್ಯೆ ಬರೆದಿದ್ದಾರೆ ನಿರ್ದೇಶಕರಾದ ಕಿಶನ್ ಬದ್ರಿನಾಥ್.

ಸದ್ಯಕ್ಕೆ ಲಂಡನ್ ನಲ್ಲಿ ವಾಸವಾಗಿರುವ ವಿಜೇಂದ್ರ ಅವರು ಸಂಗೀತ ಕಲಾವಿದರೂ ಹೌದು. ಈ ಕಿರುಚಿತ್ರದ ವಿಶೇಷ ಎಂದರೆ ಲಂಡನ್ ನಗರದಲ್ಲಿರುವ ಕನ್ನಡಿಗರೇ ಸೇರಿ ತಯಾರಿಸಿರುವ ಚಿತ್ರವಿದು. ಇದನ್ನು ಸಂಪೂರ್ಣವಾಗಿ ಲಂಡನ್ ನಲ್ಲೇ ಚಿತ್ರೀಕರಿಸಲಾಗಿದೆ.

"ಪ್ರಪ್ರಥಮವಾಗಿ ಕನ್ನಡದ ಕಿರು ಚಿತ್ರವೊಂದು ಸಂಪೂರ್ಣವಾಗಿ ಲಂಡನ್ನಿನಲ್ಲಿ ಚಿತ್ರೀಕರಿಸಿದ್ದೇವೆ. ನಿರ್ದೇಶನ, ಛಾಯಗ್ರಹಣ, ನಟರು, ಸಂಗೀತ, ಸಾಹಿತ್ಯ, ಎಲ್ಲವನ್ನು ಲಂಡನ್ನಿನಲ್ಲಿ ವಾಸಿಸಿರುವ ಕನ್ನಡಿಗರು ಸೇರಿ ಮಾಡಿದ್ದೀವಿ" ಎನ್ನುತ್ತಾರೆ ವಿಜೇಂದ್ರ ಕಲಾಲಬಂಡಿ.

ಪಾತ್ರವರ್ಗದಲ್ಲಿ ಮಹೇಶ್ ಗೌಡ, ನೀಲಿಮಾ ರಾವ್, ಅಖಿಲಾ ಶೇಷಾದ್ರಿ, ಲಾವಣ್ಯ ರಾಜು, ಶ್ರೀದೇವಿ ವಿಜೇಂದ್ರ, ವಿಜೇಂದ್ರ ಕಲಾಲಬಂಡಿ, ರಾಮ್ ಕಶ್ಯಪ್ ಮುಂತಾದವರಿದ್ದಾರೆ. ಅಂದಹಾಗೆ ಇದೊಂದು ಕಾಲ್ಪನಿಕ ಚಿತ್ರ ಎಂಬುದು ನಿಮ್ಮ ಗಮನಕ್ಕಿರಲಿ.

ಈಗಾಗಲೆ ಈ ಕಿರುಚಿತ್ರವನ್ನು ಯೂಟ್ಯೂಬ್ ಲ್ಲಿ ಹಾಕಾಲಾಗಿದ್ದು ಕೇವಲ ಎರಡೇ ತಿಂಗಳಲ್ಲಿ 25,000 ಹಿಟ್ಸ್ ಪಡೆದಿದೆ. ಇದುವರೆಗೂ 32,998 ಹಿಟ್ಸ್ ಪಡೆದಿದ್ದು ದಿನೇ ದಿನೇ ಅದರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ತಡ ಯಾಕೆ EVOL ಕನ್ನಡ ಕಿರುಚಿತ್ರದ ವಿಡಿಯೋ ಒಮ್ಮೆ ನೋಡಿ ಆನಂದಿಸಿ, ಅಭಿಪ್ರಾಯಿಸಿ. (ಒನ್ಇಂಡಿಯಾ ಕನ್ನಡ)

English summary
EVOL- a Kannada Short Film by Depth of Thoughts and VijuSri Productions Completely shot and processed in London. The film directed by Vijendra Kalalbandi. The short film got over 30 K hits on the youtube.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada