For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಐಸೂ-ಮಾದೇಶ ಜೋಡಿಗೊಂದು ಸವಾಲ್

  By ಜೀವನರಸಿಕ
  |

  'ಚೆಲುವಿನ ಚಿತ್ತಾರ'ದಲ್ಲಿ ಚಿತ್ರಪ್ರೇಮಿಗಳ ಮನಸ್ಸಲ್ಲಿ ಚೆಲುವಿನ ಚಿತ್ತಾರ ಬಿಡಿಸಿ ಗೆಲುವಿನ ಟ್ರ್ಯಾಕ್ ಏರಿದ ಜೋಡಿ ಮತ್ತೊಂದು ಭರ್ಜರಿ ಯಶಸ್ಸನ್ನೂ ದಾಖಲಿಸಿದೆ. ಅದು 'ಶ್ರಾವಣಿ ಸುಬ್ರಹ್ಮಣ್ಯ'. ಒಂದ್ಸಾರಿ ಗೆದ್ರೂ ಅಂತ ಪದೇ ಪದೇ ಒಂದೇ ಜೋಡಿ ಕಾಣಿಸ್ಕೊಂಡ್ರೆ ಗೆಲ್ಬಹುದು ಅನ್ನೋದು ಮೂರ್ಖತನ ಅಂತ ಗಾಂಧಿನಗರ ವಾದಿಸಿತ್ತು.

  ಆದರೆ ಗಣೇಶ್ ಅದೃಷ್ಟವೋ ಅಮೂಲ್ಯಾ ಪುಣ್ಯಾನೋ ಈ ಎರಡೂ ಸ್ಟಾರ್ ಗಳಿಗೆ ಬೇಕೇ ಬೇಕು ಅನ್ತಿದ್ದ ಬ್ರೇಕ್ 'ಶ್ರಾವಣಿ ಸುಬ್ರಹ್ಮಣ್ಯ'ದಲ್ಲಿ ಸಿಕ್ತು. ಚೆಲುವಿನ ಚಿತ್ತಾರದಲ್ಲಿ ಒಂದು ತರಹದ ಮುಗ್ಧ ಪ್ರೀತಿಯನ್ನ ಅನುಭವಿಸಿದ್ದ ಸಿನಿಪ್ರಿಯರು ಶ್ರಾವಣಿ ಸುಬ್ಬುವಿನ ಕಥೆಯನ್ನ ಕೂಡ ಮನಸ್ಸಿಟ್ಟು ಕೇಳಿದ್ರು, ನೋಡಿದ್ರು. ಆದ್ರೆ ಈ ಜೋಡಿಗೆ ಈಗ ಇರೋದು ನಿಜವಾದ ಸವಾಲ್. [ಶ್ರಾವಣಿ ಸುಬ್ರಮಣ್ಯ ವಿಮರ್ಶೆ]

  ಸ್ಯಾಂಡಲ್ ವುಡ್ ನಲ್ಲಿರೋ ಯಶಸ್ವಿ ಜೋಡಿಗಳಾದ ರಾಜ್-ಭಾರತಿ, ವಿಷ್ಣು-ಸುಹಾಸಿನಿ, ಅನಂತನಾಗ್-ಲಕ್ಷ್ಮಿ ಜೋಡಿಯ ಹಾಗೆ ಸೂಪರ್ ಜೋಡಿ ಅನ್ನಿಸಿಕೊಳ್ಬೇಕು ಅಂದ್ರೆ ಮೂರನೇ ಚಿತ್ರ 'ಖುಷಿ ಖುಷಿಯಾಗಿ' ಗೆಲ್ಲಬೇಕು. ಇದು ತೆಲುಗಿನ 'ಗುಂಡೆ ಜಾರಿ ಗಲ್ಲಂತಯಿಂದಿ' ಚಿತ್ರದ ರೀಮೇಕ್.

  ಆ ಚಿತ್ರ ಯಶಸ್ವಿಯಾದರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಇನ್ನೋಸೆಂಟ್ ಅಮೂಲ್ಯಾ ಜೋಡಿ ಹಿಟ್ ಜೋಡಿಯ ಸಾಲಿಗೆ ಮತ್ತೊಂದು ಸೇರ್ಪಡೆಯಾಗುತ್ತೆ. ಅಂದಹಾಗೆ ಇದು 'ದಿಲ್ ರಂಗೀಲಾ' ಸಿನಿಮಾದಲ್ಲಿ ಪ್ರೀತಂ ಗುಬ್ಬಿಯವರಿಗೆ ಅಸೋಸಿಯೇಟ್ ಆಗಿದ್ದ ಯೋಗಿ ಡೈರೆಕ್ಷನ್ ಸಿನಿಮಾ.

  English summary
  Golden Star Ganesh and Amoolya has teamed up once again after 'Cheluvina Chittara' and 'Shravani Subramanya'. This time they are acting together in a new film called 'Khushi Khushiyagi'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X