For Quick Alerts
  ALLOW NOTIFICATIONS  
  For Daily Alerts

  ರಾಜ್‌ಕುಮಾರ್ ಮೇಲಿತ್ತು ಎಸ್‌.ಎಂ.ಕೃಷ್ಣ ಗೆ ಸಣ್ಣ ಅಸಮಾಧಾನ

  |

  ಎಸ್.ಎಂ.ಕೃಷ್ಣ, ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ, ನಾಡು ಪ್ರಗತಿಯತ್ತ ಸಾಗುತ್ತಿದೆ ಎಂದು ಕೃಷ್ಣ ಅವರು ನಿರಾಳವಾಗಿದ್ದ ಸಮಯದಲ್ಲಿಯೇ ಬರಸಿಡಿಲಿನಂತೆ ಅಪ್ಪಳಿಸಿತ್ತು 'ರಾಜ್‌ಕುಮಾರ್ ಅಪಹರಣ' ಸುದ್ದಿ.

  ರಾಜ್ಯದ ಮುಕುಟವನ್ನೇ ಅಪಹರಿಸಿದ ಭಾವ ಇಡೀಯ ರಾಜ್ಯವನ್ನು ಕಾಡಿತ್ತು, ಸ್ವತಃ ಸಿಎಂ ಕೃಷ್ಣ ಅವರು ಅಧೀರರಾಗಿಬಿಟ್ಟಿದ್ದರು. ಆಕಾಶವೇ ಕಳಚಿದ ಅನುಭವ ಅವರಿಗೆ. ಆದರೂ ಆ ಸಮಯದಲ್ಲಿ ಛಾತಿ ತೋರಿಸಿ ಪರಿಸ್ಥಿತಿಯನ್ನು ಎದುರಿಸಿದ್ದರು ಕೃಷ್ಣ.

  ಸತತ 108 ದಿನಗಳ ಕಾಲ ಅವರು ಅನುಭವಿಸಿದ ಒತ್ತಡ, ಮಾಡಿದ ರಾಜತಾಂತ್ರಿಕ ಪ್ರಯತ್ನಗಳು, ನಡೆಸಿದ ಸಭೆಗಳು, ಎದುರಿಸಿದ ಮೂದಲಿಕೆಗಳು, ಎದುರಿಸಿದ ಟೀಕೆಗಳು ಲೆಕ್ಕವಿಲ್ಲ.

  ಅಪಹರಣದ 108 ದಿನಗಳ ನಂತರ ಎಲ್ಲವೂ ಸುಖಾಂತ್ಯವಾಯಿತು. ರಾಜ್‌ಕುಮಾರ್ ಅವರು ವೀರಪ್ಪನ್ ಸೆರೆಯಿಂದ ಬಿಡುಗಡೆ ಆದರು. ಆದರೆ ಎಸ್‌.ಎಂ.ಕೃಷ್ಣ ಅವರಿಗೆ ಅಣ್ಣಾವ್ರ ಬಗ್ಗೆ ಸಣ್ಣ ಅಸಮಾಧಾನವೊಂದು ಅಲ್ಲಿಂದ ಪ್ರಾರಂಭವಾಯಿತು.

  ಬಿಡುಗಡೆಯಾದ ದಿನ ರಾಜ್ ಸುದ್ದಿಗೋಷ್ಠಿ

  ಬಿಡುಗಡೆಯಾದ ದಿನ ರಾಜ್ ಸುದ್ದಿಗೋಷ್ಠಿ

  ರಾಜ್‌ಕುಮಾರ್ ಅವರು ಬಿಡುಗಡೆ ಆಗಿ ಬಂದ ದಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಪತ್ರಿಕಾಗಷ್ಠಿಯೊಂದನ್ನು ಆಯೋಜಿಸಲಾಗಿತ್ತು. ಅಂದು ರಾಜ್‌ಕುಮಾರ್ ಅವರು ತಮ್ಮ ಕಾಡಿನ ಅನುಭವಗಳು, ವೀರಪ್ಪನ್ ಬಗ್ಗೆ ಮಾತನಾಡಿದರು.

  ಕೃಷ್ಣ ಅವರಿಗೆ ಧನ್ಯವಾದ ತಿಳಿಸಲು ಮರೆತಿದ್ದರು

  ಕೃಷ್ಣ ಅವರಿಗೆ ಧನ್ಯವಾದ ತಿಳಿಸಲು ಮರೆತಿದ್ದರು

  ಹೀಗೆ ಮಾತನಾಡಿದ್ದ ರಾಜ್‌ಕುಮಾರ್ ಅವರು, ತಮ್ಮ ಬಿಡುಗಡೆಗೆ ಶ್ರಮಿಸಿದ್ದ ಸಿಎಂ ಕೃಷ್ಣ ಅವರಿಗೆ ಧನ್ಯವಾದ ತಿಳಿಸುವುದನ್ನು ಮರೆತುಬಿಟ್ಟರು. ಇದು ಕೃಷ್ಣ ಅವರಿಗೆ ಅಸಮಾಧಾನ ಉಂಟಾಗಿತ್ತು. ಆಗ ವಾರ್ತಾ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ಗುರುಪ್ರಸಾದ್ ತಮ್ಮ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ.

  ಎರಡನೇ ಸುದ್ದಿಗೋಷ್ಠಿಯಲ್ಲಿಯೂ ಕೃಷ್ಣ ಹೆಸರಿಲ್ಲ

  ಎರಡನೇ ಸುದ್ದಿಗೋಷ್ಠಿಯಲ್ಲಿಯೂ ಕೃಷ್ಣ ಹೆಸರಿಲ್ಲ

  ರಾಜ್‌ಕುಮಾರ್ ಬಿಡುಗಡೆಯ ನಂತರ ಹದಿನೈದು ದಿನಗಳಾದ ಮೇಲೆ ಅವರ ನಿವಾಸದಲ್ಲಿಯೇ ಮತ್ತೊಂದು ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು, ವಿಚಿತ್ರವಂದರೆ ಅಲ್ಲೂ ರಾಜ್‌ಕುಮಾರ್ ಅವರು ಕೃಷ್ಣ ಅವರ ಹೆಸರು ಮರೆತಿದ್ದರು. ರಾಜ್‌ಕುಮಾರ್ ಅವರು ತಮ್ಮ ಸಹಜ ಮುಗ್ದತೆಯಿಂದ ಮಾತನಾಡುತ್ತಲೇ ಹೋದರೇ ಹೊರತು, ರಾಜಕೀಯ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರಲಿಲ್ಲ. ಹಾಗಾಗಿಯೇ ಕೃಷ್ಣ ಅವರ ಹೆಸರು ಮರೆತಿರಲಿಕ್ಕೂ ಸಾಕು.

  ಕೃಷ್ಣ ಅವರಿಗೆ ಧನ್ಯವಾದ ಹೇಳಿದ ರಾಜ್ ಕುಟುಂಬ

  ಕೃಷ್ಣ ಅವರಿಗೆ ಧನ್ಯವಾದ ಹೇಳಿದ ರಾಜ್ ಕುಟುಂಬ

  ಆದರೆ ನಂತರದ ದಿನಗಳಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ರಾಜ್ ಕುಟುಂಬ ಕೃಷ್ಣ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿತು. ರಾಜ್ ಕುಟುಂಬ ಮಾತ್ರವಲ್ಲದೆ ಸಿನಿಮಾದ ಕೆಲ ಪ್ರಮುಖರೂ ಸಹ ಕೃಷ್ಣ ಅವರ ಶ್ರಮವನ್ನು ಗುರುತಿಸಿ ಕೊಂಡಾಡಿದರು. ಆಗ ಕೃಷ್ಣ ಅವರಲ್ಲುಳಿದಿದ್ದ ಸಣ್ಣ ಅಸಮಾಧಾನ ಕಡಿಮೆಯಾಯಿತು.

  English summary
  Former CM SM Krishna upset with Dr Rajkumar once for not acknowledging his work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X