»   » 'ಯು-ಟರ್ನ್' ತಗೊಂಡು 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

'ಯು-ಟರ್ನ್' ತಗೊಂಡು 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

Posted By:
Subscribe to Filmibeat Kannada

'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ಎಲ್ಲಾ ಕಡೆ ಸಾಕಷ್ಟು ರೆಸ್ಪಾನ್ಸ್ ಗಳಿಸುತ್ತಿದೆ. ಕನ್ನಡದಲ್ಲಿ ಒಂದು ಅತ್ಯುತ್ತಮ ಸಿನಿಮಾ ನೀಡಿದ್ದಾರೆ ಅಂತ ವಿಮರ್ಶಕರು ಹಾಗೂ ಪ್ರೇಕ್ಷಕರು ಮಾತಾನಾಡಿಕೊಳ್ಳುವಷ್ಟರ ಮಟ್ಟಿಗೆ 'ಯು-ಟರ್ನ್' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಾ ಮುನ್ನುಗ್ಗುತ್ತಿದೆ.

ಇದೀಗ ಇಷ್ಟಕ್ಕೆ ಸುಮ್ಮನಾಗದ ನಿರ್ದೇಶಕ ಪವನ್ ಕುಮಾರ್ ಅವರು ಕನ್ನಡ ಸಿನಿ ಪ್ರೇಕ್ಷಕರಿಗೆ ಒಂದು ವಿಭಿನ್ನ ಸ್ಪರ್ಧೆ ಏರ್ಪಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದಲ್ಲಾ, ಎರಡಲ್ಲಾ ಭರ್ಜರಿ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]


'Go Take that U Turn' song Contest Win 25 thousand

ಸಾರ್ವಜನಿಕರು ಮಾಡಬೇಕಾದದ್ದು ಇಷ್ಟೇ. ಯೂಟ್ಯೂಬ್ ನಲ್ಲಿರುವ 'Go Take that U-Turn' ಎಂಬ ಇಂಗ್ಲೀಷ್ ನಲ್ಲಿರುವ ಹಾಡನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಹಾಡಿದರೆ 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಗೆಲ್ಲಬಹುದು.


ಬೆಂಗಳೂರಿನ ರ‍್ಯಾಪ್ಪರ್ ಸ್ಮೋಕಿ ಘೋಸ್ಟ್ ಮತ್ತು 'ಯು-ಟರ್ನ್' ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರು ಇಂಗ್ಲೀಷ್ ಮೂಲ ಹಾಡನ್ನು ಹಾಡಿದ್ದಾರೆ. ಈ ಇಂಗ್ಲೀಷ್ ನಲ್ಲಿರುವ ಹಾಡನ್ನು ಕನ್ನಡದಲ್ಲಿ ಸಾಹಿತ್ಯ ಬರೆದು, ಇಂಗ್ಲೀಷ್ ಹಾಡಿನಲ್ಲಿರುವಂತೆ ಮ್ಯೂಸಿಕ್ ಕಂಪೋಸ್ ಮಾಡಿ ಅದನ್ನು ಹಾಡಿ ರೆಕಾರ್ಡ್ ಮಾಡಿ 'ಯು-ಟರ್ನ್' ಚಿತ್ರದ ಪೋಸ್ಟರ್ ನೊಂದಿಗೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಬೇಕು.[ಪವನ್ ರ 'ಯು-ಟರ್ನ್' ಚಿತ್ರವನ್ನು ವಿಮರ್ಶಕರು ಮೆಚ್ಚಿಕೊಂಡ್ರಾ?]


'Go Take that U Turn' song Contest Win 25 thousand

ಕನ್ನಡ ಭಾಷೆಗೆ ತರ್ಜುಮೆ ಮಾಡಿರುವ ಯಾರ ಹಾಡು ಯೂಟ್ಯೂಬ್ ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಡುತ್ತದೋ ಆ ಹಾಡನ್ನು ಆಯ್ದು ಸಂಬಂಧಪಟ್ಟವರಿಗೆ 25 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.


ಇದೀಗ 25 ಸಾವಿರ ಗೆಲ್ಲುವ ಪ್ರತಿಭಾವಂತ ಸಂಗೀತಗಾರರು ಅದಷ್ಟು ಬೇಗನೇ ಈ ವಿಡಿಯೋ ನೋಡಿ ಇಂಗ್ಲೀಷ್ ನಲ್ಲಿರುವ ಹಾಡನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಅಪ್ ಲೋಡ್ ಮಾಡಿ. ಹಾಗು uturnthefilm@gmail.com ಇ-ಮೇಲ್ ಗೆ ಕಳುಹಿಸಿ. ಹಾಡಿನ ವಿಡಿಯೋ ಇಲ್ಲಿದೆ ನೋಡಿ...English summary
'Go Take That U TURN' is a hiphop song, composed and sung by Smokey The Ghost. Pawan Kumar directorial Kannada movie 'U Turn' team launch the song Contest and Win Rs 25 thousand.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada