twitter
    For Quick Alerts
    ALLOW NOTIFICATIONS  
    For Daily Alerts

    ಹದಿಹರೆಯದ ಮುಗ್ದ ಮನಸ್ಸುಗಳ ಪ್ರೀತಿ ತುಂಬಿದ 'ಗಂಟುಮೂಟೆ'

    |

    ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ಗಂಟುಮೂಟೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ನ್ಯೂಯಾರ್ಕ್ ಚಲನಚಿತ್ರೋತ್ಸವ ಪ್ರದರ್ಶನ ಕಂಡು, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

    ಶಾಲೆಯ ವಿದ್ಯಾರ್ಥಿನಿಯರ ಬದುಕನ್ನು ಹೇಳುವ ಈ ಸಿನಿಮಾ ಬಹಳ ವಿಶೇಷವಾಗಿ ಮೂಡಿಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿರುವ ರೂಪಾ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

    ನ್ಯೂಯಾರ್ಕ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಗಂಟುಮೂಟೆ'ನ್ಯೂಯಾರ್ಕ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಗಂಟುಮೂಟೆ'

    Gantumoote Movie Will Releasing On October 18th

    90ರ ದಶಕದಲ್ಲಿ ಮೂಡಿಬರುವ ಈ ಕಥೆಯಲ್ಲಿ ಕನಸುಗಳ ಮೋಡವಿದೆ, ಭ್ರಮೆಗಳ ಆಕಾಶವಿದೆ, ಪ್ರೇಮದ ಪರಿಭಾಷೆಯಿದೆ, ಒಂಟಿತನದ ಆಟವಿದೆ, ನೋಟಗಳ ಕಾಟವಿದೆ, ಕಾಡುವ ವಯಸ್ಸಿದೆ, ಜೀವನದ ಓಟವಿದೆ, ಓಟದ ಚಟವಿದೆ, ಚಟದ ಅಟ್ಟಹಾಸವನ್ನ ತುಂಬಿರುವ ಗಂಟುಮೂಟೆ ಇದು. ಪ್ರತಿಯೊಬ್ಬರ ಹೈಸ್ಕೂಲ್ ಜೀವನದಲ್ಲಿ ನಡೆದಿರುವ ಅನುಭವದ ಕಥೆ.

    ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ಗಂಟುಮೂಟೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಪ್ರವೇಶ ಮಾಡುತ್ತಿದ್ದಾರೆ. ಜೊತೆಗೆ ನಿಶ್ಚಿತಾ ಕರೋಡಿ, ಮೈನ್ಲಿ, ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

    ಸಾಲ ಮಾಡಿದ್ದೇ ನನ್ನ ಜೀವನದ ದೊಡ್ಡ ತಪ್ಪು - ಪ್ರಕಾಶ್ ಬೆಳವಾಡಿಸಾಲ ಮಾಡಿದ್ದೇ ನನ್ನ ಜೀವನದ ದೊಡ್ಡ ತಪ್ಪು - ಪ್ರಕಾಶ್ ಬೆಳವಾಡಿ

    Gantumoote Movie Will Releasing On October 18th

    ಐಟಿ ಉದ್ಯಮದಲ್ಲಿದ್ದ ರೂಪಾ ಆ ಕೆಲವನ್ನ ಬಿಟ್ಟು ಸಿನಿಮಾರಂಗದಲ್ಲಿ ತೊಡಗಿಕೊಂಡರು. ಅನೇಕ ಕಿರುಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ನಿರ್ದೇಶಕಿ ಹಾಗೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ರೂಪಾ ರಾವ್ ಅವರು ಈ ಹಿಂದೆ ಕನ್ನಡದ 'ಒನ್ಲಿ ವಿಷ್ಣುವರ್ಧನ' ಸಿನಿಮಾದಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 'ಕುರೈ ಒಂದ್ರುಂ ಇಲ್ಲೈ' ತಮಿಳು ಚಿತ್ರದಲ್ಲಿಯೂ ಸಹ ನಿರ್ದೇಶಕಿಯಾಗಿದ್ದರು. ಹಾಟ್ ಸೀಟ್ ಎಂಬ ಕನ್ನಡ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದರು. ಲೆಟ್ ಲೈವ ಸಾಕ್ಷ್ಯಚಿತ್ರವನ್ನ ಕೂಡ ನಿರ್ದೇಶನ ಮಾಡಿದ್ದರು.

    ಹಿಂದಿ ಬರದೆ ಇದ್ದ ಪ್ರಕಾಶ್ ಬೆಳವಾಡಿ ಬಾಲಿವುಡ್ ಚಿತ್ರಕ್ಕೆ ಆಯ್ಕೆ ಆಗಿದ್ದೆ ಇಂಟೆರೆಸ್ಟಿಂಗ್ಹಿಂದಿ ಬರದೆ ಇದ್ದ ಪ್ರಕಾಶ್ ಬೆಳವಾಡಿ ಬಾಲಿವುಡ್ ಚಿತ್ರಕ್ಕೆ ಆಯ್ಕೆ ಆಗಿದ್ದೆ ಇಂಟೆರೆಸ್ಟಿಂಗ್

    2016ರಲ್ಲಿ ನಡೆದ ನ್ಯೂಯಾರ್ಕ್ ವೆಬ್ ಫೆಸ್ಟ್ ನಲ್ಲಿ 'ದಿ ಅದರ್ ಲವ್ ಸ್ಟೋರಿ' ಎಂಬ ವೆಬ್ ಸೀರಿಸ್ ಚಿತ್ರಕ್ಕಾಗಿ ರೂಪಾ ರಾವ್ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದುಕೊಂಡಿದ್ದರು. ರೂಪಾ ರಾವ್ ಮತ್ತು ಸಹದೇವ್ ಕೆಲವಾಡಿ ಸೇರಿ ಅಮೆಯುಕ್ತಿ ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕಿರುವ ಅನೇಕ ಯುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನ ಕಲ್ಪಿಸಿದ್ದಾರೆ. ಸಹದೇವ್ ಕೂಡ ಬರಹಗಾರ, ಸಿನಿಮಾಟೋಗ್ರಫಿ, ನಿರ್ದೇಶಕರು ಹೌದು.

    English summary
    Kannada movie Gantumoote trailer has released. movie will release on october 18th. teju belawadi in the lead role.
    Saturday, September 28, 2019, 11:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X