twitter
    For Quick Alerts
    ALLOW NOTIFICATIONS  
    For Daily Alerts

    ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ

    |

    Recommended Video

    ಅಂಬರೀಶ್ ಹಾಗು ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಸುಮಲತಾ ಹೇಳಿದ್ದು ಹೀಗೆ | FILMIBEAT KANNADA

    ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಒಂದು ಕಡೆ, ಅಂಬರೀಶ್ ಅವರ 5ನೇ ತಿಂಗಳ ಪುಣ್ಯ ಸ್ಮರಣೆ ಇನ್ನೊಂದು ಕಡೆ. ಈ ದಿನ ಕಂಠೀರವ ಸ್ಟುಡಿಯೋದಲ್ಲಿರುವ ದಿಗ್ಗಜರ ಸಮಾಧಿ ಬಳಿ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದರು.

    ಈ ವೇಳೆ ಅಲ್ಲಿ ಬಂದಿದ್ದವರಲ್ಲಿ ಒಂದು ಆಸೆ ಎದ್ದು ಕಾಣುತ್ತಿತ್ತು. ರಾಜ್-ಅಂಬಿ ಸಮಾಧಿ ಒಂದೇ ಕಡೆ ಇದೆ. ಇದೇ ಜಾಗಕ್ಕೆ ವಿಷ್ಣುವರ್ಧನ್ ಅವರ ಸ್ಮಾರಕವನ್ನ ಶಿಫ್ಟ್ ಮಾಡಿದ್ರೆ ಎಷ್ಟು ಚೆಂದ ಎಂಬ ಭಾವನೆ. ಇದು ಆಗುತ್ತೋ ಇಲ್ವೋ ಬಟ್ ಇಂತಹದೊಂದು ಆಸೆ ಅಭಿಮಾನಿಗಳದ್ದು.

    ಬಗೆಹರಿಯಿತು ವಿಷ್ಣು ಸ್ಮಾರಕ ಸಮಸ್ಯೆ: ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ ನಿರ್ಮಾಣ.! ಬಗೆಹರಿಯಿತು ವಿಷ್ಣು ಸ್ಮಾರಕ ಸಮಸ್ಯೆ: ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ ನಿರ್ಮಾಣ.!

    ಇದೇ ಸ್ಮಾರಕಗಳ ವಿಚಾರವಾಗಿ ಅಂಬರೀಶ್ ಅವರ ಪತ್ನಿ ಸುಮಲತಾ ಕೂಡ ಮಾತನಾಡಿದ್ದಾರೆ. ಮೊದಲು ವಿಷ್ಣುವರ್ಧನ್ ಸ್ಮಾರಕ ಆಗಲಿ, ಆಮೇಲೆ ಅಂಬರೀಶ್ ಸ್ಮಾರಕ ಮಾಡಲಿ ಅಂತಹ ಸುಮಲತಾ ಅಭಿಪ್ರಾಯ ಪಟ್ಟಿದ್ದಾರೆ. ಸುಮಲತಾ ಈ ಮಾತು ಹೇಳಿದ್ದೇಕೆ? ಮುಂದೆ ಓದಿ....

    ಸಿಎಂ ಆಶ್ವಾಸನೆ ಕೊಟ್ಟಿರುವಂತೆ ನಡೆಯಲಿ

    ಸಿಎಂ ಆಶ್ವಾಸನೆ ಕೊಟ್ಟಿರುವಂತೆ ನಡೆಯಲಿ

    ಮಂಡ್ಯ ಪ್ರಚಾರದ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಅಭಿಮಾನಿಗಳಿಗೆ ವಿಷ್ಣು ಸ್ಮಾರಕ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ 'ನೀವು ಎಲ್ಲಿ ಹೇಳ್ತಿರೋ ಅಲ್ಲೆ ಸ್ಮಾರಕ ಮಾಡೋಣ' ಎಂದು ತಿಳಿಸಿದ್ದರು. ಅದರಂತೆ ವಿಷ್ಣು ಸ್ಮಾರಕ ನಿರ್ಮಿಸಿಲಿ ಎಂದು ಸುಮಲತಾ ಹೇಳಿದ್ದಾರೆ.

    ಮಂಡ್ಯ ಪ್ರಚಾರದಲ್ಲಿ ವಿಷ್ಣು ಸ್ಮಾರಕ ಕೂಗು: ಅಭಿಮಾನಕ್ಕೆ ತಲೆಬಾಗಿದ ಸಿಎಂ ಮಂಡ್ಯ ಪ್ರಚಾರದಲ್ಲಿ ವಿಷ್ಣು ಸ್ಮಾರಕ ಕೂಗು: ಅಭಿಮಾನಕ್ಕೆ ತಲೆಬಾಗಿದ ಸಿಎಂ

    ಅಂಬಿ ಸ್ಮಾರಕ ಆಮೇಲೆ ಮಾಡಲಿ

    ಅಂಬಿ ಸ್ಮಾರಕ ಆಮೇಲೆ ಮಾಡಲಿ

    'ವಿಷ್ಣುವರ್ಧನ್ ಅವರ ಸ್ಮಾರಕ ಮೊದಲು ನಿರ್ಮಾಣವಾಗಲಿ, ಆಮೇಲೆ ಬೇಕಾದರೇ ಅಂಬರೀಶ್ ಸ್ಮಾರಕ ಸ್ಥಾಪನೆ ಮಾಡಲಿ. ಸದ್ಯಕ್ಕೆ, ಅಂಬಿ ಸ್ಮಾರಕಕ್ಕಾಗಿ ಬಜೆಟ್ ನಲ್ಲೂ ಏನೂ ಘೋಷಣೆ ಮಾಡಿರಲಿಲ್ಲ. ಸಮಯ ಬಂದಾಗ ಚಿತ್ರರಂಗದ ಪರವಾಗಿ ಎಲ್ಲರೂ ನಿರ್ಧಾರ ತೆಗೆದುಕೊಂಡು ಅದನ್ನ ಟೇಕ್ ಆನ್ ಮಾಡ್ತೀವಿ'' ಎಂದು ಸುಮಲತಾ ಹೇಳಿದರು.

    ಒಂದೇ ಕಡೆ ಇದ್ದರೇ ಒಳ್ಳೆಯದು

    ಒಂದೇ ಕಡೆ ಇದ್ದರೇ ಒಳ್ಳೆಯದು

    ರಾಜ್ ಕುಮಾರ್ ಮತ್ತು ಅಂಬರೀಶ್ ಒಂದು ಕಡೆಯಾದರು. ವಿಷ್ಣುವರ್ಧನ್ ಬೇರೊಂದು ಕಡೆ ಆದರೆ, ಅದು ಸೂಕ್ತವಲ್ಲ. ವಿಷ್ಣುವರ್ಧನ್ ಅವರ ಸ್ಮಾರಕವನ್ನ ಕೂಡ ಕಂಠೀರವ ಸ್ಟುಡಿಯೋದಲ್ಲೇ ನಿರ್ಮಾಣ ಮಾಡೋಣ ಎಂಬ ಕೂಗು ಜೋರಾಗಿದೆ. ಚಿತ್ರರಂಗದಲ್ಲೇ ಹಲವರು ಈ ಅಭಿಪ್ರಾಯವನ್ನ ತಿಳಿಸಿದ್ದಾರೆ.

    ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ

    ಅಭಿಮಾನಿಗಳ ಆಸೆಯೇ ಬೇರೆ ಇದೆ

    ಅಭಿಮಾನಿಗಳ ಆಸೆಯೇ ಬೇರೆ ಇದೆ

    ಆದ್ರೆ, ಅಭಿಮಾನಿಗಳ ಆಸೆಯೇ ಬೇರೆ ಇದೆ. ಎಲ್ಲಿ ಅಂತ್ಯಕ್ರಿಯೆ ಆಗಿದ್ಯೋ ಅಲ್ಲೇ ಸ್ಮಾರಕ ಮಾಡಬೇಕಾಗಿರುವುದು ಸಂಪ್ರದಾಯ ಮತ್ತು ಕರ್ತವ್ಯ. ಹಾಗಾಗಿ, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಆಗಲಿ ಎಂಬ ಒತ್ತಾಯ. ಮತ್ತೊಂದು ಕಡೆ ವಿಷ್ಣು ಕುಟುಂಬ ವರ್ಗದವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಎಲ್ಲ ತಯಾರಿ ನಡೆಸಿದ್ದಾರೆ.

    'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ 'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ

    English summary
    Government have to give First preference for dr vishnuvardhan memorial then ambarish memorial said sumalatha.
    Wednesday, April 24, 2019, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X