For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಡುವೆಯೂ ಕಿತ್ತಾಟ: ನಟ ಜೈ ಜಗದೀಶ್ ವಿರುದ್ಧ ಎಫ್ಐಆರ್ ದಾಖಲು

  |

  ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕ ಜೈ ಜಗದೀಶ್ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸಿನಿಮಾ ಕಾರ್ಮಿಕರಿಗೆ ದಿನಸಿ ನೀಡುವ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಅವರನ್ನು ನಿಂದನೆ ಮಾಡಿರುವ ಆರೋಪದಡಿ ಜೈ ಜಗದೀಶ್ ವಿರುದ್ಧ ದೂರು ನೀಡಿದ್ದರು.

  ಡಿ ಬಾಸ್ ದಾಸೋಹದ 41 ನೇ ದಿನ ನಿರಾಶ್ರಿತರಿಗೆ ಉಪಹಾರದ ಜೊತೆ ಮೊಟ್ಟೆ ವಿತರಣೆ | Darshan | Filmibeat Kannada

  ದೂರಿನ ಅನ್ವಯ ಜೈ ಜಗದೀಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲಾಕ್ ಡೌನ್ ನಿಂದ ಸಿನಿಮಾಗೆ ಸಂಬಂಧಿಸಿದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿನಿಮಾ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸಾಕಷ್ಟು ಮಂದಿ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಆದರೆ ದಿನಸಿ ಹಂಚುವ ವಿಚಾರವಾಗಿ ಸಾ.ರಾ ಗೋವಿಂದು ಮತ್ತು ಜೈಜಗದೀಶ್ ಇಬ್ಬರ ಜಗಳವೀಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಮುಂದೆ ಓದಿ...

  ಏನಿದು ಪ್ರಕರಣ?

  ಏನಿದು ಪ್ರಕರಣ?

  ಮಹಾಮಾರಿ ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಲೌಕ್ ಡೌನ್ ನಿಂದ ಸಿನಿಮಾ ಚಟುವಟಿಗಳು ಬಂದ್ ಆಗಿವೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಸಹಾಯ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿತ್ತು. ಸಂಕಷ್ಚದಲ್ಲಿರುವ ಕಾರ್ಮಿಕರಿಗೆ ಆಹಾರ ಕಿಡ್ ವಿತರಿಸಲು ನಿರ್ಮಾಪಕ ಸಾ.ರಾ ಗೋವಿಂದು, ವಾಣಿಜ್ಯ ಮಂಡಳಿಯ ಸದಸ್ಯರ ನೇತೃತ್ವದಲ್ಲಿ ಸರ್ಕಾರದೊಂದಿಗೆ ಮಾತನಾಡಿ ಸಹಾಯಕ್ಕೆ ನಿಂತಿದ್ದರು.

  ಆಡಿಯೋ ಕ್ಲಿಪ್ ವೈರಲ್

  ಆಡಿಯೋ ಕ್ಲಿಪ್ ವೈರಲ್

  ಈ ವಿಚಾರವಾಗಿ ನಟ ಜೈ ಜಗದೀಶ್ ಮತ್ತು ಸಾ.ರಾ ಗೋವಿಂದು ನಡುವೆ ಜಗಳ ಪ್ರಾರಂಭವಾಗಿದೆ. ಜೈ ಜಗದೀಶ್ ಅವಾಚ್ಯ ಶಬ್ದಗಳಿಂದ ಸಾ.ರಾ ಗೋವಿಂದು ಅವರನ್ನು ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಾ.ರಾ ಗೋವಿಂದು ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.

  ದೂರು ನೀಡಿದ್ದ ಸಾ.ರಾ ಗೋವಿಂದು

  ದೂರು ನೀಡಿದ್ದ ಸಾ.ರಾ ಗೋವಿಂದು

  ಜೈ ಜಗದೀಶ್ ಅವರ ವರ್ತನೆಯಿಂದ ಕೋಪಗೊಂಡಿರುವ ಸಾ.ರಾ. ಗೋವಿಂದು, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ದೂರು ನೀಡಿದ್ದರು. ಜೈ ಜಗದೀಶ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.

  ಸಾ.ರಾ ಗೋವಿಂದು ಆರೋಪ

  ಸಾ.ರಾ ಗೋವಿಂದು ಆರೋಪ

  'ಜೈ ಜಗದೀಶ್ ಅವರು ನನ್ನ ಹಾಗೂ ನನ್ನ ಸ್ನೇಹಿತರ ವಿರುದ್ಧ ಉದ್ದೇಶಪೂರ್ವಕವಾಗಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಈ ಸಂಭಾಷಣೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ನನ್ನ ತೇಜೋವಧೆ ಮಾಡಲಾಗಿದೆ' ಎಂದು ಸಾ.ರಾ ಗೋವಿಂದು ಆರೋಪಿಸಿದ್ದಾರೆ.

  English summary
  FIR registered against Actor Jai Jagadish. Sa.Ra Govindu Complaint Against Jai Jagadish.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X