For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ 'ಯುವರತ್ನ' ಚಿತ್ರೀಕರಣದ ವೇಳೆ ಗಲಾಟೆ, ಫ್ಲೆಕ್ಸ್ ಬಿದ್ದು ಗಾಯ

  By ಯಶಸ್ವಿನಿ
  |
  ಮೈಸೂರಿನಲ್ಲಿ 'ಯುವರತ್ನ' ಚಿತ್ರೀಕರಣದ ವೇಳೆ ಗಲಾಟೆ, ಫ್ಲೆಕ್ಸ್ ಬಿದ್ದು ಗಾಯ | Oneindia Kannada

  ಮೈಸೂರಿನ ಮಹಾರಾಜ ಕಾಲೇಜು ಒಳಾಂಗಣದಲ್ಲಿ ಸಿನಿಮಾಗಳ ಚಿತ್ರೀಕರಣ ಆಗಾಗ ನಡೆಯುತ್ತಿರುತ್ತದೆ. ಆದರೆ, ಇದೀಗ ತರಗತಿ ಅವಧಿಯಲ್ಲಿ ಚಿತ್ರೀಕರಣಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಅವಕಾಶ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

  ಪುನೀತ್ ರಾಜ್ ಕುಮಾರ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದು, ಮೈಸೂರಿನ ಮಹಾರಾಜ ಕಾಲೇಜು ಒಳಾಂಗಣದಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು.

  'ಯುವರತ್ನ' ಸಿನಿಮಾದಲ್ಲಿ 'ಓಂ' ಸತ್ಯ ಪ್ರತ್ಯಕ್ಷ

  ಈ ಹಿಂದೆಲ್ಲ ವಿದ್ಯಾರ್ಥಿಗಳ ರಜೆ ದಿನದಲ್ಲಿ ತರಗತಿಗಳು ಇರದಿರುವ ಸಂದರ್ಭದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ, ಇದೀಗ ತರಗತಿ ಅವಧಿಯಲ್ಲಿಯೇ ಅವಕಾಶ ನೀಡಲಾಗಿದ್ದು, ಗಲಾಟೆ ಕಾರಣವಾಗಿದೆ.

  ಬೌನ್ಸರ್ ಮತ್ತು ವಿದ್ಯಾರ್ಥಿಗಳ ನಡುವೆ ಜಗಳ

  ಬೌನ್ಸರ್ ಮತ್ತು ವಿದ್ಯಾರ್ಥಿಗಳ ನಡುವೆ ಜಗಳ

  'ಯುವರತ್ನ' ಸಿನಿಮಾ ಚಿತ್ರೀಕರಣ ಮೈಸೂರಿನ ಮಹಾರಾಜ ಕಾಲೇಜು ಕಾಲೇಜಿನಲ್ಲಿ ನಡೆಯುತ್ತಿದೆ. ಶೂಟಿಂಗ್ ನಿಂದ ಕಾಲೇಜಿನಲ್ಲಿ ಪಾಠಗಳು ಬಂದ್ ಆಗಿವೆ. ಅಲ್ಲದೆ, ಚಿತ್ರೀಕರಣದ ವೇಳೆ ವಿದ್ಯಾರ್ಥಿಗಳು ಚಿತ್ರತಂಡದ ಬೌನ್ಸರ್ ನಡುವೆ ಜಗಳವಾಗಿದೆ. ಇದರಿಂದ ವಿದ್ಯಾರ್ಥಿಗಳು ಚಿತ್ರತಂಡ ಹಾಗೂ ವಿವಿ ಆಡಳಿತ ಮಂಡಳಿ ವಿರುದ್ಧ ಸ್ಥಳದಲ್ಲೇ ಪ್ರತಿಭಟಿಸಿದ್ದಾರೆ.

  ಫ್ಲೆಕ್ಸ್ ತಲೆಯ ಮೇಲೆ ಬಿದ್ದು ಅಟೆಂಡರ್ ಗೆ ಗಾಯ

  ಫ್ಲೆಕ್ಸ್ ತಲೆಯ ಮೇಲೆ ಬಿದ್ದು ಅಟೆಂಡರ್ ಗೆ ಗಾಯ

  ಸೆಪ್ಟೆಂಬರ್ 13 ಪರೀಕ್ಷೆ ಶುಲ್ಕ ಕಟ್ಟಲು ಕಡೇ ದಿನವಾಗಿದೆ. ಮೊದಲ ಮಹಡಿಯ ಕಾಲೇಜಿನ ಕಚೇರಿಯಲ್ಲಿ ಪರೀಕ್ಷೆಯ ಚಲನ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಚಿತ್ರತಂಡ ಮುಖ್ಯ ದ್ವಾರದ ಮೂಲಕ ವಿದ್ಯಾರ್ಥಿಗಳು ಒಳಬರಲು ಬಿಡುತ್ತಿಲ್ಲ ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದಾರೆ. ಇನ್ನು ಚಿತ್ರೀಕರಣಕ್ಕಾಗಿ ಮೊದಲ ಮಹಡಿಯಲ್ಲಿ ಕಟ್ಟಲಾಗಿದ್ದ ಫ್ಲೆಕ್ಸ್ ತಲೆಯ ಮೇಲೆ ಬಿದ್ದು ಕಾಲೇಜಿನ ಅಟೆಂಡರ್ ಗೌರಮ್ಮ ಎನ್ನುವವರ ತಲೆಗೆ ಪೆಟ್ಟಾಗಿದೆಯಂತೆ.

  ಮತ್ತಷ್ಟು ದೊಡ್ಡದಾಯ್ತು 'ಯುವರತ್ನ'ನ ಕುಟುಂಬ

  ಪುನೀತ್ ಮೇಲೆ ಅಸಮಾದಾನ

  ಪುನೀತ್ ಮೇಲೆ ಅಸಮಾದಾನ

  ಚಿತ್ರತಂಡ ಮೇಲೆ ಇದ್ದ ಅಸಮಾದಾನವನ್ನು ನಟ ಪುನೀತ್ ರಾಜ್ ಕುಮಾರ್ ಮೇಲೆ ವಿಧ್ಯಾರ್ಥಿಗಳು ಹೊರ ಹಾಕಿದ್ದಾರೆ. ಪುನೀತ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ, ಕೆಲ ವಿದ್ಯಾರ್ಥಿಗಳು ಡಿ ಬಾಸ್ ಎಂದು ಕೂಗಿದರೆ, ಕೆಲವರು ಕಿಚ್ಚ ಸುದೀಪ್ ಎಂದು ಕೂಗುತ್ತಿದ್ದರು. ಚಿತ್ರೀಕರಣ ನಡೆಯುತ್ತಿರುವ ಕಾರಣ ತಮಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

  ಶೂಟಿಂಗ್ ನಿಲ್ಲಿಸಲು ಸೂಚನೆ

  ಶೂಟಿಂಗ್ ನಿಲ್ಲಿಸಲು ಸೂಚನೆ

  ಘಟನೆ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಲೇಜಿನ ಹೊರಾಂಗಣದಲ್ಲಿ ಶೂಟಿಂಗ್ ಮಾಡಲು ಅವಕಾಶ ನೀಡಲಾಗಿದೆ. ಒಳಾಂಗಣದಲ್ಲಿ ಶೂಟಿಂಗ್ ನಡೆಯುತ್ತಿರುವ ಕುರಿತು ಗಮನಕ್ಕೆ ಬಂದಿದೆ. ತಕ್ಷಣ ಶೂಟಿಂಗ್ ನಿಲ್ಲಿಸಲು ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

  English summary
  Fight between bouncer and students in 'Yuvaratna' movie set. 'Yuvaratna' shooting was held in Mysore Maharaja College.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X