»   » ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್

ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂತ' ಚಿತ್ರದ ಫೇಮಸ್ ಡೈಲಾಗ್ ನ ಒಮ್ಮೆ ನೆನಪಿಸಿಕೊಳ್ಳಿ...ಹುರಿಗಟ್ಟಿದ ಮೀಸೆ ಬಿಟ್ಟು, ತುಟಿ ಅಂಚಲ್ಲಿ ಧಮ್ ಎಳೆಯುತ್ತಾ ''ಕುತ್ತೇ....ಕನ್ವರ್ ನಹೀ...ಕನ್ವರ್ ಲಾಲ್ ಬೋಲೋ...'' ಅಂತ ಅಂಬಿ ಮಾಮ ಡೈಲಾಗ್ ಹೊಡೀತಿದ್ರೆ, ಥಿಯೇಟರ್ ನಲ್ಲಿ ಶಿಳ್ಳೆ-ಚಪ್ಪಾಳೆಗಳದ್ದೇ ಸದ್ದು. ಹಾಗಿತ್ತು ಅಂಬಿ ಮಾಮನ ಅಂದಿನ ಖದರ್.

ಇದೀಗ ಅದೇ ಖದರ್ ಸ್ಯಾಂಡಲ್ ವುಡ್ ನಲ್ಲಿ ಮರುಕಳಿಸಲಿದೆ. ಅದು ಗೋಲ್ಡನ್ ಸ್ಟಾರ್ ಗಣೇಶ್ ಮೂಲಕ ಅನ್ನುವುದು ಅಚ್ಚರಿ ಸುದ್ದಿ! ಕೆಲವು ತಿಂಗಳುಗಳ ಹಿಂದೆಯಷ್ಟೇ, ಗಣೇಶ್, 'ಕನ್ವರ್ ಲಾಲ್' ಸಿನಿಮಾ ಮಾಡ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಅಷ್ಟರಲ್ಲೇ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ತಗಾದೆ ಕೂಡ ಎದ್ದಿತ್ತು. [ಅಂತ 'ಕನ್ವರ್ ಲಾಲ್'ನಾಗಿ ಕಿಚ್ಚ ಸುದೀಪ್]

Kanvarlal1

'ಅಲ್ಲಿಗೆ ಸಿನಿಮಾ ಕಥೆ ಮುಗೀತು' ಅಂದುಕೊಂಡಿದ್ದವರಿಗೆ ಇದೋ ಇಲ್ಲಿದೆ ಬ್ರೇಕಿಂಗ್ ನ್ಯೂಸ್. ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಆಗುವುದು ಪಕ್ಕಾ ಆಗಿದೆ. ಬರುವ ಸಂಕ್ರಾಂತಿ ಹಬ್ಬಕ್ಕೆ 'ಕನ್ವರ್ ಲಾಲ್' ಚಿತ್ರದ ಮುಹೂರ್ತ ಹಿಂದೆಂದಿಗಿಂತಲೂ ಗ್ರ್ಯಾಂಡ್ ಆಗಿ ನೆರವೇರಲಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಬಾಲಿವುಡ್ ಬಾಕ್ಸಾಫೀಸ್ ನ ಚಿಂದಿ ಉಡಾಯಿಸಿದ ಸಲ್ಮಾನ್ ಖಾನ್ ಅಭಿನಯದ 'ದಬ್ಬಂಗ್' ಮತ್ತು ಟಾಲಿವುಡ್ ಗಲ್ಲಪೆಟಿಗೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಪವನ್ ಕಲ್ಯಾಣ್ ಅಭಿನಯದ 'ಗಬ್ಬರ್ ಸಿಂಗ್' ಚಿತ್ರದ ರೀಮೇಕ್ ಈ 'ಕನ್ವರ್ ಲಾಲ್'!

Kanvarlal2

ಮೊದಲ ಬಾರಿಗೆ ಖಾಕಿ ಖದರ್ ನಲ್ಲಿ ನಿಮ್ಮ ಪ್ರೀತಿಯ ಗೋಲ್ಡನ್ ಸ್ಟಾರ್ ಗಣೇಶ್, 'ಕನ್ವರ್ ಲಾಲ್' ಚಿತ್ರದಲ್ಲಿ ಅಬ್ಬರಿಸಲಿದ್ದಾರೆ. ವಿಶೇಷ ಅಂದ್ರೆ, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಮಿಂಚಲಿದ್ದಾರೆ ಅನ್ನುವುದು 'ಕನ್ವರ್ ಲಾಲ್' ಅಡ್ಡದಿಂದ ಬಂದಿರುವ ತಾಜಾ ಮಾಹಿತಿ.

ಸಿನಿಮಾದ ಒಂದು ಸ್ಪೆಷಾಲಿಟಿ ಹೇಳ್ಬೇಕು ಅಂದ್ರೆ, 'ಕನ್ವರ್ ಲಾಲ್' ಚಿತ್ರಕ್ಕೆ ಸಂಗೀತ ನೀಡುತ್ತಿರುವವರು ಯಾರು ಗೊತ್ತಾ? ಟಾಲಿವುಡ್ ನ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್. ಅಂದ್ಮೇಲೆ 'ಕನ್ವರ್ ಲಾಲ್' ಗಾನಸುಧೆ ಬಗ್ಗೆ ಕೆಮ್ಮಂಗಿಲ್ಲ ಬಿಡಿ.

Kanvarlal3

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಕಾಮಿಡಿ ಟೈಮ್ ಗಣೇಶ್ ರನ್ನ ಹೀರೋ ಪಟ್ಟಕ್ಕೆ ತಂದು ಕೂರಿಸಿದ್ದ ನಿರ್ದೇಶಕ ಎಂ.ಡಿ.ಶ್ರೀಧರ್, 'ಕನ್ವರ್ ಲಾಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಗಣಿಗೆ 'ಚೆಲ್ಲಾಟ', 'ಕೃಷ್ಣ'ದಂತ ಹಿಟ್ ಚಿತ್ರಗಳನ್ನ ಕೊಟ್ಟಿರುವ ಎಂ.ಡಿ.ಶ್ರೀಧರ್ ಸದ್ಯಕ್ಕೆ ಗಣಿ ಜೊತೆಯಲ್ಲೇ 'ಬುಗುರಿ' ಆಟ ಆಡುತ್ತಿದ್ದಾರೆ. [ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ]

ಅದರ ಬೆನ್ನಲ್ಲೇ 'ಕನ್ವರ್ ಲಾಲ್' ಚಿತ್ರ ನಿರ್ದೇಶಿಸುವ ಚಾನ್ಸ್ ಸಿಕ್ಕಿದೆ ಎಂ.ಡಿ.ಶ್ರೀಧರ್ ಗೆ. ಇಷ್ಟೆಲ್ಲಾ ಸ್ಪೆಷಾಲಿಟಿಗಳಿರುವ 'ಕನ್ವರ್ ಲಾಲ್' ಚಿತ್ರವನ್ನ ಅದ್ಧೂರಿಯಾಗಿ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿರುವುದು ದಿನೇಶ್ ಗಾಂಧಿ.

Kanvarlal4

ಥ್ರಿಲ್ಲರ್ ಮಂಜು ಸಾಹಸದಲ್ಲಿ ಸೂಪರ್ ಸ್ಟಂಟ್ಸ್ ಮಾಡಲಿರುವ ಗಣಿ, 'ಕನ್ವರ್ ಲಾಲ್' ಆಗಿ ಎಲ್ಲರನ್ನ ಬಾಯಿಮುಚ್ಚಿಸುವುದು ಜನವರಿ 15 ರಿಂದ. (ಫಿಲ್ಮಿಬೀಟ್ ಕನ್ನಡ)

English summary
Now its Golden Star Ganesh's turn to become a 'Dabbang' Star! Yes, Ganesh will be seen in the remake of Bollywood movie 'Dabbang' (Telugu - Gabbar Singh). The movie is titled as 'Kanvarlal' and will go on floors by January 15th, 2015.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada