Don't Miss!
- News
ತ್ರಿಪುರಾ ವಿಧಾನಸಭೆ ಚುನಾವಣೆ: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೈಲ್ವಾನ್' ನೋಡಿ ನಟಿ ಆಕಾಂಕ್ಷ ಸಿಂಗ್ ಬಗ್ಗೆ ಅಚ್ಚರಿ ಟ್ವೀಟ್ ಮಾಡಿದ ಅಭಿಮಾನಿಗಳು
Recommended Video
ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ದಿನ, ಮೊದಲ ಶೋ ನೋಡಿದ ಕಿಚ್ಚನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸುದೀಪ್ ಸೂಪರ್, ಒಳ್ಳೆಯ ಸಿನಿಮಾ, ಕಥೆ ಚೆನ್ನಾಗಿದೆ, ಸುನೀಲ್ ಶೆಟ್ಟಿ ಇಷ್ಟ ಆಗ್ತಾರೆ ಎಂದೆಲ್ಲ ಹೇಳುತ್ತಿದ್ದಾರೆ.
ಸರ್ಪ್ರೈಸ್ ಅಂದ್ರೆ ಪೈಲ್ವಾನ್ ಚಿತ್ರದಲ್ಲಿ ನಟಿ ಆಕಾಂಕ್ಷ ಸಿಂಗ್ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಸುದೀಪ್, ಸುನೀಲ್ ಶೆಟ್ಟಿ, ಕಥೆ ಎಲ್ಲವನ್ನ ಒಂದು ಪಕ್ಕಕ್ಕೆ ಇಟ್ಟರೆ ಆಕಾಂಕ್ಷ ಸಿಂಗ್ ಇಡೀ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದ್ದಾರೆ.
'ಪೈಲ್ವಾನ್'
ಟ್ವಿಟ್ಟರ್
ವಿಮರ್ಶೆ:
ಮೊದಲ
ಶೋ
ನೋಡಿದ
ಪ್ರೇಕ್ಷಕರು
ಹೇಳಿದ್ದೇನು?
ಪೈಲ್ವಾನ್ ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ಕೆಲವರು, ಆಕಾಂಕ್ಷ ಸಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಮುಂಬೈ ಹುಡುಗಿ ಅಭಿನಯದ ಬಗ್ಗೆ ಸ್ಯಾಂಡಲ್ ವುಡ್ ಪ್ರೇಕ್ಷಕ ಏನಂದ್ರು? ಮುಂದೆ ಓದಿ....

ಬ್ರಿಲಿಯಂಟ್ ಅಭಿನಯ
ಪೈಲ್ವಾನ್ ಚಿತ್ರದಲ್ಲಿ ಆಕಾಂಕ್ಷ ಸಿಂಗ್ ಅಭಿನಯ ನಿಜಕ್ಕೂ ಇಷ್ಟ ಆಗುತ್ತೆ. ಕನ್ನಡದ ಹುಡುಗಿಯೇ ಎನಿಸುವಷ್ಟು ಮೋಡಿ ಮಾಡಿದ್ದಾರೆ. ಇಲ್ಲೊಬ್ಬ ಅಭಿಮಾನಿ ಆಕಾಂಕ್ಷ ಬಗ್ಗೆ ಟ್ವೀಟ್ ಮಾಡಿದ್ದು ''ಮಳ್ಳಿರಾವ ಚಿತ್ರದಿಂದ ನಿಮಗೆ ನಾನು ಅಭಿಮಾನಿ. ನಿಜಕ್ಕೂ ಬ್ರಿಲಿಯೆಂಟ್ ಆಕ್ಟಿಂಗ್. ಎಮೋಷನಲ್ ದೃಶ್ಯಗಳಂತೂ ಅದ್ಭುತ. ನಿಮ್ಮಿಂದ ಮತ್ತಷ್ಟು ಚಿತ್ರಗಳನ್ನ ನಿರೀಕ್ಷೆ ಮಾಡುತ್ತಿದ್ದೇವೆ'' ಎಂದಿದ್ದಾರೆ.

ನೀವು ಬೇರೆ ಭಾಷೆಯ ನಟಿ ಎನಿಸುವುದೇ ಇಲ್ಲ
''ಎಮೋಷನಲ್, ಬಾಕ್ಸರ್, ಕುಸ್ತಿ ದೃಶ್ಯಗಳಲ್ಲಿ ಕಿಚ್ಚ ಸುದೀಪ್ ಸೂಪರ್. ಆಕಾಂಕ್ಷ ಸಿಂಗ್ ಅವರು ನೂರಕ್ಕೆ ನೂರರಷ್ಟು ಅಭಿನಯ ನೀಡಿದ್ದಾರೆ. ನೀವು ಬೇರೆ ಇಂಡಸ್ಟ್ರಿಯವರೆಂದು ನಮಗೆ ಅನಿಸುವುದೇ ಇಲ್ಲ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Pailwan
Review
:
ಸುದೀಪ್
ಏಳಲೂ
ಇಲ್ಲ...
ಬೀಳಲೂ
ಇಲ್ಲ..

ಆಕಾಂಕ್ಷ ಸರ್ಪ್ರೈಸ್ ಎಂಟ್ರಿ
''ಕಿಚ್ಚ ಸುದೀಪ್ ಮತ್ತು ಸುನೀಲ್ ಶೆಟ್ಟಿ ಅವರ ಅಭಿನಯ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಆಕಾಂಕ್ಷ ಸಿಂಗ್ ನಿಜಕ್ಕೂ ಸರ್ಪ್ರೈಸ್ ಪ್ಯಾಕೇಜ್. ಅವರಿಂದ ಅತ್ಯದ್ಭುತ ನಟನೆ ಬಂದಿದೆ. ನೀವು ಇಲ್ಲೇ ಉಳಿದುಕೊಳ್ಳಬೇಕು. ಅಭಿಯನಕ್ಕೆ ತಕ್ಕ ಪಾತ್ರ ಸಿಕ್ಕಿದೆ'' ಎಂದು ಮತ್ತೊಬ್ಬರು ಟ್ವೀಟ್ ಮಾಡಿ ಪ್ರಶಂಸಿದ್ದಾರೆ.

ಇದು ನಾಲ್ಕನೇ ಚಿತ್ರ
ಆಕಾಂಕ್ಷ ಸಿಂಗ್ ಅವರಿಗೆ ಇದು ನಾಲ್ಕನೇ ಚಿತ್ರ. 2017ರಲ್ಲಿ ಬದ್ರಿನಾಥ್ ಕಿ ದುಲ್ಹಾನಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಬಳಿಕ ತೆಲುಗಿನಲ್ಲಿ ಮಳ್ಳಿರಾವ ಚಿತ್ರದಲ್ಲಿ ನಟಿಸುವ ಜೊತೆಗೆ ಸೌತ್ ಇಂಡಸ್ಟ್ರಿ ಕಡೆಗೆ ಬಂದರು. ದೇವದಾಸ್ ಅಂತ ಇನ್ನೊಂದು ತೆಲುಗು ಚಿತ್ರ ಮಾಡಿದ ಆಕಾಂಕ್ಷ ಸಿಂಗ್ ಈಗ ಪೈಲ್ವಾನ್ ನಲ್ಲಿ ಕಾಣಿಸಿಕೊಂಡರು.

ಕನ್ನಡದಲ್ಲಿ ಉಳಿಯಲಿ ಎಂಬ ಅಭಿಪ್ರಾಯ
ಸಾಮಾನ್ಯವಾಗಿ ಬೇರೆ ಇಂಡಸ್ಟ್ರಿಯಿಂದ ಬಂದ ನಟಿಯರು ಒಂದು ಸಿನಿಮಾ ಮಾಡಿ ಹೋದ್ಮೇಲೆ ಮತ್ತೆ ಸ್ಯಾಂಡಲ್ ವುಡ್ ಗೆ ಬರೋದು ಬಹಳ ಅಪರೂಪ. ಇದೀಗ, ಆಕಾಂಕ್ಷ ಸಿಂಗ್ ಅವರ ನಟನೆಗೆ ಬೋಲ್ಡ್ ಆಗಿರುವ ಅಭಿಮಾನಿಗಳು, ಆಕಾಂಕ್ಷ ಅವರು ಇಲ್ಲೇ ಉಳಿಯಲಿ ಎನ್ನುತ್ತಿದ್ದಾರೆ. ಸದ್ಯಕ್ಕೆ ಬೇರೆ ಚಿತ್ರವೂ ಘೋಷಣೆಯಾಗಿಲ್ಲ. ಈ ಬಗ್ಗೆ ಕಾದು ನೋಡಬೇಕಿದೆ.