Just In
Don't Miss!
- News
ಚಿತ್ರದುರ್ಗ; ಹಿರಿಯೂರಿನಲ್ಲಿ ಪ್ರತ್ಯೇಕ ಅಪಘಾತ, 3 ಸಾವು
- Sports
ಐಎಸ್ಎಲ್: ಗೋವಾದ ಜಯದ ಓಟಕ್ಕೆ ಬ್ರೇಕ್ ಹಾಕಲು ಎಟಿಕೆಎಂಬಿ ಸಜ್ಜು
- Lifestyle
ವಾರ ಭವಿಷ್ಯ: ಮೇಷ ರಾಶಿಗೆ ಅದೃಷ್ಟದ ವಾರ, ಉಳಿದ ರಾಶಿಫಲ ಹೇಗಿದೆ ನೋಡಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಯಂತ್ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ ಗಿರೀಶ್ ಕಾಸರವಳ್ಳಿ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಲು ಹೊರಟಿದ್ದಾರೆ. 2012 ರಲ್ಲಿ ಬಿಡುಗಡೆಯಾದ 'ಕೂರ್ಮಾವತಾರ' ಬಳಿಕ ಯಾವ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಶುರು ಮಾಡಿರಲಿಲ್ಲ.
ಸಾಹಿತಿ ಜಯಂತ್ ಕಾಯ್ಕಿಣಿ ಬರೆದ 'ಹಾಲಿನ ಮೀಸೆ' ಕಥೆ ಆಧರಿಸಿ ಸಿನಿಮಾ ಮಾಡುವ ತಯಾರಿಯನ್ನು ಗಿರೀಶ್ ಕಾಸರವಳ್ಳಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಹೆಸರು ಸಹ ನಿರ್ಧಾರವಾಗಿದ್ದು, 'ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ' ಎಂದು ಶೀರ್ಷಿಕೆ ಇಡಲಾಗಿದೆ.
ಕನ್ನಡ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎಂದ ನಿರ್ದೇಶಕ ಗಿರೀಶ್ ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ ಹೊಸ ಸಿನಿಮಾಗೆ ಶಿವಕುಮಾರ ಬಂಡವಾಳ ಹಾಕುತ್ತಿದ್ದಾರೆ. ಕಾಯ್ಕಿಣಿ ಅವರ ಈ ಕಥೆ ಮುಂಬೈನಲ್ಲಿ ನಡೆಯುತ್ತಿದ್ದರೂ, ಅದನ್ನು ಕನ್ನಡಕ್ಕೆ ತಕ್ಕ ಹಾಗೆ ಕೆಲವು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆಯಂತೆ.
ಸಪ್ಟೆಂಬರ್ ಎರಡನೇ ವಾರದಿಂದ 'ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ' ಚಿತ್ರದ ಚಿತ್ರೀಕರಣ ಪ್ರಾರಂಭ ಆಗುತ್ತಿದೆ. ಸದ್ಯ, ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ ಎಂ ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ಏಳಿಗೆ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತು
ಈಗಾಗಲೇ, ಕನ್ನಡದ ಖ್ಯಾತ ಕಾದಂಬರಿಗಳನ್ನು ಪರದೆ ಮೇಲೆ ತಂದ ಕೀರ್ತಿ ಪಡೆದಿರುವ ಗಿರೀಶ್ ಕಾಸರವಳ್ಳಿ, ಈಗ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ.