»   » 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಹಿಂದಿ ರೀಮೇಕ್ ಅಧಿಕೃತ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಹಿಂದಿ ರೀಮೇಕ್ ಅಧಿಕೃತ

Posted By:
Subscribe to Filmibeat Kannada
ಹಿಂದಿಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು | Filmibeat Kannada

2016ರಲ್ಲಿ ತೆರೆಕಂಡಿದ್ದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಅಷ್ಟೇ ಬಿಸ್ ನೆಸ್ ಕೂಡ ಮಾಡಿತ್ತು. ಕನ್ನಡದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಆಗಲಿದೆ ಎನ್ನಲಾಗಿತ್ತು. ಆಗ ಅದು ಖಚಿತವಾಗಿರಲಿಲ್ಲ.

ಆದ್ರೀಗ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಹಿಂದಿ ರೀಮೇಕ್ ಸುದ್ದಿ ಖಚಿತ ಮತ್ತು ಅಧಿಕೃತವಾಗಿದೆ. ಸ್ವತಃ ರಕ್ಷಿತ್ ಶೆಟ್ಟಿ ಅವರೇ ಈ ಸುದ್ದಿಯನ್ನ ಕನ್ ಫರ್ಮ್ ಮಾಡಿದ್ದು, ಫೇಸ್ ಬುಕ್ ನಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಹಿಂದಿಯ ವಿಎಲ್ ಪ್ರಡೊಕ್ಷನ್ ಸಂಸ್ಥೆ ಈ ಚಿತ್ರದ ಹಿಂದಿ ಅವತರಣಿಕೆಯನ್ನ ಕೊಂಡುಕೊಂಡಿದೆ. ಇನ್ನುಳಿದಂತೆ ಈ ಚಿತ್ರದಲ್ಲಿ ಯಾರು ಯಾರು ಅಭಿನಯಿಸಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

 Godhi Banna Sadharna Mykattu will remake in bollywood

ಇದಕ್ಕೂ ಮೊದಲು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ತಮಿಳು ಮತ್ತು ತೆಲುಗು ಹಕ್ಕು ನಟ ಪ್ರಕಾಶ್ ರೈ ಖರೀದಿಸಿದ್ದಾರೆ ಎನ್ನಲಾಗಿದ್ದು, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ರೆ, ಅಲ್ಲಿಯೂ ನಾನೇ ರೀಮೇಕ್ ಮಾಡುತ್ತೇನೆ ಎಂದಿದ್ದರಂತೆ. ಆದ್ರೀಗ, ವಿಎಲ್ ಪ್ರಡೊಕ್ಷನ್ ರೀಮೇಕ್ ಹಕ್ಕು ಖರೀದಿಸಿದೆ.

ಹೇಮಂತ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ, ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದರು.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಕಥೆ ಏನು.?
ಸಾಫ್ಟ್‌ವೇರ್ ಉದ್ಯೋಗಿ ಶಿವ (ರಕ್ಷಿತ್ ಶೆಟ್ಟಿ) ಕೆಲಸದ ಸಲುವಾಗಿ ಶಿವ ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಆಗ ತನ್ನ ತಂದೆಯನ್ನು ವೃದ್ಧಾಶ್ರಮವೊಂದರಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ವೆಂಕೋಬ ರಾವ್ (ಅನಂತ್ ನಾಗ್) ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಅದೇ ವೃದ್ಧಾಶ್ರಮದ ವೈದ್ಯೆ ಡಾ. ಸಹನಾ (ಶ್ರುತಿ ಹರಿಹರನ್) ಮತ್ತು ಶಿವ ಇಬ್ಬರೂ ವೆಂಕೋಬ ರಾವ್‌ ಅವರನ್ನು ಹುಡುಕು ಪ್ರಯತ್ನ ಮಾಡುತ್ತಾರೆ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಚಿತ್ರ ಸಾಗುತ್ತದೆ.

English summary
Kannada super hit movie 'Godhi Banna Sadharna Mykattu' will remade in hindi says actor rakshith shetty. Earlier Actor-producer Prakash Rai had announced that he is remaking the movie in Tamil and Telugu. Now the film's Hindi rights have been taken by Bollywood top producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X