»   » ಗಣೇಶ್ 'ಮುಂಗಾರು ಮಳೆ-2'ಗೆ ಅದ್ದೂರಿ ಮುಹೂರ್ತ

ಗಣೇಶ್ 'ಮುಂಗಾರು ಮಳೆ-2'ಗೆ ಅದ್ದೂರಿ ಮುಹೂರ್ತ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಶಾಂಕ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಮುಂಗಾರು ಮಳೆ-2' ಚಿತ್ರದ ಮುಹೂರ್ತ ಇಂದು ನೆರವೇರಿದೆ.

ಇ.ಕೆ.ಪಿಕ್ಚರ್ಸ್ ಲಾಂಛನದಡಿಯಲ್ಲಿ ಜಿ.ಗಂಗಾಧರ್ ನಿರ್ಮಿಸುತ್ತಿರುವ ಚಿತ್ರ 'ಮುಂಗಾರು ಮಳೆ-2'. ಗಣೇಶ್ ಜೊತೆ ರವಿಚಂದ್ರನ್ ಅಭಿನಯಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇಂದು ರಾಜಾಜಿನಗರದ ಮೋದಿ ಸರ್ಕಲ್ ಬಳಿಯಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ['ಮುಂಗಾರು ಮಳೆ'ಯಲಿ ಗೋಲ್ಡನ್ ಸ್ಟಾರ್ ಜೊತೆಯಲಿ ಕ್ರೇಜಿ ಸ್ಟಾರ್! ]


Ganesh starrer Mungaru Male-2 goes on floors

'ಮುಂಗಾರು ಮಳೆ' ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ರೆ, ಗೋಲ್ಡ್ ಫಿಂಚ್ ಗ್ರೂಪ್ ಆಫ್ ಹೊಟೇಲ್ಸ್ ಮಾಲೀಕರಾದ ಪ್ರಕಾಶ್ ಶೆಟ್ಟಿಯವರು ಕ್ಯಾಮರಾ ಸ್ವಿಚ್ ಆನ್ ಮಾಡಿದರು. [ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ]


Ganesh starrer Mungaru Male-2 goes on floors

ಮಳೆಯ ಆರಂಭಕ್ಕಾಗಿ ಇಲ್ಲಿಯವರೆಗೂ ಕಾಯುತ್ತಿದ್ದ ಚಿತ್ರತಂಡ, ಇಂದು ಮುಹೂರ್ತ ಮುಗಿಸಿದೆ. ಜುಲೈ ಕೊನೆಯ ವಾರದಿಂದ ಚಿತ್ರೀಕರಣ ಶುರುಮಾಡಲಿದೆ. 'ಮುಂಗಾರು ಮಳೆ-2' ಅಂತ ಟೈಟಲ್ ಇಟ್ಟ ಮಾತ್ರಕ್ಕೆ, ಇದು 'ಮುಂಗಾರು ಮಳೆ' ಚಿತ್ರದ ಮುಂದುವರಿದ ಭಾಗ ಅಲ್ಲ. [ಗಣೇಶ್ 'ಮುಂಗಾರು ಮಳೆ 2'ಕ್ಕೆ ಮುಹೂರ್ತ ಫಿಕ್ಸ್]


Ganesh starrer Mungaru Male-2 goes on floors

ಆ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಖುದ್ದು ಚಿತ್ರಕಥೆ-ಸಂಭಾಷಣೆ ರಚಿಸಿ ಶಶಾಂಕ್ ನಿರ್ದೇಶಿಸುತ್ತಿರುವ ಚಿತ್ರ 'ಮುಂಗಾರು ಮಳೆ-2'. ಗಣೇಶ್ ಗೆ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಸ್ಪೆಷಾಲಿಟಿ. ಇದೀಗ ಲೊಕೇಷನ್ಸ್ ಮತ್ತು ಚಿತ್ರದ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.

English summary
Golden Star Ganesh starrer 'Mungaru Male-2' was officially launched today (June 11th) morning. Crazy Star V.Ravichandran is sharing screen space with Ganesh in 'Mungaru Male-2' directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada