twitter
    For Quick Alerts
    ALLOW NOTIFICATIONS  
    For Daily Alerts

    ಫಿಲ್ಮ್ ಅಪ್ರೀಷಿಯೇಷನ್ ಕೋರ್ಸ್ ಗೆ ಅರ್ಜಿ ಆಹ್ವಾನ

    |

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಪುಣೆಯ, ಭಾರತೀಯ ಫಿಲಂ ಮತ್ತು ಟೆಲಿವಿಷನ್ ಸಂಸ್ಥೆಯು (ಎಫ್‍ಟಿಟಿಐ), ಐದು ದಿನಗಳ ಅವಧಿಯ 'ಫಿಲಂ ಅಪ್ರೀಷಿಯೇಷನ್ ಕೋರ್ಸ್'ಗೆ ಅರ್ಜಿಗಳನ್ನು ಆಹ್ವಾನಿಸಿದೆ.

    ತರಬೇತಿಯು ನವೆಂಬರ್ 10 ರಿಂದ ನವೆಂಬರ್ 14ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ, ಸುಲೋಚನಾ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6.00 ಗಂಟೆವರೆಗೆ ನಡೆಯಲಿದೆ. 18 ವರ್ಷಕ್ಕೂ ಮೇಲ್ಪಟ್ಟ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್‍ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ವಿವರಗಳನ್ನು ತುಂಬ ಬಹುದಾಗಿದೆ.

    ತರಬೇತಿ ಶುಲ್ಕವಾಗಿ ರೂ.3,600/-ಗಳಿಗೆ ಡಿಮ್ಯಾಂಡ್ ಡ್ರ್ಯಾಫ್ಟನ್ನು 'ಅಕೌಂಟ್ಸ್ ಆಫೀಸರ್, ಭಾರತೀಯ ಫಿಲಂ & ಟೆಲಿವಿಷನ್ ಸಂಸ್ಥೆ, ಪುಣೆ' (Accounts Officer, Film & Television Institute of India, Pune) ಇವರ ಹೆಸರಿನಲ್ಲಿ ಪಡೆದು, ಅರ್ಜಿಯೊಂದಿಗೆ 'ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ, ಅಮೃತ ಮಹೋತ್ಸವ ಭವನ, #20/ಎ, ಎಸ್.ಎಫ್.ಹೆಚ್.ಎಸ್ ಲೇಔಟ್, ನಂದಿನಿ ಲೇಔಟ್, ಬೆಂಗಳೂರು - 560096 ಇವರಿಗೆ ಸ್ಪೀಡ್ ಪೋಸ್ಟ್‍ನಲ್ಲಿ ಅಥವಾ ಖುದ್ದಾಗಿ ದಿನಾಂಕ: 31/10/2018ರ ಸಂಜೆ 5:00 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

    film appreciation application from vartha ilake

    ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳ ತರಬೇತಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. (ಗರಿಷ್ಟ 100 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ, ಕನಿಷ್ಟ 80 ಅಭ್ಯರ್ಥಿಗಳು ಬಾರದಿದ್ದಲ್ಲಿ ತರಬೇತಿಯನ್ನು ರದ್ದುಗೊಳಿಸಲಾಗುವುದು).

    ಹೆಚ್ಚಿನ ವಿವರಗಳನ್ನು ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ ಹಾಗೂ ದೂರವಾಣಿ ಸಂಖ್ಯೆ:080-23493410/41 ಅಥವಾ ಮೊ.ಸಂ: +919845924555 ನಿಂದ ಪಡೆಯಬಹುದಾಗಿದೆ.

    English summary
    Karnataka vartha ilake opened film appreciation application in www.ftiindia.com.
    Monday, October 22, 2018, 20:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X