»   » ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

Posted By:
Subscribe to Filmibeat Kannada

2017ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಹದಿನೈದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

'ಫಿಲ್ಮಿಬೀಟ್ ಕನ್ನಡ' ಆಯೋಜನೆ ಮಾಡಿದ್ದ ಈ ಪೋಲ್ ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.

ಫಿಲ್ಮಿಬೀಟ್ ಅಯೋಜಿಸಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' POLL ಅಂತ್ಯ

ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2017ರ 'ಅತ್ಯುತ್ತಮ ನಟ' ಆಗಿ ಹೊರಹೊಮ್ಮಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

2017ರ ಬೆಸ್ಟ್ ಆಕ್ಟರ್ ದರ್ಶನ್.!

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ ಅತ್ಯುತ್ತಮ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಿದ್ದಾರೆ.

'ತಾರಕ್' ಚಿತ್ರದ ಅಭಿನಯಕ್ಕೆ ಬಹುಮತ

'ತಾರಕ್' ಚಿತ್ರದ ಅಭಿನಯಕ್ಕಾಗಿ ನಾಮಿನೇಟ್ ಆಗಿದ್ದ ಚಾಲೆಂಜಿಂಗ್ ಸ್ಟಾರ್ 40% ಮತಗಳನ್ನ ಪಡೆಯುವುದರ ಮೂಲಕ ಓದುಗರ ಮನಗೆದ್ದಿದ್ದಾರೆ.

ದರ್ಶನ್ ನಂತರದ ಸ್ಥಾನ ಪುನೀತ್

ಚಾಲೆಂಜಿಂಗ್ ಸ್ಟಾರ್ ಗೆ ತೀವ್ರ ಪೈಪೋಟಿ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 22% ಮತಗಳನ್ನ ಪಡೆಯುವುದರ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಹೆಬ್ಬುಲಿ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಹೆಬ್ಬುಲಿ' ಚಿತ್ರದ ಅಭಿನಯಕ್ಕಾಗಿ ನಾಮಿನೇಟ್ ಆಗಿದ್ದರು. 18% ವೋಟ್ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಉಪ್ಪಿ ಮತ್ತು ಸತೀಶ್

ನಾಲ್ಕನೇ ಸ್ಥಾನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಇದ್ರೆ, ಐದನೇ ಸ್ಥಾನದಲ್ಲಿ ಸತೀಶ್ ನೀನಾಸಂ ಇದ್ದಾರೆ.

ನಂತರದ ಸ್ಥಾನಗಳು

ನಂತರದ ಸ್ಥಾನಗಳಲ್ಲಿ ಧನಂಜಯ್, ಧ್ರುವ ಸರ್ಜಾ, ಗಣೇಶ್, ಶ್ರೀಮುರಳಿ, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶರಣ್, ಮಿತ್ರ, ದುನಿಯಾ ವಿಜಯ್, ಅರ್ಜುನ್ ಸರ್ಜಾ, ಜಗ್ಗೇಶ್ ಮತ್ತು ಸಂಚಾರಿ ವಿಜಯ್ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಓದುಗರ ಅಭಿಮತ: 2017ರ 'ಅತ್ಯುತ್ತಮ ನಟಿ' ಶಾನ್ವಿ ಶ್ರೀವಾಸ್ತವ್

English summary
'Best of Sandalwood-2017' Poll Results are out. Kannada Actor Darshan is selected as 'Best Actor-2017' for tarak movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada