»   » ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಗಜಕೇಸರಿ' ಕೃಷ್ಣ!

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಗಜಕೇಸರಿ' ಕೃಷ್ಣ!

Posted By:
Subscribe to Filmibeat Kannada

'ಮುಂಗಾರು ಮಳೆ' ಚಿತ್ರದ ಛಾಯಾಗ್ರಾಹಕ, 'ಗಜಕೇಸರಿ' ಚಿತ್ರದ ನಿರ್ದೇಶಕ ಕೃಷ್ಣ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋ ಇದು. ಈ ಫೋಟೋ ನೋಡಿದ ತಕ್ಷಣ, ಸಿನಿ ಪ್ರಿಯರಿಗೆ ಮೂಡುವ ಡೌಟುಗಳು ಒಂದೆರಡಲ್ಲ.

ಇಬ್ಬರು ಒಟ್ಟಿಗೆ ನಿಂತು ಫೋಟೋ ಹಿಡಿಸಿಕೊಂಡಿದ್ದಾರೆ ಅಂದ್ರೆ, ಇಬ್ಬರೂ ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿರಬಹುದು ಅಥವಾ ರಜನಿಕಾಂತ್ ಜೊತೆ ಕೃಷ್ಣ ಅವರಿಗೆ ವರ್ಕ್ ಮಾಡುವ ಗೋಲ್ಡನ್ ಚಾನ್ಸ್ ಸಿಕ್ಕಿರಬಹುದು ಇಲ್ಲಾಂದ್ರೆ ಕೃಷ್ಣ ಅವರ 'ಹೆಬ್ಬುಲಿ' ಚಿತ್ರದಲ್ಲಿ ರಜನಿಕಾಂತ್ ಸ್ಪೆಷಲ್ ರೋಲ್ ನಲ್ಲಿ ಮಿಂಚಬಹುದು ಅಂತೆಲ್ಲಾ ಲೆಕ್ಕಾಚಾರ ಮೂಡುವುದು ಸಹಜ.

Gajakesari Director Krishna meets Super Star Rajinikanth

ಆದ್ರೆ, ವಾಸ್ತವನೇ ಬೇರೆ. 'ತಲೈವಾ' ರಜನಿಕಾಂತ್ ರನ್ನ ಕೃಷ್ಣ ಭೇಟಿ ಆಗಿದ್ದಾರೆ ನಿಜ. ಅದು ಹಲವು ವರ್ಷಗಳ ಕನಸನ್ನ ಈಡೇರಿಸಿಕೊಳ್ಳೋಕೆ ಹೊರತು, ಸಿನಿಮಾ ವಿಷಯಕ್ಕಲ್ಲ. ಚಿಕ್ಕವಯಸ್ಸಿಂದಲೂ ಕ್ಯಾಮರಾಮೆನ್ ಕೃಷ್ಣ, ರಜನಿಕಾಂತ್ ಅವರ ಬಿಗ್ ಫ್ಯಾನ್. ಎಂದಾದರೂ ಅವರನ್ನ ಭೇಟಿ ಮಾಡಬೇಕು ಅಂದುಕೊಂಡಿದ್ದ ಕೃಷ್ಣ, ಎರಡು ತಿಂಗಳ ಹಿಂದೆ ಚೆನ್ನೈಗೆ ಹೋಗಿದ್ದಾಗ, ಅವರ ಸ್ನೇಹಿತರ ಮುಖಾಂತರ ರಜನಿಯವರನ್ನ ಮೀಟ್ ಮಾಡಿ ಬಂದಿದ್ದಾರೆ. [ರಜನಿ ಜೊತೆ ಪವನ್ ಒಡೆಯರ್ ಕನಸು ನನಸು]

ಗೆಳೆಯರ ಜೊತೆ ರಜನಿ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿದ್ದಾರೆ. ಕೃಷ್ಣ ಅವರು 'ಮುಂಗಾರು ಮಳೆ' ಚಿತ್ರದ ಛಾಯಾಗ್ರಾಹಕ ಅಂತ ಗೊತ್ತಾದ್ಮೇಲಂತೂ, ಅವರ ಕಾರ್ಯವೈಖರಿ ಬಗ್ಗೆ ರಜನಿ ಸಾರ್ ಕೊಂಡಾಡಿದರಂತೆ. ''ಉತ್ತಮ ಟೆಕ್ನೀಷಿಯನ್'' ಅಂತ ರಜನಿಕಾಂತ್, ಕೃಷ್ಣ ಅವರ ಬೆನ್ನುತಟ್ಟಿದ ಘಳಿಗೆ ಮರೆಯಲಸಾಧ್ಯ ಅನ್ನುತ್ತಾರೆ ಕೃಷ್ಣ.

ದಶಕಗಳ ಕನಸು ಈಡೇರಿದಕ್ಕೆ ಕೃಷ್ಣ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿ 'ಹೆಬ್ಬುಲಿ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

English summary
Kannada Director Krishna of 'Gajakesari' fame is excited and happy as he has met Super Star Rajinikanth in his residence in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada