Don't Miss!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೈ ಮುಂಗಾರುಮಳೆ..., ಜೈ ಜನತೆ..., ಜೈ ಜೀವನ: ಗಣಪ-ಭಟ್
ಮುಂಗಾರು ಮಳೆ......, ಅಂದಾಕ್ಷಣ ಅದ್ಭುತವಾದ ಸಾಹಿತ್ಯ, ಸುಮಧುರ ಹಾಡುಗಳು, ಒಳ್ಳೆಯ ಕಥೆ, ಬೇಸರವೇ ಬಾರದ ಸಂಭಾಷಣೆಗಳ, ಹೃದಯ ಮುಟ್ಟುವ ಅಂತ್ಯ. ಗಣೇಶ್, ಯೋಗರಾಜ್ ಭಟ್, ಪೂಜಾ ಗಾಂಧಿ, ಜಯಂತ್ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಮ್, ಶ್ರೇಯ ಗೋಷಾಲ್ ನೆನಪಾಗ್ತಾರೆ.
ಕನ್ನಡದ ಚಿತ್ರರಂಗದ ದಿಕ್ಕನ್ನು ಬದಲಿಸಿದ ಚಿತ್ರ, ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ, ಕನ್ನಡ ಚಿತ್ರರಂಗದ ಹೊಸ ಭರವಸೆಗಳನ್ನು ಮೂಡಿಸಿದ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಸ್ಟಾರ್‌ಗಳನ್ನು ನೀಡಿದ ಚಿತ್ರ ಬಿಡುಗಡೆಯಾಗಿ 14 ವರ್ಷ ಆಗಿದೆ.
ಗಣೇಶ್-ಯೋಗರಾಜ್
ಭಟ್ಟರ
'ಮುಂಗಾರು
ಮಳೆ'ಗೆ
14
ವರ್ಷ
ತುಂಬಿದ
ಸಂತಸ
ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಗಣೇಶ್ ತಮ್ಮ ಮನದಾಳದ ಮಾತನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
''ನಮಸ್ತೆ....., ನಾವಿಬ್ಬರೂ, ಜೊತೆಗೆ ಇಡೀ ತಂಡ ಆಗ ತಾನೇ ಕಣ್ತೆರದ ಶಿಶುಗಳಂತೆ 'ಮುಂಗಾರುಮಳೆ' ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ....ಚಿತ್ರಕ್ಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ...ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು....ಜೈ ಮುಂಗಾರುಮಳೆ....ಜೈ ಜನತೆ....ಜೈ ಜೀವನ...ನಿಮ್ಮವರು - ಗಣಪ-ಯೋಗ್ರಾಜ್ ಭಟ್'' ಎಂದು ಧನ್ಯವಾದ ಅರ್ಪಿಸಿದ್ದಾರೆ.
ಅಂದ್ಹಾಗೆ, 2006ರ ಡಿಸೆಂಬರ್ 29 ರಂದು ಮುಂಗಾರುಮಳೆ ಸಿನಿಮಾ ಬಿಡುಗಡೆಯಾಗಿತ್ತು. ಇ ಕೃಷ್ಣಪ್ಪ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಕೇವಲ 2 ಕೋಟಿಯಲ್ಲಿ ತಯಾರಾಗಿದ್ದ ಚಿತ್ರ 75 ಕೋಟಿಯವರೆಗೂ ಲಾಭ ಮಾಡಿದೆ ಎಂದು ಬಾಕ್ಸ್ ಆಫೀಸ್‌ನಲ್ಲಿ ವರದಿಯಾಗಿದೆ.

ಗಣೇಶ್-ಭಟ್ಟರ ಕಾಂಬಿನೇಷನ್ ಸಿನಿಮಾ
ಮುಂಗಾರುಮಳೆ ನಂತರ ಗಾಳಿಪಟ ಸಿನಿಮಾ ಮಾಡಿದ ಈ ಜೋಡಿ ಮತ್ತೊಮ್ಮೆ ಅದ್ಭುತವಾದ ಯಶಸ್ಸು ಕಂಡರು. ಬಹಳ ವರ್ಷದ ಬಳಿಕ ಮುಗುಳುನಗೆ ಎಂಬ ಚಿತ್ರ ಮಾಡಿದರು. ಈ ಗಾಳಿಪಟ 2 ಸಿನಿಮಾ ಮಾಡ್ತಿದ್ದಾರೆ.