»   » ನಟಿ ನಯನತಾರಾಗೆ ಅಭಿಮಾನಿಗಳಿಂದ ಮಂದಿರ

ನಟಿ ನಯನತಾರಾಗೆ ಅಭಿಮಾನಿಗಳಿಂದ ಮಂದಿರ

Posted By: ಶಂಕರ್, ಚೆನ್ನೈ
Subscribe to Filmibeat Kannada

ತಮ್ಮ ನೆಚ್ಚಿನ ತಾರೆಗಳ ಹೆಸರಿನಲ್ಲಿ ಮಂದಿರ ಕಟ್ಟುವ ಪರಿಪಾಠ ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಎಲ್ಲರೂ ತಮ್ಮ ನೆಚ್ಚಿನ ತಾರೆಗಳನ್ನು ಹೃದಯವೆಂಬ ಮಂದಿರದಲ್ಲಿ ಆರಾಧಿಸಿದರೆ, ತಮಿಳರು ಮಾತ್ರ ಮಂದಿರ ಕಟ್ಟಿ ಆರಾಧಿಸುವಷ್ಟು ಅಭಿಮಾನ ತೋರುತ್ತಾರೆ.

ಇದುವರೆಗೂ ನಟಿ ಖುಷ್ಬೂ ಹಾಗೂ ನಗ್ಮಾ ಅವರಿಗೆ ಮಂದಿರಗಳನ್ನು ನಿರ್ಮಿಸಿ ಪೂಜೆ, ಪುನಸ್ಕಾರ, ಅರ್ಚನೆ, ಅಷ್ಟೋತ್ತರ ಮಾಡುತ್ತಿದ್ದಾರೆ ಅಭಿಮಾನಿಗಳು. ಇದೀಗ ನಟಿ ನಯನತಾರಾ ಅವರಿಗೂ ಮಂದಿರ ನಿರ್ಮಿಸಲು ಹೊರಟಿದ್ದಾರೆ ಅವರ ಅಭಿಮಾನಿಗಳು.


ಇತ್ತೀಚೆಗೆ ನಯನತಾರಾ ಅವರನ್ನು ಭೇಟಿ ಮಾಡಿದ ಅಭಿಮಾನಿಗಳು, ತಮ್ಮ ಹೆಸರಿನಲ್ಲಿ ಮಂದಿರ ನಿರ್ಮಿಸುತ್ತಿದ್ದೇವೆ. ಇದು ನಮ್ಮ ಕನಸು ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ನಯನತಾರಾ ಅವರಿಂದ ನಯಾಪೈಸೆಯನ್ನೂ ತೆಗೆದುಕೊಳ್ಳುತ್ತಿಲ್ಲ.

ಆದರೆ ಅಭಿಮಾನಿಗಳ ಆಸೆಗೆ ನಯನತಾರಾ ತಣ್ಣೀರೆರಚಿದ್ದಾರೆ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನನ್ನನ್ನು ನೀವೆಲ್ಲಾ ದೇವತೆಯಂತೆ ಆರಾಧಿಸುವುದು ಬೇಡ ಎಂದು ನಯವಾಗಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ.

ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಲಿಲ್ಲವೇ, "ಉಳ್ಳವರು ಶಿವಾಲಯ ಮಾಡುವರು ನಾನೆನು ಮಾಡಲಿ ಬಡವನೆಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ".

English summary
After Khushboo and Nagma, it is Nayantara's turn to get a temple in her name. Some of her crazy fans have approached her through fans club to erect a temple for the actress. They have told her that it is their dream to build a temple to her and treat her like a goddess.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada