'99' ಚಿತ್ರಕ್ಕಾಗಿ 'ದೇವದಾಸ'ನಾದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡದ ಸ್ಟೈಲಿಶ್ ನಟ. ಸಿನಿಮಾದಿಂದ ಸಿನಿಮಾಗೆ ಹೊಸ ರೀತಿಯ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಗಣಿ ಸ್ಟೈಲ್. ಇದೀಗ, ಗಣೇಶ್ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ 'ದೇವದಾಸ'ನಾಗಿದ್ದಾರೆ.

ಹೌದು, ಪ್ರೀತಂ ಗುಬ್ಬಿ ನಿರ್ದೇಶನ ಮಾಡ್ತಿರುವ 99 ಚಿತ್ರದಲ್ಲಿ ಗಣೇಶ್ ನಾಯಕನಾಗಿದ್ದು, ಎರಡು ವಿಭಿನ್ನ ಶೇಡ್ ನಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಲುಕ್ ನಲ್ಲಿ ಕ್ಲಾಸ್ ಆಗಿ ಮಿಂಚಿದ್ರೆ, ಇನ್ನೊಂದು ಲುಕ್ ನಲ್ಲಿ ಲವ್ ಫೆಲ್ಯೂರ್ ಹುಡುಗನಾಗಿ ಅಭಿನಯಿಸುತ್ತಿದ್ದಾರೆ.

ಇದೀಗ, ಲವ್ ಫೆಲ್ಯೂರ್ ಲುಕ್ ನಲ್ಲಿ ಗಣೇಶ್ ಹೇಗಿದ್ದಾರೆ ಎಂಬುದರ ನೋಟ ಬಹಿರಂಗವಾಗಿದೆ. ಗಡ್ಡ ಬಿಟ್ಟು ಶಾಲೆಯ ಆವರಣದಲ್ಲಿ ಓಡಾಡುತ್ತಿರುವ ಗಣೇಶ್ ಅವರ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ganesh 99 movie new look released

ಗಣೇಶ್ ಅವರ ಈ ಲುಕ್ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗೋಲ್ಡನ್ ಸ್ಟಾರ್ ಗೆ ಈ ಗಡ್ಡ ಚೆನ್ನಾಗಿ ಕಾಣ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದು ರಿಯಲ್ ಗಡ್ಡನಾ ಅಥವಾ ಮೇಕಪ್ ಮಾಡಿರಬಹುದು ಎಂದು ಕನ್ ಪ್ಯೂಸ್ ಆಗಿದ್ದಾರೆ.

ಇನ್ನುಳಿದಂತೆ '99' ಸಿನಿಮಾ ತಮಿಳಿನ ಸೂಪರ್ ಹಿಟ್ ಸಿನಿಮಾ '96' ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಗಣೇಶ್ ನಿರ್ವಹಿಸುತ್ತಿದ್ದಾರೆ. ಭಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Golden star ganesh starrer 99 movie new look released. director Preetham Gubbi will be remake '96' movie in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X