For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ವೇದಿಕೆ ಮೇಲೆ ಕ್ರಾಂತಿ ಪ್ರಮೋಷನ್‌ಗೆ ಮನವಿ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ತೆರೆಗೆ ಬರಲಿದ್ದು, ಚಿತ್ರತಂಡ ಯುಟ್ಯೂಬ್ ಸಂದರ್ಶನಗಳನ್ನು ನೀಡುವುದರ ಮೂಲಕ ಹಾಗೂ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮಾಡುತ್ತಿದೆ.

  ಇನ್ನು ಮೈಸೂರಿನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿದ ಕ್ರಾಂತಿ ಚಿತ್ರತಂಡ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಹಾಗೂ ಮೂರನೇ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆಗೊಳಿಸಿದೆ. ಆದರೆ ಹೊಸಪೇಟೆಯ ಕಾರ್ಯಕ್ರಮದ ವೇಳೆ ಕಿಡಿಗೇಡಿಯೋರ್ವ ನಟ ದರ್ಶನ್ ವೇದಿಕೆ ಮೇಲಿರುವಾಗಲೇ ಚಪ್ಪಲಿ ಎಸೆದದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

  ಹೀಗೆ ದರ್ಶನ್ ಮೇಲೆ ಚಪ್ಪಲಿ ಎಸೆದದ್ದನ್ನು ಖಂಡಿಸಿ ಚಂದನವನದ ಹಲವಾರು ನಟ ಹಾಗೂ ನಟಿಯರು ಪ್ರತಿಕ್ರಿಯಿಸಿದ್ದರು. ದರ್ಶನ್ ಪರ ನಾವಿದ್ದೇವೆ ಇದೊಂದು ನೀಚ ಹಾಗೂ ಅಮಾನವೀಯ ಕೃತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದೇ ರೀತಿ ದರ್ಶನ್ ಅವರ ಮಾಜಿ ಕುಚಿಕು ಗೆಳೆಯ ಸುದೀಪ್ ಕೂಡ ಪ್ರತಿಕ್ರಿಯಿಸಿ ದರ್ಶನ್ ಪರ ನಿಂತಿದ್ದರು.

  ವೈಮನಸ್ಸಿನಿಂದ ಪರಸ್ಪರ ದೂರಾಗಿ ಒಬ್ಬರ ಬಗ್ಗೆ ಒಬ್ಬರು ಎಲ್ಲಿಯೂ ಸಹ ಮಾತನಾಡದೇ ಉಳಿದುಕೊಂಡಿದ್ದರು. ಹೀಗೆ ಇಬ್ಬರ ಮಧ್ಯೆ ಆವರಿಸಿದ್ದ ಮೌನ ಈ ಹೊಸಪೇಟೆ ವಿವಾದದಿಂದಾಗಿ ದೂರಾಯಿತು. ಸುದೀಪ್ ತನ್ನ ಪರವಾಗಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಟ ದರ್ಶನ್ ಧನ್ಯವಾದ ತಿಳಿಸಿದ್ದರು. ಹೀಗೆ ಈ ಇಬ್ಬರೂ ಸಹ ಪರಸ್ಪರ ಬಹಳ ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಮಾತನಾಡಿದ್ದನ್ನು ಕಂಡ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದರು..

  ಬಿಗ್ ಬಾಸ್ ವೇದಿಕೆ ಮೇಲೆ ಕ್ರಾಂತಿ ಪ್ರಚಾರ ನಡೆಯಲಿ

  ಬಿಗ್ ಬಾಸ್ ವೇದಿಕೆ ಮೇಲೆ ಕ್ರಾಂತಿ ಪ್ರಚಾರ ನಡೆಯಲಿ

  ಇನ್ನು ಈ ಟ್ವೀಟ್ ಬಳಿಕ ಇದೀಗ ಇಬ್ಬರ ಅಭಿಮಾನಿಗಳು ಹೊಸದೊಂದು ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಕಿಚ್ಚ ಸುದೀಪ್ ನಿರೂಪಕನಾಗಿ ನಡೆಸಿಕೊಡುತ್ತಿರುವ ಬಿಗ್ ಬಾಸ್ ಒಂಬತ್ತನೇ ಆವೃತ್ತಿ ಕಾರ್ಯಕ್ರಮದ ಫಿನಾಲೆ ವೇದಿಕೆ ಮೇಲೆ ಕ್ರಾಂತಿ ಚಿತ್ರದ ಪ್ರಚಾರ ನಡೆಯಲಿ ಎಂದಿದ್ದಾರೆ ಹಾಗೂ ಚಿತ್ರದ ಟ್ರೈಲರ್ ಅನ್ನು ಈ ವೇದಿಕೆ ಮೇಲೆ ಬಿಡುಗಡೆ ಮಾಡಲಿ ಎಂದು ಬೇಡಿಕೆ ಇಟ್ಟಿದ್ದಾರೆ.

  ಫಿನಾಲೆಯ ಮೆಗಾ ವೇದಿಕೆ ಸರಿಯಾದ ಆಯ್ಕೆ

  ಫಿನಾಲೆಯ ಮೆಗಾ ವೇದಿಕೆ ಸರಿಯಾದ ಆಯ್ಕೆ

  ಹೀಗೆ ಅಭಿಮಾನಿಯೋರ್ವ ಮಾಡಿರುವ ಟ್ವೀಟ್ ಕುರಿತು ಇತರೆ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಇದೊಂದು ಸರಿಯಾದ ಸಮಯ ಎಂದಿದ್ದಾರೆ. ಹೇಗಿದ್ದರೂ ವಾರಾಂತ್ಯದಲ್ಲಿ ಬಿಗ್ ಬಾಸ್ ಸೀಸನ್ ಒಂಬತ್ತರ ಫಿನಾಲೆ ನಡೆಯುವ ಕಾರಣ ಈ ಮೆಗಾ ವೇದಿಕೆ ಮೇಲೆ ಮಾಜಿ ಸ್ನೇಹಿತರ ಮೆಗಾ ಭೇಟಿಯಾದರೆ ಚಂದ ಎಂದಿದ್ದಾರೆ.

  ಮತ್ತೆ ಒಂದಾಗ್ತಾರಾ ಕಿಚ್ಚ - ದಚ್ಚು?

  ಮತ್ತೆ ಒಂದಾಗ್ತಾರಾ ಕಿಚ್ಚ - ದಚ್ಚು?

  ಅಭಿಮಾನಿಗಳೇನೋ ತಮ್ಮ ನೆಚ್ಚಿನ ನಟರು ಒಂದಾದರೆ ಸಾಕು ಎಂದು ಆಸೆ ಪಟ್ಟಿದ್ದಾರೆ. ಆದರೆ ಈ ಎರಡು ಟ್ವೀಟ್‌ಗಳ ಬಳಿಕ ಇಬ್ಬರೂ ನಟರ ನಡುವೆ ಯಾವುದೇ ಮತ್ಯಾವುದೇ ಟ್ವೀಟ್ ಬಂದಿಲ್ಲ. ದರ್ಶನ್ ಧನ್ಯವಾದ ತಿಳಿಸಿದ ಟ್ವೀಟ್‌ಗೆ ಸುದೀಪ್ ಅವರಿಂದ ಅಭಿಮಾನಿಗಳು ಪ್ರತಿಕ್ರಿಯೆ ನಿರೀಕ್ಷಿಸಿದ್ದರು. ಆದರೆ ಟ್ವೀಟ್ ಸಂಭಾಷಣೆ ಅಷ್ಟಕ್ಕೆ ನಿಂತಿದ್ದು, ಇಬ್ಬರ ನಡುವಿನ ಈ ಸಂಭಾಷಣೆ ಈ ವಿವಾದಕ್ಕಷ್ಟೇ ಸೀಮಿತವಾಗದಿರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

  English summary
  Fans demands Kranti team to attend Bigg Boss Kannada show for promoting the film
  Tuesday, December 27, 2022, 7:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X