TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
'ಯುವರತ್ನ' ಚಿತ್ರಕ್ಕೆ ಈ ನಟಿಯನ್ನೇ ಹೀರೋಯಿನ್ ಮಾಡಿ: ಫ್ಯಾನ್ಸ್ ಒತ್ತಾಯ
ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಈಗ ಪುನೀತ್ ಮುಂದಿನ ಸಂತೋಷ್ ಆನಂದ್ ರಾಮ್ ಜೊತೆಗಿನ ಯುವರತ್ನ.
'ರಾಜಕುಮಾರ' ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಯುವರತ್ನ ಚಿತ್ರದಲ್ಲಿ ಒಟ್ಟಾಗಿದ್ದು, ಫೆಬ್ರವರಿ 14 ರಂದು ಚಿತ್ರೀಕರಣ ಆರಂಭ ಮಾಡ್ತಿದೆ.
ಕಾಜಲ್, ತಮನ್ನಾ, ಕೀರ್ತಿ ಸುರೇಶ್ 'ಯುವರತ್ನ'ನಿಗೆ ಜೋಡಿಯಾಗೋದು ಬೇಡವಂತೆ!
ಯುವರತ್ನ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ ಪರಭಾಷೆಯಿಂದ ಸ್ಟಾರ್ ನಟಿಯೊಬ್ಬರನ್ನ ಕರೆತರುವ ಪ್ಲಾನ್ ಮಾಡಲಾಗಿದೆಯಂತೆ. ಆದ್ರೆ, ನಟಸಾರ್ವಭೌಮ ಸಿನಿಮಾ ನೋಡಿದ ನಂತರ ಅಪ್ಪು ಫ್ಯಾನ್ಸ್ ಯುವರತ್ನ ನಾಯಕಿಗಾಗಿ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ, ಪವರ್ ಅಭಿಮಾನಿಗಳು ಹೇಳ್ತಿರುವ ಆ ನಾಯಕಿ ಯಾರು? ಮುಂದೆ ಓದಿ.....
ಯುವರತ್ನಕ್ಕೆ ಸಾಥ್ ಕೊಡಲಿ ಅನುಪಮಾ
ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿರುವ ಅನುಪಮಾ ಪರಮೇಶ್ವರನ್ ಅವರು, ಯುವರತ್ನ ಚಿತ್ರಕ್ಕೆ ನಾಯಕಿಯಾಗಲಿ ಎಂದು ಅಪ್ಪು ಅಭಿಮಾನಿಗಳು ಒತ್ತಾಯ ಮಾಡ್ತಿದ್ದಾರೆ.
ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್
ಅಪ್ಪು-ಅನುಪಮಾ ಜೋಡಿ ಸೂಪರ್
ನಟಸಾರ್ವಭೌಮ ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಬರುವ ಅನುಪಮಾ ತಮ್ಮ ಮುದ್ದಾದ ನಟನೆ ಮತ್ತು ನೋಟದ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದಿದ್ದು, ಅಪ್ಪು ಮತ್ತು ಅನುಪಮಾ ಜೋಡಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪುನೀತ್ ಗೆ ಅನುಪಮಾ ಅತ್ಯುತ್ತಮ ಜೋಡಿ, ಹಾಗಾಗಿ ಯುವರತ್ನ ಚಿತ್ರದಲ್ಲಿ ಇವರನ್ನೇ ನಾಯಕಿಯನ್ನಾಗಿಸಿ ಎಂದು ಬೇಡಿಕೆ ಇಡ್ತಿದ್ದಾರೆ.
ಸಾಧ್ಯತೆ ಇದೆಯಾ?
ಯುವರತ್ನ ಚಿತ್ರತಂಡ ಇನ್ನು ಐದಾರು ದಿನದಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ. ಹಾಗ್ನೋಡಿದ್ರೆ, ಇಷ್ಟೋತ್ತಿಗಾಗಲೇ ಹೀರೋಯಿನ್ ಯಾರು ಎಂದು ಆಯ್ಕೆ ಮಾಡಿಕೊಂಡಿರಬಹುದು. ಒಂದು ವೇಳೆ ನಾಯಕಿಯ ಆಯ್ಕೆ ಅಂತಿಮವಾಗಿಲ್ಲ ಅಂದ್ರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅನುಪಮಾ ಪರಮೇಶ್ವರನ್ ಅವರನ್ನ ಕರೆತರ್ತಾರಾ ಕಾದುನೋಡಬೇಕು.
ಪ್ರೀತಿಯಿಂದ ಸ್ವಾಗತಿಸಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಅನುಪಮಾ
ತಮನ್ನಾ ಅಥವಾ ಕನ್ನಡ ನಟಿ?
ಈ ಹಿಂದೆ ಇದೇ ವಿಚಾರವಾಗಿ ಸುದ್ದಿಯಾದಾಗ ಬಹುಭಾಷೆ ನಟಿ ತಮನ್ನಾ ಹೆಸರು ಜೋರಾಗಿ ಕೇಳಿ ಬಂದಿತ್ತು. ಯಾಕಂದ್ರೆ, ಪುನೀತ್ ಜೊತೆಯಲ್ಲಿ ಜಾಹೀರಾತು ಮಾಡಿದ್ದ ತಮನ್ನಾ ಸಿನಿಮಾ ಕೂಡ ಮಾಡಬಹುದು ಎನ್ನಲಾಗಿತ್ತು. ಅಥವಾ ಕನ್ನಡದ ನಟಿಯೇ ನಾಯಕಿಯಾಗಲಿ ಎಂದು ಕೂಡ ಅಭಿಪ್ರಾಯ ಪಟ್ಟವರು ಇದ್ದಾರೆ. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಈಗ ಅನುಪಮಾ ಹೆಸರು ಸೇರಿಕೊಂಡಿದೆ.