For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ಅಂಕಲ್ ಎಂದು ಹೆಸರಿಟ್ಟಿದ್ದು ನಟಿ ಅಮೂಲ್ಯ!

  |

  ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಹಲವು ಆತ್ಮೀಯ ಗೆಳೆಯರನ್ನು ಹೊಂದಿದ್ದಾರೆ. ಹಲವು ನಟ-ನಟಿಯರೊಂದಿಗೆ ಕೌಟುಂಬಿಕ ಸ್ನೇಹ ಹೊಂದಿದ್ದಾರೆ ನಟ ದರ್ಶನ್. ಅದರಲ್ಲಿ ನಟಿ ಅಮೂಲ್ಯ ಸಹ ಒಬ್ಬರು.

  ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada

  ಇಂದು ನಟಿ ಅಮೂಲ್ಯ, ದರ್ಶನ್, ರಾಕ್‌ಲೈನ್ ವೆಂಕಟೇಶ್ ಜೊತೆಯಾಗಿ ನಿರ್ಮಾಪಕ, ಬಿಜೆಪಿ ಅಭ್ಯರ್ಥಿ ಮುನಿರತ್ನ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ದರ್ಶನ್ ಹಾಗೂ ಅಮೂಲ್ಯ ನಡುವೆ ತಮಾಷೆಯ ಸನ್ನಿವೇಶವೊಂದು ಏರ್ಪಟ್ಟಿತ್ತು.

  ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?

  ವಯಸ್ಸಿನಲ್ಲಿ ಕಿರಿಯವರಾದ ನಟಿ ಅಮೂಲ್ಯ, ದರ್ಶನ್‌ಗೆ ಅಂಕಲ್ ಎನ್ನುತ್ತಿದ್ದರಂತೆ. ದರ್ಶನ್‌ಗೆ ಅಂಕಲ್ ಅನ್ನುವ ಪರಿಪಾಠವನ್ನು ಮೊದಲಿಗೆ ಪ್ರಾರಂಭಿಸಿದ್ದು ಸಹ ನಟಿ ಅಮೂಲ್ಯ ಅಂತೆ. ಇದನ್ನು ಸ್ವತಃ ನಟ ದರ್ಶನ್ ಇಂದು ಹೇಳಿದ್ದಾರೆ.

  ನಮ್ಮ ಬಾಸ್ ಬಗ್ಗೆ ಏನು ಹೇಳೋದು: ಅಮೂಲ್ಯ

  ನಮ್ಮ ಬಾಸ್ ಬಗ್ಗೆ ಏನು ಹೇಳೋದು: ಅಮೂಲ್ಯ

  ಚುನಾವಣೆ ಪ್ರಚಾರದ ವೇಳೆ ಟಿವಿ ಸುದ್ದಿವಾಹಿನಿ ನಿರೂಪಕರೊಬ್ಬರು, ಅಮೂಲ್ಯ ಅವರ ಬಳಿ, ಡಿ-ಬಾಸ್ ಅವರ ಜೊತೆ ಪ್ರಚಾರ ಮಾಡುತ್ತಿದ್ದೀರಿ ಏನನ್ನಿಸುತ್ತಿದೆ? ಎಂದು ಅಮೂಲ್ಯಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅಮೂಲ್ಯ, 'ನಮ್ಮ ಬಾಸ್ ಬಗ್ಗೆ ನಾನೇನು ಹೇಳಲಿ?' ಎನ್ನುತ್ತಾರೆ.

  ಅಂಕಲ್ ಎನ್ನದಿದ್ದರೆ ಗಾಡಿಯಿಂದ ಕೆಳಗೆ ಎಸೀತೀನಿ: ದರ್ಶನ್ ಹಾಸ್ಯ

  ಅಂಕಲ್ ಎನ್ನದಿದ್ದರೆ ಗಾಡಿಯಿಂದ ಕೆಳಗೆ ಎಸೀತೀನಿ: ದರ್ಶನ್ ಹಾಸ್ಯ

  ಆದರೆ ಅಲ್ಲೇ ಇದ್ದ ನಟ ದರ್ಶನ್, 'ಹೇಳು, ಅಂಕಲ್ ಬಗ್ಗೆ ಹೇಳು, ನನ್ನನ್ನು ಅಂಕಲ್ ಅಂತ ಹೇಳು, ಹೇಳಪ್ಪಿ, ನೀನು ಹೇಳಲಿಲ್ಲ ಎಂದರೆ ಗಾಡಿಯಿಂದ ಹೊರಗೆ ಹಾಕಿಬಿಡುತ್ತೇನೆ' ಎಂದು ತಮಾಷೆಯಾಗಿ ಹೇಳುತ್ತಾರೆ ಅಮೂಲ್ಯಗೆ, ಪಕ್ಕದಲ್ಲಿ ನಿಂತಿದ್ದ ಅಮೂಲ್ಯ ಪತಿ, ನಗುತ್ತಾ ದರ್ಶನ್‌ಗೆ ಬೆಂಬಲ ನೀಡಿದ್ದಾರೆ.

  ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್

  'ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅಮೂಲ್ಯ'

  'ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅಮೂಲ್ಯ'

  ನಂತರ ದರ್ಶನ್, 'ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅವಳು ನನಗೆ' ಎಂದು ಹಳೆಯ ನೆನಪು ಮೆಲುಕು ಹಾಕಿದರು ದರ್ಶನ್. ದರ್ಶನ್ ಬಲವಂತ ಮಾಡಿದರೂ ಸಹ ಅಮೂಲ್ಯ, ದರ್ಶನ್ ಗೆ ಅಂಕಲ್ ಎನ್ನಲಿಲ್ಲ.

  ಮುನಿರತ್ನ ಪರ ಸ್ಟಾರ್‌ಗಳ ಪ್ರಚಾರ

  ಮುನಿರತ್ನ ಪರ ಸ್ಟಾರ್‌ಗಳ ಪ್ರಚಾರ

  ನಟ ದರ್ಶನ್, ನಟಿ ಅಮೂಲ್ಯ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಮೂಲ್ಯ ಪತಿ ಜಗದೀಶ್ , ಬಿಜೆಪಿಯ ನಳೀನ್ ಕಟೀಲ್, ಆರ್.ಅಶೋಕ್ ಇನ್ನೂ ಇತರ ಮುಖಂಡರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ಆರ್‌ಆರ್‌ ನಗರದಲ್ಲಿ ಚುನಾವಣೆ ಪ್ರಚಾರ ನಡೆಸಿದರು.

  ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!

  English summary
  Fun talk happen between actress Amulya and actor Darshan in between RR Nagar election campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X